‘ತಗಡು’ ಇಂಗ್ಲೆಂಡ್‌ಗೆ ಗುಮ್ಮಿದ ಭಾರತ ತಂಡ: ಆಂಗ್ಲರು ಮನೆ ಕಡೆಗೆ, ಭಾರತ ಫೈನಲ್‌ಗೆ!
ಭಾರತ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ, 2022ರ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ ಮೂಲಕ ಹೊಸ ಯುಗ ಆರಂಭ ಮಾಡಿರುವ ಭಾರತೀಯ ಕ್ರಿಕೆಟ್ ತಂಡ ಇದೀಗ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಈ ಸಮಯದಲ್ಲೇ ಸೋಷಿಯಲ್ ಮೀಡಿಯಾ ಪೂರ್ತಿ ಇಂಗ್ಲೆಂಡ್ ಬಗ್ಗೆ ಜನ ಟ್ರೋಲ್ ಮಾಡ್ತಾ ನಗುತ್ತಿದ್ದಾರೆ.
2007 ರಲ್ಲಿ ಶುರು ಆಗಿದ್ದ 'ಟಿ20 ವಿಶ್ವಕಪ್' ಅಖಾಡದಲ್ಲಿ ಭಾರತ ಗೆದ್ದು ಬೀಗಿತ್ತು. ಈ ಮೂಲಕ ಮೊಟ್ಟ ಮೊದಲ 'ಟಿ20 ವಿಶ್ವಕಪ್ ಟ್ರೋಫಿ' ಗೆದ್ದ ತಂಡ ಎಂಬ ಹೆಮ್ಮೆಯೂ ಭಾರತ ತಂಡಕ್ಕೆ ಸಲ್ಲುತ್ತದೆ. ಆದರೆ ಅದು ಯಾಕೋ, ಏನೋ 2007 ರಲ್ಲಿ ಮೊದಲನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ಈವರೆಗೂ ಅಂದ್ರೆ ಸುಮಾರು 14 ವರ್ಷ ಕಾಲ ಮತ್ತೆ ಟಿ20 ವಿಶ್ವಕಪ್ ಗೆದ್ದಿಲ್ಲ.

ರೋಹಿತ್ ಶರ್ಮಾ ಕಪ್ ತರ್ತಾರಾ?
ಧೋನಿ ನೇತೃತ್ವದಲ್ಲಿ ಮಾತ್ರ ಭಾರತ ಈವರೆಗೂ ಟಿ20 ವಿಶ್ವಕಪ್ ಟ್ರೋಫಿಯನ್ನ ಗೆದ್ದಿದೆ. ಆದರೆ ಈಗ ಮತ್ತೆ ಸುವರ್ಣಾವಕಾಶ ಬಂದಿದೆ. ಭಾರತ ಇದೀಗ ಇಂಗ್ಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಿ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಇದೀಗ ದಕ್ಷಿಣ ಆಫ್ರಿಕಾತ ತಂಡವನ್ನು ಮಣಿಸಿ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ಹಾಗಾದ್ರೆ ಭಾರತೀಯರು ಈ ಇಂಗ್ಲೆಂಡ್ ತಂಡದ ಸೋಲಿನ ಬಗ್ಗೆ ಏನ್ ಹೇಳ್ತಿದ್ದಾರೆ ಗೊತ್ತಾ?
'ತಗಡು' ಇಂಗ್ಲೆಂಡ್‌ಗೆ ಗುಮ್ಮಿದ ಭಾರತ!
ಸೋಷಿಯಲ್ ಮೀಡಿಯಾ ಪೂರ್ತಿ ಇಂಗ್ಲೆಂಡ್ & ಇಂಡಿಯಾ ಪಂದ್ಯದ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಅದರಲ್ಲೂ, 'ತಗಡು ಇಂಗ್ಲೆಂಡ್‌ಗೆ ಗುಮ್ಮಿದ ಭಾರತ. ಆಂಗ್ಲರು ಮನೆ ಕಡೆಗೆ, ಭಾರತ ಫೈನಲ್‌ಗೆ!' ಅಂತಾ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಈಗ ಹೇಳುತ್ತಿದ್ದಾರೆ. ಈ ಬಗ್ಗೆ ಟ್ರೋಲ್ & ರೋಸ್ಟ್ ಬಲು ಜೋರಾಗಿದೆ. ಹಾಗೇ 2022 ರಲ್ಲಿ ಭಾರತ ತಂಡವನ್ನು ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೋಲಿಸಿದ್ದ ಆಂಗ್ಲರ ತಂಡ 2024 ರಲ್ಲಿ ಹೀನಾಯ ಸೋಲು ಕಂಡು ಮನೆ ಕಡೆಗೆ ಹೊರಟು ನಿಂತಿದೆ.
ಹೇಗೆ ಸೋತಿತ್ತು ಭಾರತ ತಂಡ?
2022 ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವೇ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತ್ತು. ಆದರೂ ಇಂಗ್ಲೆಂಡ್ ತಂಡ ಈ ಗುರಿಯನ್ನ ಕೇವಲ 16 ಓವರ್‌ಗೆ ತಲುಪಿತ್ತು. ಯಾವುದೇ ವಿಕೆಟ್ ನಷ್ಟವಿಲ್ಲದೆ 16 ಓವರ್‌ನಲ್ಲಿ ಇಂಗ್ಲೆಂಡ್ 170 ರನ್ ಗಳಿಸಿತ್ತು. ಈ ಮೂಲಕ ಭಾರತ ವಿರುದ್ಧ ಇಂಗ್ಲೆಂಡ್ 10 ವಿಕೆಟ್ ಗೆಲುವು ದಾಖಲಿಸಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಂಡಿರುವ ನಮ್ಮ ಭಾರತ ತಂಡ, ಬರೋಬ್ಬರಿ 68 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.












Click it and Unblock the Notifications