U-19 Asia Cup 2026: ಪಾಕ್ ವಿರುದ್ಧ ಕಣಕ್ಕಿಳಿಯಲಿದ್ದಾರಾ ಕನ್ನಡಿಗ ರಾಹುಲ್ ದ್ರಾವಿಡ್, ಸೆಹ್ವಾಗ್ ಪುತ್ರರು? ಇಲ್ಲಿದೆ ವಿವರ

U-19 Asia Cup 2026: ಒಮಾನ್‌ನಲ್ಲಿ ಅಂಡರ್-19 ಏಷ್ಯಾ ಕಪ್ ಪಂದ್ಯಾವಳಿ ನಡೆಯಲಿದೆ. ಈ ವೇಳೆ ಟೀಮ್ ಇಂಡಿಯಾ ಕ್ರಿಕೆಟ್‌ನ ಇಬ್ಬರು ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರರು ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಒಂದೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ ಕನ್ನಡಿ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಸಂಪೂರ್ಣ ಭಿನ್ನ ಶೈಲಿಯ ಬ್ಯಾಟರ್‌ಗಳಾಗಿದ್ದರು. ಸೆಹ್ವಾಗ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರಾಗಿದ್ದರೆ, ದ್ರಾವಿಡ್ ತಾಳ್ಮೆಯಿಂದ ಆಟ ಆಡಿ ಎದುರಾಳಿಗಳ ಬೌಲರ್‌ಗಳ ಬೆವರಿಳಿಸುತ್ತಿದ್ದರು. ಈಗ ಅವರ ಪುತ್ರರಾದ ಆರ್ಯವೀರ್ ಸೆಹ್ವಾಗ್ ಹಾಗೂ ಅನ್ವಯ್ ದ್ರಾವಿಡ್ ಭಾರತದ ಅಂಡರ್-19 ಕ್ರಿಕೆಟ್ ತಂಡದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

Team India Cricket Legends Rahul Dravid and Sehwag s Sons May Face Pakistan in U-19 Asia Cup 2026

ನವೆಂಬರ್ 5ರಿಂದ ಅಂಡರ್-19 ಏಷ್ಯಾಕಪ್ ಪಂದ್ಯ ಆರಂಭ

ನವೆಂಬರ್ 5 ರಿಂದ 14ರ ವರೆಗೆ ಒಮಾನ್‌ನಲ್ಲಿ ಅಂಡರ್-19 ಏಷ್ಯಾ ಕಪ್ ಪಂದ್ಯಾವಳಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು 'ಎ' ಗುಂಪಿನಲ್ಲಿ ಜಂಟಿಯಾಗಿ ಸ್ಥಾನ ಪಡೆದಿದ್ದು, ಯುಎಇ ಮತ್ತು ನೇಪಾಳ ತಂಡಗಳೂ ಇದೇ ಗುಂಪಿನಲ್ಲಿವೆ.

ನವೆಂಬರ್ 8ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಮಹತ್ವದ ಲೀಗ್ ಪಂದ್ಯ ನಡೆಯಲಿದೆ. ಅಂತಿಮ ಭಾರತೀಯ ತಂಡದ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದ್ದರೂ, ಈ ಇಬ್ಬರು ಉದಯೋನ್ಮುಖ ಆಟಗಾರರು ತಂಡದಲ್ಲಿ ಜಾಗ ಪಡೆಯುವ ರೇಸ್‌ನಲ್ಲಿದ್ದಾರೆ. ಈ ಇಬ್ಬರೂ ಈಗಾಗಲೇ ಅಂಡರ್-19 ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ಆರ್ಯವೀರ್, ಅನ್ವಯ್ ಪ್ರದರ್ಶನ

* ಆರ್ಯವೀರ್ ಸೆಹ್ವಾಗ್: ಆರಂಭಿಕ ಬ್ಯಾಟರ್ ಆಗಿರುವ ಆರ್ಯವೀರ್, ಕೂಚ್ ಬಿಹಾರ್ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ 297 ರನ್ ಬಾರಿಸಿ ಗಮನ ಸೆಳೆದಿದ್ದರು.

* ಅನ್ವಯ್ ದ್ರಾವಿಡ್: ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಅನ್ವಯ್, ಶ್ರೀಲಂಕಾ ಅಂಡರ್-19 ತಂಡದ ವಿರುದ್ಧ 87 ರನ್ ಗಳಿಸಿ ಗಮನ ಸೆಳೆದಿದ್ದರು. ಇನ್ನೂ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಯೂತ್ ಏಕದಿನ ಸರಣಿಯಲ್ಲೂ ಈ ಇಬ್ಬರೂ ಭಾರತ ತಂಡದ ಭಾಗವಾಗಿದ್ದರು.

ಕಳೆದ ವರ್ಷ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡವು ಭಾರತವನ್ನು ಮಣಿಸಿತ್ತು. ಹೀಗಾಗಿ ಈ ಬಾರಿಯ ಪಂದ್ಯ ಭಾರತಕ್ಕೆ ಸೇಡಿನ ಪಂದ್ಯವೂ ಹೌದು. ದ್ರಾವಿಡ್ ಮತ್ತು ಸೆಹ್ವಾಗ್ ಬ್ಯಾಟಿಂಗ್ ಜೋಡಿಯನ್ನು ನೋಡಿ ಬೆಳೆದ ಕ್ರಿಕೆಟ್ ಅಭಿಮಾನಿಗಳಿಗೆ, ಅವರ ಪುತ್ರರು ಅದೇ ರೀತಿ ಜೊತೆಯಾಗಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಅಂಡರ್-19 ಏಷ್ಯಾಕಪ್‌ ಟೂರ್ನಿಯ 2026ರ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ನವೆಂಬರ್ 8ರಂದು ಕಾದಾಡಲಿವೆ. ನವೆಂಬರ್ 5 ರಿಂದ 14 ರವರೆಗೆ ಒಮಾನ್‌ನಲ್ಲಿ ಪಂದ್ಯಾವಳಿ ನಡೆಯಲಿದ್ದು, ಇದರಲ್ಲಿ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಪಂದ್ಯಗಳು ಮಸ್ಕಟ್‌ನ ಅಲ್ ಅಮೆರಾಟ್‌ನಲ್ಲಿರುವ ಒಮಾನ್ ಕ್ರಿಕೆಟ್ ಅಕಾಡೆಮಿ ಗ್ರೌಂಡ್ 1 ಮತ್ತು ಒಮಾನ್ ಕ್ರಿಕೆಟ್ ಗ್ರೌಂಡ್ 2ರಲ್ಲಿ ನಡೆಯಲಿವೆ.

50 ಓವರ್‌ಗಳ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ. ಕಳೆದ ವರ್ಷ ದುಬೈನಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವು ಭಾರತವನ್ನು 191 ರನ್‌ಗಳಿಂದ ಸೋಲಿಸಿತ್ತು. ನಂತರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿ ಪಾಕ್‌ ಹೊರಹಾಕಿ ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿತ್ತು

ಅಂಡರ್ 19 ಏಷ್ಯಾಕಪ್ 2026ರ ತಂಡಗಳು

* ಗುಂಪು A: ಭಾರತ, ಪಾಕಿಸ್ತಾನ, ಯುಎಇ, ನೇಪಾಳ

* ಗುಂಪು B: ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ಮಲೇಷ್ಯಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+