CPL 2023: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ರೆಡ್ ಕಾರ್ಡ್ ಪಡೆದ ಶಾರುಖ್ ಖಾನ್ ಒಡೆತನದ ತಂಡ!
ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ರೆಡ್ ಕಾರ್ಡ್ ನೀಡುವ ನಿಯಮಯವನ್ನು ಪರಿಚಯಿಸಲಾಗಿದೆ. ಸೋಮವಾರ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ತಂಡವೊಂದು ರೆಡ್ ಕಾರ್ಡ್ ಪಡೆದುಕೊಂಡಿದೆ.
ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಶಾರೂಖ್ ಖಾನ್ ಒಡೆತನದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಮೊದಲ ಬಾರಿ ರೆಡ್ ಕಾರ್ಡ್ ಪಡೆದುಕೊಂಡಿದೆ.

ರೆಡ್ ಕಾರ್ಡ್ ನಿಯಮಗಳು ಏನು?
ನಿಧಾನಗತಿಯ ಓವರ್ ಗಳಿಗಾಗಿ ರೆಡ್ ಕಾರ್ಡ್ ಕಾಡುವ ನಿಯಮವನ್ನು ಈ ಆವೃತ್ತಿಯಿಂದ ಪರಿಚಯಿಸಲಾಗಿದೆ. 20 ನೇ ಓವರ್‌ನ ಆರಂಭದಲ್ಲಿ ಬೌಲಿಂಗ್ ತಂಡವು ದರಕ್ಕಿಂತ ಹಿಂದೆ ಕಂಡುಬಂದರೆ ಮಾತ್ರ ರೆಡ್ ಕಾರ್ಡ್ ನೀಡಲಾಗುತ್ತದೆ. ಇನ್ನಿಂಗ್ಸ್‌ಗೆ 85 ನಿಮಿಷಗಳ ನಿಯಮವನ್ನು ಲೀಗ್‌ನಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ, ಪ್ರತಿ ಓವರ್‌ಗೆ ನಾಲ್ಕು ನಿಮಿಷ 15 ಸೆಕೆಂಡುಗಳ ಕಾಲಾವಧಿಯನ್ನು ನೀಡಲಾಗುತ್ತದೆ. ಲೆಕ್ಕಾಚಾರದ ಆಧಾರದ ಮೇಲೆ, 19 ನೇ ಓವರ್ ಅನ್ನು 80 ನಿಮಿಷ ಮತ್ತು 45 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರೆ, ಆನ್-ಫೀಲ್ಡ್ ಅಂಪೈರ್ ಬೌಲಿಂಗ್ ತಂಡಕ್ಕೆ ರೆಡ್ ಕಾರ್ಡ್ ನೀಡುತ್ತಾರೆ.
ರೆಡ್ ಕಾರ್ಡ್ ಪಡೆಯುವ ತಂಡವು 10 ಫೀಲ್ಡರ್ ಗಳನ್ನು ಮಾತ್ರ ಹೊಂದಿರಬೇಕು, ಓರ್ವ ಆಟಗಾರ ಮೈದಾನದಿಂದ ಹೊರಗೆ ಕೂರಬೇಕಾಗುತ್ತದೆ. ಇಬ್ಬರು ಫೀಲ್ಡರ್ ಗಳು ಮಾತ್ರ 30 ಯಾರ್ಡ್ ಸರ್ಕಲ್ ಒಳಗೆ ಇರಲು ಅನುಮತಿ ನೀಡಲಾಗುತ್ತದೆ.
SENT OFF! The 1st ever red card in CPL history. Sunil Narine gets his marching orders 🚨 #CPL23 #SKNPvTKR #RedCard #CricketPlayedLouder #BiggestPartyInSport pic.twitter.com/YU1NqdOgEX
— CPL T20 (@CPL) August 28, 2023
19ನೇ ಓವರ್ ಮುಕ್ತಾಯದ ನಂತರ ಟಿಕೆಆರ್ ತಂಡ ರೆಡ್ ಕಾರ್ಡ್ ಪಡೆದುಕೊಂಡಿತು. ನಾಯಕ ಕೀರನ್ ಪೊಲಾರ್ಡ್ ನಂತರ ಫೀಲ್ಡಿಂಗ್ ಬದಲಾವಣೆ ಮಾಡಿದ್ದಲ್ಲದೆ, ಸುನಿಲ್ ನರೇನ್ ಅವರನ್ನು ಮೈದಾನದಿಂದ ಹೊರಗೆ ಹೋಗುವಂತೆ ಕೇಳಿಕೊಂಡರು. ಡ್ವಾನ್ ಬ್ರಾವೋ 20ನೇ ಓವರ್ ಬೌಲಿಂಗ್ ಮಾಡಿದರು. ಕೊನೆಯ ಓವರ್ ನಲ್ಲಿ 18 ರನ್ ಬಿಟ್ಟುಕೊಟ್ಟರು.
ರೆಡ್ ಕಾರ್ಡ್ ಪಡೆದರೂ ಗೆಲುವು ಸಾಧಿಸಿದ ಟಿಕೆಆರ್
ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 178 ರನ್ ಕಲೆಹಾಕಿತು. ಶೆರ್ಫೇನ್ ರುದರ್‌ಫೋರ್ಡ್ 38 ಎಸೆತಗಳಲ್ಲಿ 62 ರನ್ ಗಳಿಸಿ ಉತ್ತಮ ಮೊತ್ತ ಗಳಿಸಲು ಸಹಾಯ ಮಾಡಿದರು.
ಈ ಮೊತ್ತವನ್ನು ಬೆನ್ನತ್ತಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಕೇವಲ 17.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 180 ರನ್ ಗಳಿಸುವ ಮೂಲಕ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ನಿಕೋಲಸ್ ಪೂರನ್ 32 ಎಸೆತಗಳಲ್ಲಿ 61 ರನ್ ಗಳಿಸಿದರೆ, ಕೀರನ್ ಪೊಲಾರ್ಡ್ 19 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಆಂಡ್ರೆ ರಸೆಲ್ 8 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿ ಗೆಲುವಿಗೆ ಸಹಕಾರಿಯಾದರು.












Click it and Unblock the Notifications