ಉರಿಯುವ ಬೆಂಕಿಗೆ ತುಪ್ಪ ಸುರಿದ ಗವಾಸ್ಕರ್‌: ಸ್ಟ್ರೈಕ್‌ ರೇಟ್‌ ಆಯ್ತು, ಕೊಹ್ಲಿ ವೃತ್ತಿ ಜೀವನಕ್ಕೆ ಕೈ ಹಾಕಿದ ಮಾಜಿ ಪ್ಲೇಯರ್

ವಿರಾಟ್‌ ಕೊಹ್ಲಿ ಅವರ ಬಗ್ಗೆ ಇತ್ತೀಚಿಗೆ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್‌ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಇತ್ತೀಚಿಗೆ ಸುನಿಲ್ ಗವಾಸ್ಕರ್ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್‌ ರೇಟ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸವಾಲಿಗೆ ಮೈದಾನದಲ್ಲೇ ವಿರಾಟ್‌ ಕೊಹ್ಲಿ ಭರ್ಜರಿ ಉತ್ತರ ನೀಡಿದ್ದರು. ಈ ವಿವಾದಾತ್ಮಕ ಹೇಳಿಕೆ ತಣ್ಣಗಾಗುವದರೊಳಗೆ ಸುನಿಲ್ ಗವಾಸ್ಕರ್‌ ಮತ್ತೊಂದು ಹೇಳಿಕೆ ನೀಡಿ, ವಿರಾಟ್‌ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸ್ಟ್ರೈಕ್‌ ರೇಟ್‌ ಬಗ್ಗೆ ವಿವಾದಾತ್ಮ ಹೇಳಿಕೆಯ ಕಿಡಿ ಇನ್ನು ಅಭಿಮಾನಿಗಳ ಮನದಲ್ಲಿ ಇರುವಾಗಲೇ, ಆ ಕಿಡಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

Sunil Gavaskar Critiques Virat Kohli s Career as Start-stop in Latest Commentary

ಸುನಿಲ್ ಗವಾಸ್ಕರ್‌ ಹೆಳಿದ್ದೇನು?

ಕೊಹ್ಲಿ ಪ್ರದರ್ಶನದ ಬಗ್ಗೆ ಸುನಿಲ್ ಗವಾಸ್ಕರ್ ದೊಡ್ಡ ಮತ್ತೊಂದು ಹೇಳಿಕೆ ಈಗ ಕಿಡಿ ಹಚ್ಚಿದೆ. ಕೋಟ್ಯಾಂತಾರ ಕೊಹ್ಲಿ ಅಭಿಮಾನಿಗಳು ಸುನಿಲ್‌ ಗವಾಸ್ಕರ್‌ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸುನಿಲ್ ಗವಾಸ್ಕರ್, ವಿರಾಟ್ ಕೊ
ಹ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಅವರು ಆರಂಭಿಕ ಪಂದದಲ್ಲಿ ಹೆಚ್ಚು ಪ್ರದರ್ಶನ ನೀಡಲಿಲ್ಲ. ಆದರೆ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅವಕಾಶಗಳನ್ನು ನೀಡಿದರು. ಧೋನಿ ಅವರಿಗೆ ಹಲವು ಪಂದ್ಯಗಳಲ್ಲಿ ಅವಕಾಶ ನೀಡಿದ್ದಾರೆ. ಅವರು ಉತ್ತಮವಾಗಿ ಆಡದಿದ್ದರೂ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಇಂದು ನಾವು ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಗವಾಸ್ಕರ್‌ ಹೇಳಿದ್ದಾರೆ.

ಕೊಹ್ಲಿ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಎಂಎಸ್‌ಡಿ, ಕೊಹ್ಲಿಗೆ ಅವಕಾಶ ನೀಡದಿದ್ದರೆ ಇಂದು ವಿರಾಟ್ ಕೊಹ್ಲಿ ಹೆಸರು ಇಷ್ಟು ಕೇಳಲು ಆಗುತ್ತಿರಲಿಲ್ಲ ಎಂದು ಗವಾಸ್ಕರ್ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕೊಹ್ಲಿ ವೃತ್ತಿಜೀವನವನ್ನು ರೂಪಿಸಲು ಧೋನಿ ಶ್ರಮಿಸಿದ್ದಾರೆ. ವಿರಾಟ್ ಕೊಹ್ಲಿ ಇಂದು ವಿಶ್ವದ ನಂಬರ್ ಒನ್ ಕ್ರಿಕೆಟಿಗ. ಅವರು ಈ ಸ್ಥಾನವನ್ನು ಪಡೆಯಲು 16 ಶ್ರಮಿಸಿದ್ದಾರೆ. ವಿರಾಟ್‌ ಕೊಹ್ಲಿ ಅವರ ಈಗಿನ ಪ್ರದರ್ಶನಕ್ಕೆ ಧೋನಿ ಕಾರಣ ಎಂದು ಗವಾಸ್ಕರ್ ಹೇಳಿಕೆಗೆ, ಅಭಿಮಾನಿಗಳು ಕೋಪಗೊಂಡಿದ್ದಾರೆ. ಅಭಿಮಾನಿಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಗವಾಸ್ಕರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

Sunil Gavaskar Critiques Virat Kohli s Career as Start-stop in Latest Commentary

ಮೈದಾನದಲ್ಲಿ ಉತ್ತರ ನೀಡಿದ್ದ ವಿರಾಟ್

ವಿರಾಟ್‌ ಕೊಹ್ಲಿ ಅವರ ಆಟದ ಬಗ್ಗೆ ಸುನಿಲ್ ಗವಾಸ್ಕರ್ ಈ ಮೊದಲೇ ಒಂದು ಹೇಳಿಕೆ ನೀಡಿದ್ದರು. ಅವರ ಸ್ಟ್ರೈಕ್‌ ರೇಟ್‌ ಬಗ್ಗೆ ಸುನಿಲ್ ಗವಾಸ್ಕರ್ ಮಾತನಾಡಿದ್ದರು. ಅವರ ಈ ಮಾತಿಗೆ ವಿರಾಟ್‌ ಕೊಹ್ಲಿ ಭರ್ಜರಿಯಾಗಿ ತಿರುಗೇಟು ನೀಡಿದ್ದರು. ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಮನಮೋಹಕ ಆಟವನ್ನು ಆಡಿದ್ದರು. ಅಲ್ಲದೆ ಸ್ಟ್ರೈಕ್‌ ರೇಟ್‌ ಬಗ್ಗೆ ಗಮನ ಹರಿಸಿದ್ದರು. ಈ ಪಂದ್ಯದಲ್ಲಿ ವಿರಾಟ್‌ 195 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ ಟೀಕೆಗಳಿಗೆ ಉತ್ತರ ನೀಡಿದ್ದರು.

ಯಾರನ್ನು ಏನು ಕೇಳಿಲ್ಲ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ಹೊರಗಿನವರು ಹೇಳುವುದಕ್ಕೆ ಪ್ರತಿಕ್ರಿಯಿಸುವ ಅಗತ್ಯ ನನಗಿಲ್ಲ. ಮೈದಾನದಲ್ಲಿ ನಾನು ಏನು ಮಾಡಬಲ್ಲೆ ಎಂದು ನನಗೆ ತಿಳಿದಿದೆ. ಮೈದಾನದಲ್ಲಿ ಪಂದ್ಯವನ್ನು ಹೇಗೆ ಗೆಲ್ಲಬೇಕು ಎಂದು ನಾನು ಯಾರನ್ನೂ ಕೇಳಿಲ್ಲ. ಇದು ಆಟಗಾರನಿಗೆ ಅನುಭವದಿಂದ ಬರುತ್ತದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+