T20 WC 2024: ಟಿ20 ವಿಶ್ವಕಪ್‌ ಸೆಮಿಫೈನಲ್‌ ತಲುಪಲು ಎಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಜೂನ್‌ 2ರಿಂದ ವಿಶ್ವಕಪ್ ಆರಂಭವಾಗಲಿದೆ. ಭಾರತ ತಂಡ ಸಹ ಈಗಾಗಲೇ ಅಮೆರಿಕ ತಲುಪಿದ್ದು, ಅಭ್ಯಾಸ ಆರಂಭಿಸಿದೆ. ವಿಶ್ವಕಪ್‌ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಅಭ್ಯಾಸವನ್ನು ಆಡಬೇಕಿದೆ. ಆ ಬಳಿಕ ಪ್ರಧಾನ ಘಟ್ಟದ ಪಂದ್ಯಗಳು ಆರಂಭವಾಗಲಿವೆ.

ಗುಂಪು ಹಂತದಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ. ಈ ಬಾರಿಯ ವಿಶ್ವಕಪ್ ಕೆಲವು ಹೊಸ ನಿಯಮಗಳೊಂದಿಗೆ ನಡೆಯಲಿದೆ. ಸೂಪರ್-8 ಗೆ ತಂಡಗಳು ಹೇಗೆ ಅರ್ಹತೆ ಪಡೆಯುತ್ತವೆ ಎಂಬುದನ್ನು ಈ ವರದಿಯಲ್ಲಿ ನೋಡೋಣ.

T20 WC 2024 Unblemished Victories Vital for Securing World Cup Semi-Final Spot

ಈ ಬಾರಿಯ ವಿಶ್ವಕಪ್‌ನಲ್ಲಿ ಏನೆಲ್ಲಾ ಬದಲಾಣೆ?

ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಆದರೆ ಈ ಬಾರಿ ನಡೆಯುವ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ. ಕಳೆದ ವಿಶ್ವಕಪ್‌ನಲ್ಲಿ ಗುಂಪು ವಿಭಾಗದಲ್ಲಿ ಟಾಪ್‌2 ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಈ ಬಾರಿ ಎಂಟು ತಂಡಗಳು ಅರ್ಹತೆ ಪಡೆಯಲಿದ್ದು, ಇದಾದ ಬಳಿಕ ಉಪಾಂತ್ಯ ಪಂದ್ಯಗಳು ನಡೆಯಲಿವೆ.

ಈ ಬಾರಿ ಸಮಿಫೈನಲ್‌ ತಲುಪುವುದು ಕಷ್ಟ. ಈ ಹಂತವನ್ನು ತಲುಪಲು ತಂಡಗಳು ಎರಡು ಸುತ್ತುಗಳಲ್ಲಿ ಆಡಬೇಕು. ಮೊದಲನೇಯದಾಗಿ ಗುಂಪು, ಎರಡನೇಯದಾಗಿ ಸೂಪರ್ 8 ಹಂತದಲ್ಲಿ ಆಡಬೇಕು. ಗುಂಪು ಹಂತದಲ್ಲಿ ಆಡುವ ನಾಲ್ಕು ಪಂದ್ಯಗಳನ್ನು ಗೆದ್ದ ತಂಡ ನೇರವಾಗಿ ಸೂಪರ್ 8ಕ್ಕೆ ಪ್ರವೇಶ ಪಡೆಯಲಿದೆ. ಒಂದು ಪಂದ್ಯವನ್ನು ಸೋತರೂ, ಬೇರೆ ತಂಡಗಳ ಆಟ ಹಾಗೂ ನೆಟ್‌ ರನ್‌ರೇಟ್‌ ಲೆಕ್ಕಾಚಾರ ಆರಂಭವಾಗುತ್ತದೆ.

ಸೂಪರ್‌ 8 ಹಂತದಿಂದ ಸೆಮಿಫೈನಲ್‌ ಹಂತವನ್ನು ತಲುಪುವುದು ಕೊಂಚ ಕಷ್ಟ ಎಂದು ಹೇಳಲಾಗುತ್ತಿದೆ. ಏಕೆಂದರೆ ಈ ಹಂತದಲ್ಲಿ ನೆಟ್‌ ರನ್‌ ರೇಟ್‌ ತುಂಬಾನೆ ಇಂಪಾರ್ಟೆಂಟ್‌.

T20 WC 2024 Unblemished Victories Vital for Securing World Cup Semi-Final Spot

ಸೂಪರ್‌ 8 ಲೆಕ್ಕಾಚಾರ ಏನು?

ಸೂಪರ್ -8 ಗೆ ಹೋದ ನಂತರ, ತಲಾ ನಾಲ್ಕು ತಂಡಗಳ ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ. ಸೆಮಿಫೈನಲ್‌ಗೆ ನೇರ ಪ್ರವೇಶಕ್ಕಾಗಿ ಮೂರು ಗೆಲುವುಗಳ ಅಗತ್ಯ. ಇದರರ್ಥ ಸೆಮಿಫೈನಲ್ ತಲುಪಲು, ನೀವು 7 ಗೆಲುವುಗಳನ್ನು ದಾಖಲಿಸಬೇಕು. ಸೂಪರ್‌ 8 ಹಂತದಲ್ಲಿ ಎರಡು ಗೆಲುವುಗಳನ್ನು ದಾಖಲಿಸಿದರೆ, ವಿಷಯವು ನೆಟ್ ರನ್ ರೇಟ್‌ನಲ್ಲಿ ಸಿಲುಕಿಕೊಳ್ಳಬಹುದು.

ಟೀಂ ಇಂಡಿಯಾ ಸೆಮಿಫೈನಲ್‌ಗೆ ಹೇಗೆ ಅರ್ಹತೆ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಟೀಮ್ ಇಂಡಿಯಾ ಸದೃಢ ತಂಡವನ್ನೇ ಕಟ್ಟಿಕೊಂಡು ಅಮೆರಿಕಕ್ಕೆ ಹಾರಿದೆ. ಆ ನೆಲದಲ್ಲಿ ಆಟಗಾರರು ಹೇಗೆ ಆಡುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ವಿಶ್ವದ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ, ಉತ್ತಮವಾಗಿ ಆಡಿ ತಂಡದ ಗೆಲುವಿನಲ್ಲಿ ಮಿಂಚುವುದು ಅನಿವಾರ್ಯ.

ಟೀಮ್ ಇಂಡಿಯಾದ ವೇಳಾಪಟ್ಟಿ?

ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ, ಎರಡನೇ ಪಂದ್ಯವನ್ನು ಜೂನ್ 9 ರಂದು ಪಾಕಿಸ್ತಾನ ವಿರುದ್ಧ, ಜೂನ್ 12 ರಂದು ಅಮೆರಿಕ ವಿರುದ್ಧ, ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಪಂದ್ಯಗಳು ನಡೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+