Asia Cup 2023 : ಪ್ರೋಮೊದಲ್ಲಿ ಕೊಹ್ಲಿ ದರ್ಬಾರ್: ಸಿಟ್ಟಾಗಿದ್ದೇಕೆ ರೋಹಿತ್ ಅಭಿಮಾನಿಗಳು?

ಏಷ್ಯಾಕಪ್ 2023ರ ಪಂದ್ಯಾವಳಿಯ ಆರಂಭಕ್ಕೆ ಇನ್ನು 22 ದಿನಗಳ ಸಮಯ ಇದೆ. ಮಹತ್ವದ ಪಂದ್ಯಾವಳಿಗೆ ಈಗಾಗಲೇ ಪ್ರಚಾರ ಆರಂಭಿಸಿರುವ ಪಂದ್ಯಗಳ ನೇರಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಪ್ರೋಮೋ ಬಿಡುಗಡೆ ಮಾಡಿದೆ. ಒಂದು ನಿಮಿಷದ ಪ್ರೋಮೊ ನೋಡಿ ವಿರಾಟ್ ಕೊಹ್ಲಿ ಅಭಿಮಾನಿಗಳು ಥ್ರಿಲ್ ಆಗಿದ್ದರೆ, ನಾಯಕ ರೋಹಿತ್ ಶರ್ಮಾ ಅಭಿಮಾನಿಗಳ ಕಣ್ಣು ಕೆಂಪಗಾಗಿದೆ.

ಭಾರತ ತಂಡವನ್ನು ಬೆಂಬಲಿಸುತ್ತ ಅಭಿಮಾನಿಗಳು ಕೈ ಬೀಸುವ ಮೂಲಕ ಪ್ರೋಮೋ ಪ್ರಾರಂಭವಾಗುತ್ತದೆ, ನಂತರ ಆಟಗಾರರು ಉತ್ತಮ ಪ್ರದರ್ಶನ ನೀಡುವಂತೆ ಪ್ರಾರ್ಥಿಸುವ ಅಭಿಮಾನಿಗಳು ಭಾವನೆಗಳನ್ನು ತೋರಿಸುತ್ತದೆ. ಸಂತೋಷ, ಭಾವಪರವಶತೆ, ಸಂಕಟ ಮತ್ತು ಭರವಸೆಯಂತಹ ಭಾವನೆಗಳನ್ನು ತೋರಿಸುತ್ತದೆ.

 Star Sports Asia Cup 2023 Promo: Virat Kohli Shines, Fans Disappointed Without Rohit Sharma

ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರು ದೊಡ್ಡ ಬ್ರ್ಯಾಂಡ್‌ನಿಂದಾಗಿ ಗಮನ ಸೆಳೆದಿದ್ದಾರೆ. #HandsUpForIndia ಎಂಬುದು ಹೊಸ ಏಷ್ಯಾ ಕಪ್ 2023 ಪ್ರೋಮೋದ ಹ್ಯಾಶ್‌ಟ್ಯಾಗ್ ಆಗಿದೆ. ಪ್ರೋಮೊ ನೋಡಿದ ವಿರಾಟ್ ಕೊಹ್ಲಿ ಅಭಿಮಾನಿಗಳಂತು ಸಂತೋಷಗೊಂಡಿದ್ದಾರೆ.

ಪ್ರೋಮೊದಲ್ಲಿ ತಂಡದ ನಾಯಕನಿಗೇ ಸ್ಥಾನವಿಲ್ಲ

ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಇದು ಅಭಿಮಾನಿಗಳನ್ನು ಕೆರಳಿಸಿದೆ. ಇದರಿಂದ ಕೋಪಗೊಂಡಿರುವ ಅಭಿಮಾನಿಯೊಬ್ಬರು, "ಭಾರತ ಕ್ರಿಕೆಟ್ ತಂಡವೆಂದರೆ ವಿರಾಟ್ ಕೊಹ್ಲಿ ಒಬ್ಬರೇ ಅಲ್ಲ, ಬೇರೆ ಆಟಗಾರರನ್ನು ಪ್ರೋಮೊದಲ್ಲಿ ಸೇರಿಸಬಹುದಿತ್ತು" ಎಂದು ಹೇಳಿದ್ದಾರೆ.

ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿ, "ಯಾವ ಆಟಗಾರ ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿದ್ದರೂ ನೀವು ಭಾರತೀಯ ನಾಯಕನನ್ನು ಗೌರವಿಸಬೇಕು, ನಮಗೆ ಪ್ರೋಮೋದಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ನಾಯಕನ ಪೋಸ್ಟರ್‌ನಲ್ಲಿ ವಿರಾಟ್ ಅನ್ನು ಹಾಕುವುದು ನಿಮ್ಮ ಮಟ್ಟವನ್ನು ತೋರಿಸುತ್ತಿದೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ರೋಹಿತ್ ಶರ್ಮಾ ಜಿಯೋ ಸಿನಿಮಾ ಆಪ್‌ಗೆ ರಾಯಭಾರಿ ಆದ ಕಾರಣ ಅವರನ್ನು ಬೇಕಂತಲೇ ಸ್ಟಾರ್ ಸ್ಪೋರ್ಟ್ಸ್ ಪ್ರೋಮೊದಿಂದ ಕೈಬಿಟ್ಟಿದೆ ಎಂದು ಅಭಿಮಾನಿಗಳು ವಾದಿಸಿದ್ದಾರೆ. ಆದರೂ ಸಾಕಷ್ಟು ಅಭಿಮಾನಿಗಳು ಪ್ರೋಮೊ ನೋಡಿ ಖುಷಿಯಾಗಿದ್ದಾರೆ.

ಸೆಪ್ಟೆಂಬರ್ 2ರಂದು ಪಾಕಿಸ್ತಾನ ವಿರುದ್ಧ ಪಂದ್ಯ

ವೆಸ್ಟ್ ಇಂಡೀಸ್ ಸರಣಿ ಮುಗಿದ ನಂತರ ಭಾರತ ಏಷ್ಯಾಕಪ್‌ಗೆ ಸಜ್ಜಾಗಲಿದೆ. ಕೆ.ಎಲ್. ರಾಹುಲ್ ಏಷ್ಯಾಕಪ್‌ಗೆ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಆಗಸ್ಟ್ 15ರ ಒಳಗೆ ಬಿಸಿಸಿಐ ಏಷ್ಯಾಕಪ್‌ಗೆ ತಂಡವನ್ನು ಪ್ರಕಟಿಸಲಿದೆ. ಭಾರತ ತಂಡ ಸೆಪ್ಟೆಂಬರ್ 2ರಂದು ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.

2022ರ ಏಷ್ಯಾಕಪ್‌ನಲ್ಲಿ ಫೈನಲ್ ತಲುಪವಲ್ಲಿ ವಿಫಲವಾಗಿದ್ದ ಭಾರತ ಈ ಬಾರಿ ಚಾಂಪಿಯನ್ ಆಗುವ ವಿಶ್ವಾಸದಲ್ಲಿದೆ. ಏಕದಿನ ವಿಶ್ವಕಪ್‌ಗೆ ಮುನ್ನ ಭಾರತ ಏಷ್ಯಾಕಪ್‌ ಗೆದ್ದರೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕಳೆದ ಬಾರಿ ಏಷ್ಯಾಕಪ್ ಪಂದ್ಯಾವಳಿ ಟಿ20 ಮಾದರಿಯಲ್ಲಿ ನಡೆದಿತ್ತು, ಈ ಬಾರಿ ಏಕದಿನ ಮಾದರಿಯಲ್ಲಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+