T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ₹125 ಕೋಟಿ ಬಹುಮಾನ ಘೋಷಿಸಿದ ಜಯ್ ಶಾ

ಬಾರ್ಬಡೋಸ್‌ನಲ್ಲಿ ನಡೆದ 2024 ರ ಟಿ 20 ವಿಶ್ವಕಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಗೆಲುವು ಸಾಧಿಸಿದ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ ಗೆದ್ದುಕೊಂಡಿದೆ. ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಈಗ ಕೋಟಿ ಕೋಟಿ ಹಣ ಸಿಗಲಿದೆ.

ಗೆಲುವಿನ ಸಂಭ್ರಮದಲ್ಲಿರುವ ಭಾರತ ತಂಡದ ಆಟಗಾರರಿಗೆ ಜಾಕ್‌ಪಾಟ್ ಹೊಡೆದಿದೆ. ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಬರೋಬ್ಬರಿ 125 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

Team India Receives Record Rs 125 Crore Reward for T20 World Cup 2024 Win

ಆಟಗಾರರು, ಕೋಚಿಂಗ್ ಸಿಬ್ಬಂದಿ ಮತ್ತು ಅಮೂಲ್ಯ ಸಹಾಯಕ ಸಿಬ್ಬಂದಿ ಸೇರಿದಂತೆ ಇಡೀ ತಂಡಕ್ಕೆ 125 ಕೋಟಿ ರೂಪಾಯಿಗಳನ್ನು ವಿತರಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.

ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಐಸಿಸಿ $2.45 ಮಿಲಿಯನ್ (ಅಂದಾಜು 20.42 ಕೋಟಿ ರೂಪಾಯಿಗಳು) ನೀಡುತ್ತದೆ. ಅದರ ಜೊತೆ ಈಗ ಬಿಸಿಸಿಐ ಕೋಟಿ ಕೋಟಿ ಬಹುಮಾನ ಘೋಷಣೆ ಮಾಡಿದೆ.

ಭಾರತದ ಆಟಕ್ಕೆ ಜಯ್‌ಶಾ ಶ್ಲಾಘನೆ

ತಂಡದ ಅಸಾಧಾರಣ ಪ್ರದರ್ಶನವನ್ನು ಶ್ಲಾಘಿಸಿದ ಜಯ್ ಶಾ, ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವದಲ್ಲಿ, ಈ ತಂಡವು ಗಮನಾರ್ಹವಾದ ಸಾಧನೆ ಮಾಡಿದೆ. ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಾವಳಿಯನ್ನು ಅಜೇಯವಾಗಿ ಗೆದ್ದ ಮೊದಲ ತಂಡವಾಗಿದೆ. ಅಮೋಘ ಪ್ರದರ್ಶನ ನೀಡುವ ಮೂಲಕ ಟೀಕಿಸಿದವರ ಬಾಯಿ ಮುಚ್ಚಿಸಿದ್ದಾರೆ. ಅವರು ಶ್ರೇಷ್ಠ ಸಾಲಿಗೆ ಸೇರುತ್ತಾರೆ, ತಂಡದ ಸಾಧನೆ ಎಲ್ಲಾ ಭಾರತೀಯರಿಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.

ತಂಡದ ಸಮರ್ಪಣೆ ಮತ್ತು ಅಚಲ ಮನೋಭಾವದ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಆಟಗಾರರ ಕೊಡುಗೆಗಳನ್ನು ಶ್ಲಾಘಿಸಿದರು.

ಜಯ್ ಶಾ ನಂಬಿಕೆ ಉಳಿಸಿಕೊಂಡ ರೋಹಿತ್

ಫೆಬ್ರವರಿ 14 ರಂದು, ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಸ್‌ಸಿಎ) ಸ್ಟೇಡಿಯಂ ಅನ್ನು ನಿರಂಜನ್ ಶಾ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿದರು. ಏಕದಿನ ವಿಶ್ವಕಪ್ ಸೋಲಿನ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮೊದಲ ಬಾರಿ ಮಾತನಾಡಿದ್ದರು.

ಎಲ್ಲರೂ ವಿಶ್ವಕಪ್ ಕುರಿತು ನನ್ನ ಹೇಳಿಕೆಗಾಗಿ ಕಾಯುತ್ತಿದ್ದಾರೆ. 2023 ರಲ್ಲಿ ಭಾರತವು 10 ಪಂದ್ಯಗಳನ್ನು ನೇರವಾಗಿ ಗೆದ್ದ ನಂತರ ವಿಶ್ವಕಪ್ ಗೆಲ್ಲಲಿಲ್ಲ, ಆದರೆ ನಾವು ಹೃದಯವನ್ನು ಗೆದ್ದಿದ್ದೇವೆ ಎಂದಿದ್ದರು.

2024 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು ಬಾರ್ಬಡೋಸ್‌ನಲ್ಲಿ ಟಿ 20 ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ನಂಬಿದ್ದೇನೆ ಎಂದು ಘೋಷಣೆ ಮಾಡುವ ಮೂಲಕ ರೋಹಿತ್ ಶರ್ಮಾ ಅವರ ಮೇಲೆ ಭರವಸೆ ಇಟ್ಟಿದ್ದರು.

ಭಾರತ ತಂಡ ಜಯ್‌ ಶಾ ಭರವಸೆಯನ್ನು ಉಳಿಸಿಕೊಂಡಿತು. 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಇಡೀ ಪಂದ್ಯಾವಳಿಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗದ ವಿರಾಟ್ ಕೊಹ್ಲಿ, ಫೈನಲ್‌ನಲ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿ ಭಾರತ ತಂಡಕ್ಕೆ ನೆರವಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+