WPL 2025: ಆರ್‌ಸಿಬಿ ಖರೀದಿ ಮಾಡಬಹುದಾದ ಆಟಗಾರರು
ಮಹಿಳಾ ಪ್ರೀಮಿಯರ್ ಲೀಗ್ 2025ರ ಹರಾಜಿಗೆ ಕ್ಷಣಗಣಗೆ ಆರಂಭವಾಗಿದೆ. 120 ಆಟಗಾರರು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಾ ತಂಡಗಳಿಂದ ಒಟ್ಟು 19 ಆಟಗಾರರನ್ನು ಮಾತ್ರ ಅವಕಾಶವಿದ್ದು, ಇದರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎನ್ನುವ ಕುತೂಹಲವಿದೆ. 2024ರ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.
2025ರ ಹರಾಜಿಗೆ ಮುನ್ನ ಆರ್ ಸಿಬಿ 6 ಆಟಗಾರನ್ನು ಬಿಡುಗಡೆ ಮಾಡಿದ್ದು, ಉಳಿದ ಆಟಗಾರರನ್ನು ಉಳಿಸಿಕೊಂಡಿದೆ. ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ಬದಲಾವಣೆ ಮಾಡುವ ಅಗತ್ಯವಿಲ್ಲದೇ ಇದ್ದರೂ ಬೆಂಚ್ ಬಲ ಹೆಚ್ಚಿಸಿಕೊಳ್ಳಲು ಪ್ರಮುಖ ಆಟಗಾರರನ್ನು ಖರೀದಿ ಮಾಡಬಹುದು.

ಆರ್ ಸಿಬಿ ಬಿಡುಗಡೆ ಮಾಡಿದ ಆಟಗಾರರು
ದಿಶಾ ಕಸತ್, ಇಂದ್ರಾಣಿ ರಾಯ್, ನಡಿನ್ ಡಿ ಕ್ಲರ್ಕ್, ಶ್ರದ್ಧಾ ಪೋಕರ್ಕರ್, ಸಿಮ್ರಾನ್ ಬಹದ್ದೂರ್, ಶುಭಾ ಸತೀಶ್‌ರನ್ನು ಬಿಡುಗಡೆ ಮಾಡಿದೆ. ಇಂಗ್ಲೆಂಡ್ ಆಟಗಾರ್ತಿ ಡ್ಯಾನಿ ವ್ಯಾಟ್‌ರನ್ನು ಯುಪಿ ವಾರಿಯರ್ಸ್ ತಂಡದಿಂದ ವ್ಯಾಪಾರ ಮಾಡಿದೆ. ಆರ್ ಸಿಬಿ 4 ಆಟಗಾರರನ್ನು ಖರೀದಿ ಮಾಡಲು ಅವಕಾಶವಿದ್ದು ಭಾರತೀಯ ಆಟಗಾರರನ್ನು ಮಾತ್ರ ಖರೀದಿಸಲು ಅವಕಾಶವಿದೆ.
ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ
ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್ ಕೀಪರ್), ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೇರ್‌ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡ್ಯಾನಿ ವ್ಯಾಟ್.
ಆರ್ ಸಿಬಿ 3.25 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು, 4 ಆಟಗಾರರ ಮೇಲೆ ಬಿಡ್ ಮಾಡಲಿದ್ದು, ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿದೆ. ಎಲ್ಲಿಸ್ ಪೆರ್‍ರಿ ಮತ್ತು ಸೋಫಿ ಡಿವೈನ್ ಮೇಲೆ ಬೌಲಿಂಗ್ ಒತ್ತಡ ಕಡಿಮೆ ಮಾಡಲು ಉತ್ತಮ ವೇಗಿಗಳ ಮೇಲೆ ಆರ್ ಸಿಬಿ ಕಣ್ಣಿಟ್ಟಿದೆ. ರೇಣುಕಾಸಿಂಗ್ ಠಾಕೂರ್ ಉತ್ತಮ ಬೌಲರ್ ಆಗಿದ್ದರೂ ಅವರಿಗೆ ಜೊತೆಯಾಗಲು ಮತ್ತೊಬ್ಬರು ವೇಗಿಯ ಅಗತ್ಯವಿದೆ.
ಅಂಡರ್ 19 ಟಿ20 ವಿಶ್ವಕಪ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಎಸ್ ಯಶಸ್ರಿ ಅಥವಾ ಫಲಕ್ ನಾಜ್ ಮೇಲೆ ಆರ್ ಸಿಬಿ ಕಣ್ಣಿಟ್ಟಿರಬಹುದು. ಬಂಗಾಳದ ತನುಶ್ರೀ ಸರ್ಕಾರ್, ಮುಂಬೈನ ವೇಗದ ಬೌಲರ್ ಜಾಗ್ರವಿ ಪವಾರ್ ಹಿರಿಯ ಆಟಗಾರ್ತಿ ಸ್ನೇಹ್ ರಾಣಾ ಕೂಡ ಆರ್ ಸಿಬಿಗೆ ಉತ್ತಮ ಆಯ್ಕೆಯಾಗಿದ್ದಾರೆ.












Click it and Unblock the Notifications