T20 World Cup: ಆ ಕೊನೆ ಮೂರು ಓವರ್: ಟೀಮ್ ಇಂಡಿಯಾ ಮಾಡಿದ ಪ್ಲ್ಯಾನ್ ಏನು?
ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೊಗಸಾದ ಜಯ ಸಾಧಿಸಿ ಅಬ್ಬರಿಸಿದೆ. ಈ ಮೂಲಕ ಟೀಮ್ ಇಂಡಿಯಾ 11 ವರ್ಷಗಳ ಬಳಿಕ ಟೀಮ್ ಇಂಡಿಯಾ ಐಸಿಸಿ ಟ್ರೋಫಿಯನ್ನು ಪಡೆದು ಅರ್ಭಟಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಹಂತದಲ್ಲಿ ಸೋಲಿನ ಹಂತದಲ್ಲಿ ಮುಳಗಿದ್ದ ತಂಡಕ್ಕೆ ನೆರವಾಗಿದ್ದು, ಆ ಡೆತ್ ಓವರ್ ನಿಜಕ್ಕೂ ಯಾರು ಬೌಲಿಂಗ್ ಮಾಡಬೇಕು ಎಂಬುದು ನಿಜಕ್ಕೂ ಕನ್ಫೂಷನ್ ಇತ್ತು. ಈ ವೇಳೆ ಟೀಮ್ ಇಂಡಿಯಾ ಮಾಡಿಕೊಂಡ ಮಾಸ್ಟರ್ ಪ್ಲ್ಯಾನ್ ವರ್ಕ್ ಔಟ್ ಆಯಿತು. ಲೆಕ್ಕಾಚಾರದ ಪ್ರಕಾರ ಈ ಓವರ್ ಬೇರೆಯವರಿಗೆ ನೀಡಬೇಕಿತ್ತು. ಆದರೆ ಟೀಮ್ ಇಂಡಿಯಾ ಆಟಗಾರರು ಮಾಡಿದ ಆ ಪ್ಲ್ಯಾನ್ ನಿಜಕ್ಕೂ ಕೈ ಹಿಡಿದಿದೆ.

18 ರನ್‌ಗಳಿಗೆ 22 ರನ್‌ಗಳು ಬೇಕಿತ್ತು. ಆಗ ಎಲ್ಲರೂ ದಕ್ಷಿಣ ಆಫ್ರಿಕಾ ತಂಡ ಗೆಲ್ಲುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ನಾಯಕ ರೋಹಿತ್ ಶರ್ಮಾ ಅವರು ಮಾಡಿದ ಆ ಓಂದು ಪ್ಲ್ಯಾನ್ ಕೈ ಹಿಡಿಯಿತು. ಮೂರು ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾಗೆ ಗೆಲ್ಲಲು ಇನ್ನು 22 ರನ್ ಬೇಕಿತ್ತು. ಈ ಹಂತದಲ್ಲಿ ಯಾವಾಗಲೂ ಜಸ್ಪ್ರಿತ್ ಬುಮ್ರಾ ಓವರ್ ಮಾಡಿರಲಿಲ್ಲ. ಅದರಲ್ಲೂ ಅದೇ ಅದು ಅವರ ಇನ್ನಿಂಗ್ಸ್‌ನ ಕೊನೆಯ ಓವರ್.
ಟೀಮ್ ಇಂಡಿಯಾ ಮಾಡಿದ ಪ್ಲ್ಯಾನ್ ಏನು?
18ನೇ ಓವರ್‌ನಲ್ಲಿ ಅಮೋಘ ಬೌಲಿಂಗ್ ಬೌಲಿಂಗ್ ಮಾಡಿದ ಜಸ್ಪ್ರಿತ್ ಬುಮ್ರಾ ಹಿರೋ ರೀತಿ ಮಿಂಚಿದರು. ಭರ್ಜರಿ ಲೈನ್ ಹಾಗೂ ಲೆಂಥ್‌ನಲ್ಲಿ ಬೌಲಿಂಗ್ ಮಾಡಿದ ಬುಮ್ರಾ ಅಬ್ಬರಿಸಿದರು. 18ನೇ ಓವರ್‌ನಲ್ಲಿ ಕೇವರ 2 ರನ್ ನೀಡಿ ಒಂದು ವಿಕೆಟ್ ಪಡೆದರು.
ಅನ್‌ಅರ್ಥಡಾಕ್ಸ್ ಬೌಲಿಂಗ್ ಶೈಲಿಯನ್ನು ಹೊಂದಿರುವ ಬುಮ್ರಾ ಅವರ ಬೌಲಿಂಗ್ ಆಕ್ಷನ್ ಎದುರಿಸಲು ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ವಿಫಲರಾದರು. ಬುಮ್ರಾ ಅವರ ಕರಾರುವಕ್ ದಾಳಿಗೆ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕಲು ಪರದಾಡಿದರು. ಟೀಮ್ ಇಂಡಿಯಾದ ಎಕ್ಸ್ ಫ್ಯಾಕ್ಟರಿ ಎಂದೇ ಕರಿಸಿಕೊಳ್ಳುವ ಜಸ್ಪ್ರಿತ್ ಬುಮ್ರಾ ಅದ್ಭುತ್ ದಾಳಿ ಸಂಘಟಿಸಿದರು.
ಬುಮ್ರಾ ಮ್ಯಾಜಿಕ್
ಟೀಮ್ ಇಂಡಿಯಾಕ್ಕೆ ಅವಶ್ಯಕ ಇದ್ದಾಗಲೆಲ್ಲಾ ಬೌಲಿಂಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಜಸ್ಪ್ರಿತ್ ಬುಮ್ರಾ, ನಿಜಕ್ಕೂ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ತಮ್ಮ ನಾಲ್ಕು ಓವರ್‌ಗಳಲ್ಲಿ 18 ರನ್ ನೀಡಿದ ಬುಮ್ರಾ ಮುಖ್ಯ ಎರಡು ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳನ್ನು ಕಾಡಿದರು.

ನಿಜಕ್ಕೂ 18ನೇ ಓವರ್ ಬುಮ್ರಾ ಮಾಡಬೇಕಾ ಅಥವಾ ಬೇರೆಯವರು ಮಾಡಬೇಕಾ ಎಂದು ಒತ್ತಡದಲ್ಲಿ ಟೀಮ್ ಇಂಡಿಯಾ ಇತ್ತು. ಆಗ ಟೀಮ್ ಇಂಡಿಯಾದ ಅನುಭವಿ ಆಟಗಾರರು ಮೈದಾನದಲ್ಲಿ ಒಂದು ಚಿಕ್ಕ ಮೀಟಿಂಗ್ ಮಾಡಿದರು. ಈ ಚರ್ಚೆಯ ಫಲಶ್ರುತಿ ಕೆಲವೇ ಕ್ಷಣದಲ್ಲಿ ಕಣ್ಣ ಮುಂದೆ ಬಂದಿತು. ಟೀಮ್ ಇಂಡಿಯಾ ಸೋಲುವ ಹಂತದಲ್ಲಿ ಇದ್ದ ಪಂದ್ಯವನ್ನು ಗೆಲುವಿನ ಟ್ರ್ಯಾಕ್‌ಗೆ ಎಳೆದು ತಂದ ಕೀರ್ತಿ ಯಾರ್ಕರ್ ಸ್ಪೇಷಲಿಸ್ಟ್ ಬುಮ್ರಾಗೆ ಸಂದಿತು.












Click it and Unblock the Notifications