T20 world cup: ನೆದರ್ಲೆಂಡ್ಸ್ ವಿರುದ್ಧ ಸುಲಭದ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಸಿಡ್ನಿ, ಅಕ್ಟೋಬರ್ 26: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದು ಬೀಗಿರುವ ಭಾರತ ತಂಡ ಗುರುವಾರ ನೆದರ್ಲೆಂಡ್ಸ್ ಸವಾಲನ್ನು ಎದುರಿಸಲಿದೆ. ಗುರುವಾರ ಈ ಪಂದ್ಯದ ಜೊತೆಗೆ ಒಟ್ಟು ಮೂರು ಪಂದ್ಯಗಳು ನಡೆಯಲಿವೆ.
ವಿರಾಟ್ ಕೊಹ್ಲಿಯ ಮಾಸ್ಟರ್ ಕ್ಲಾಸ್ ಆಟದಿಂದ ಮೊದಲ ಪಂದ್ಯದಲ್ಲಿ ಪಾಕ್ ಮಣಿಸಿರುವ ವಿಶ್ವಾಸದಲ್ಲಿ ಸಿಡ್ನಿಗೆ ಪ್ರಯಾಣ ಬೆಳೆಸುತ್ತಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಮಳೆಯ ಅಡಚಣೆ ಉಂಟಾಗುವ ಸಾಧ್ಯತೆಯಿಲ್ಲ ಎಂದು ತಿಳಿದುಬಂದಿದೆ.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಭಾರತದ ಆರಂಭಿಕರಾದ ರಾಹುಲ್ ಮತ್ತು ನಾಯಕ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಲು ಈ ಪಂದ್ಯ ಅನುಕೂಲವಾಗಲಿದೆ. ಅಂಕಪಟ್ಟಿಯಲ್ಲಿ 2 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತ ತಂಡ ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ವಿರುದ್ಧ ಆರಾಮದಾಯಕ ಗೆಲುವು ಸಾಧಿಸಿ ನೆಟ್ ರನ್‌ರೇಟ್ ಉತ್ತಮಗೊಳಿಸುವ ಇರಾದೆಯಲ್ಲಿದೆ.

ಭಾರತ ಹಾಗೂ ನೆದರ್ಲೆಂಡ್ಸ್ ತಂಡಗಳು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಭಾರತ ತಂಡದ ಪಾಕ್ ವಿರುದ್ಧ ಕಣಕ್ಕಿಳಿಸಿದ್ದ ತಂಡವನ್ನೇ ನೆದರ್ಲೆಂಡ್ಸ್ ವಿರುದ್ಧವೂ ಕಣಕ್ಕಿಳಿಸುವ ಸಾಧ್ಯತೆಯಿದೆ.
ಗುರುವಾರ ತ್ರಿಬಲ್ ಧಮಾಕ
ಗುರುವಾರ ಭಾರತ-ನೆದರ್ಲೆಂಡ್ಸ್ ಅಲ್ಲದೇ, ಮೂರು ಪಂದ್ಯಗಳು ನಡೆಯಲಿವೆ. ಬೆಳಿಗ್ಗೆ 8:30ಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ, 12: 30ಕ್ಕೆ ಭಾರತ- ನೆದರ್ಲೆಂಡ್ಸ್ ನಡುವಿನ ಪಂದ್ಯಗಳು ನಡೆಯಲಿವೆ. ಈ ಎರಡು ಪಂದ್ಯಗಳು ಸಿಡ್ನಿಯಲ್ಲಿ ನಡೆಯಲಿವೆ. ಮಧ್ಯಾಹ್ನ 4:30ಕ್ಕೆ ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧ ಪರ್ತ್‌ನಲ್ಲಿ ಮುಖಾಮುಖಿಯಾಗಲಿದೆ.
ಅಂಕಪಟ್ಟಿ ವಿವರ
ಗುಂಪು 1ರಲ್ಲಿ ನ್ಯೂಜಿಲ್ಯಾಂಡ್ ತಂಡ 3 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ತಲಾ ಒಂದು ಸೋಲು-ಗೆಲುವು ಖಂಡಿರುವ ಶ್ರೀಲಂಕಾ 2ನೇ ಸ್ಥಾನ, ಇಂಗ್ಲೆಂಡ್, ಐರ್ಲೆಂಡ್, ಆಸ್ಟ್ರೇಲಿಯಾ ಕ್ರಮವಾಗಿ 3,4 ಮತ್ತು 5ನೇ ಸ್ಥಾನ ಪಡೆದುಕೊಂಡಿವೆ. ಗುಂಪು 2ರಲ್ಲಿ ಬಾಂಗ್ಲಾದೇಶ ತಂಡ ಮೊದಲ ಸ್ಥಾನದಲ್ಲಿದ್ದರೆ, ಭಾರತ ತಂಡ 2ನೇ ಸ್ಥಾನ ಕಾಯ್ದುಕೊಂಡಿದೆ.

ಇಂಗ್ಲೆಂಡ್‌ಗೆ ಸೋಲುಣಿಸಿದ ಐರ್ಲೆಂಡ್
ಇನ್ನು ಗುರುವಾರ ನಡೆದ ಪಂದ್ಯದಲ್ಲಿ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡದ ವಿರುದ್ಧ ಐರ್ಲೆಂಡ್ 5 ರನ್‌ಗಳ ಗೆಲುವು ಸಾಧಿಸಿ ಆಘಾತ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ನಾಯಕ ಬಲ್ಬಿರ್ನಿ 62, ಟಕ್ಕರ್ 34 ರನ್‌ಗಳ ಸಹಾಯದಿಂದ 157 ರನ್‌ಗಳಿಸಿತ್ತು.
ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 14.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ವೇಳೆ 105 ರನ್‌ಗಳಿಸಿತ್ತು. ಆದರೆ ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯ ಸ್ಥಗಿತವಾಗಿತ್ತು. ಮಳೆ ನಿಲ್ಲದ ಕಾರಣ ಡಿಕ್ವರ್ಥ್ ಲೂಯಿಸ್ ನಿಯಮಧನ್ವಯ ಐರ್ಲೆಂಡ್ ಜಯಶಾಲಿ ಎಂದು ಘೋಷಿಸಲಾಯಿತು.












Click it and Unblock the Notifications