Srishti Kiran: ಅಂಡರ್-13 ಟೆನಿಸ್‌ನಲ್ಲಿ ವಿಶ್ವದ ನಂ.1 ಪಟ್ಟಕ್ಕೇರಿದ ಬೆಂಗಳೂರಿನ ಸೃಷ್ಟಿ ಕಿರಣ್

Srishti Kiran: ಭಾರತೀಯ ಟೆನಿಸ್ ಲೋಕದಲ್ಲಿ ಬೆಂಗಳೂರಿನ 13 ವರ್ಷದ ಬಾಲಕಿ ಸೃಷ್ಟಿ ಕಿರಣ್ ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಂತಾರಾಷ್ಟ್ರೀಯ ಜೂನಿಯರ್ ಟೆನಿಸ್ ಸರ್ಕ್ಯೂಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸೃಷ್ಟಿ, ಇದೀಗ 13 ವರ್ಷದೊಳಗಿನವರ (Under-13) ವಿಭಾಗದ ಟೆನಿಸ್ ಶ್ರೇಯಾಂಕದಲ್ಲಿ ವಿಶ್ವದ ನಂಬರ್ 1 ಸ್ಥಾನಕ್ಕೇರಿದ್ದಾರೆ.

ಇಂಟರ್ನ್ಯಾಷನಲ್ ಟೆನಿಸ್ ಫೆಡರೇಶನ್ ಜೂನಿಯರ್ಸ್ ವಿಭಾಗದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ 357ನೇ ರ‍್ಯಾಂಕಿಂಗ್ ತಲುಪಿರುವ ಅವರು, ಈ ವಯೋಮಿತಿಯಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ರ‍್ಯಾಂಕಿಂಗ್ ಹೊಂದಿದ ಅಂಡರ್-13 ಆಟಗಾರ್ತಿಯಾಗಿದ್ದಾರೆ.

Srushti Kiran Becomes World No 1 in U-13 Tennis Rankings Creates History for India Know details

ಸೃಷ್ಟಿ ಕಿರಣ್ ಸಾಧನೆಗಳು

ಸೃಷ್ಟಿ ಅವರ ಈ ಅದ್ಭುತ ಪ್ರದರ್ಶನ ಟೆನಿಸ್ ಜಗತ್ತನ್ನು ಬೆರಗುಗೊಳಿಸಿದೆ. ಸತತವಾಗಿ 5 ಐಟಿಎಫ್ ಜೂನಿಯರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅವರು, ಇತ್ತೀಚೆಗೆ ಗ್ವಾಟೆಮಾಲಾದಲ್ಲಿ ನಡೆದ ಪ್ರತಿಷ್ಠಿತ ಐಟಿಎಫ್ J100 ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನ ಪಡೆಯುವ ಮೂಲಕ ತಮ್ಮ ಜಯಭೇರಿಯನ್ನು ಮುಂದುವರಿಸಿದ್ದಾರೆ. ಈ ಅದ್ಭುತ ಗೆಲುವಿನ ಓಟವೇ ಅವರನ್ನು ಜಾಗತಿಕವಾಗಿ ಅಗ್ರಸ್ಥಾನಕ್ಕೇರಿಸಿದೆ. 2026ರ ಐಟಿಎಫ್ ಜೂನಿಯರ್ ಸಿಂಗಲ್ಸ್‌ನಲ್ಲಿ ಅವರು 23-3ರ ಗೆಲುವಿನ ದಾಖಲೆ ಹೊಂದಿದ್ದು, ಶೇಕಡಾ 88ರಷ್ಟು ಅದ್ಭುತ ಸಕ್ಸಸ್ ರೇಟ್ ಕಾಪಾಡಿಕೊಂಡಿದ್ದಾರೆ.

ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ಸೃಷ್ಟಿ, 'ನಾನು ಈ ಸಾಧನೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ವರ್ಷದ ಆರಂಭದಲ್ಲಿ ನಾನು ಇದರ ಬಗ್ಗೆ ಯೋಚಿಸಿರಲಿಲ್ಲ. ನನ್ನ ತರಬೇತುದಾರರು, ಕುಟುಂಬ ಮತ್ತು ಸಪೋರ್ಟ್‌ ಟೀಮ್ ಪಟ್ಟ ಕಠಿಣ ಶ್ರಮಕ್ಕೆ ಫಲ ಸಿಕ್ಕಿದೆ. ಆದರೆ ನಾನು ಸುಧಾರಿಸಿಕೊಳ್ಳಬೇಕಾದ ಅಂಶಗಳು ಇನ್ನೂ ಸಾಕಷ್ಟಿವೆ,' ಎಂದು ಹೇಳುವ ಮೂಲಕ ಪ್ರಬುದ್ಧತೆ ಮೆರೆದಿದ್ದಾರೆ.

ಸಣ್ಣ ಅವಕಾಶದಲ್ಲಿ ದೊಡ್ಡ ಸಾಧನೆ

ಐಟಿಎಫ್ ಜೂನಿಯರ್ ರ‍್ಯಾಂಕಿಂಗ್ ಅನ್ನು ಒಬ್ಬ ಆಟಗಾರ ಆಡಿದ ಗರಿಷ್ಠ 10 ಅತ್ಯುತ್ತಮ ಟೂರ್ನಿಗಳ ಅಂಕಗಳನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದರೆ ಸೃಷ್ಟಿ ಕಿರಣ್ ಅವರು ಕೇವಲ 8 ರ‍್ಯಾಂಕಿಂಗ್ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ. ಆರ್ಥಿಕ ತೊಂದರೆಗಳು ಮತ್ತು ವ್ಯವಸ್ಥಿತ ಸವಾಲುಗಳಿಂದಾಗಿ ಅವರಿಗೆ ಉಳಿದ ಎರಡು ಟೂರ್ನಿಗಳಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ತಮ್ಮ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಅವಕಾಶಗಳು ಸಿಕ್ಕಿದ್ದರೂ, ಸಿಕ್ಕ ಅವಕಾಶದಲ್ಲೇ ಗರಿಷ್ಠ ಪಾಯಿಂಟ್ಸ್ ಕಲೆಹಾಕಿ ಅವರು ನಂಬರ್ 1 ಪಟ್ಟ ಅಲಂಕರಿಸಿರುವುದು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ.

ಅಮೆರಿಕಾದಲ್ಲಿ ತರಬೇತಿ

ಸೃಷ್ಟಿ ಕಿರಣ್ ಅವರ ತಂದೆ ಕಿರಣ್ ಗೋಪಾಲರಾಜನ್ ಅವರು ತಮ್ಮ ಕ್ರೀಡಾ ಕನಸುಗಳನ್ನು ಬದಿಗಿಟ್ಟು ಮಗಳ ಟೆನಿಸ್ ವೃತ್ತಿಜೀವನಕ್ಕಾಗಿ ಸಂಪೂರ್ಣವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. ಸದ್ಯ ಸೃಷ್ಟಿ ಅವರು ಅಮೆರಿಕದ ಮಿಯಾಮಿಯಲ್ಲಿ ಪ್ರಖ್ಯಾತ ಕೋಚ್ ಗೇಬ್ ಜರಾಮಿಲ್ಲೊ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಕೋಕೊ ಗೌಫ್ ಅವರನ್ನೇ ತಮ್ಮ ರೋಲ್ ಮಾಡೆಲ್ ಆಗಿ ತೆಗೆದುಕೊಂಡಿರುವ ಸೃಷ್ಟಿ, ಮುಂದಿನ ದಿನಗಳಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಜೂನಿಯರ್ ವಿಂಬಲ್ಡನ್ ಕ್ರೀಡಾಕೂಟದ ಪೂರ್ವಭಾವಿ ಟೂರ್ನಿಯಾದ ಯುಕೆಯ 'J300' ಗ್ರಾಸ್-ಕೋರ್ಟ್ ಟೂರ್ನಿಯಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಜೂನ್ 14 ರಂದು ತಮ್ಮ 14ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಈ ಬೆಂಗಳೂರಿನ ಹೆಮ್ಮೆಯ ಮಗಳು ಭವಿಷ್ಯದಲ್ಲಿ ಮಹಿಳಾ ಟೆನಿಸ್‌ನ ಸೀನಿಯರ್ ವಿಭಾಗದಲ್ಲೂ ವಿಶ್ವದ ನಂಬರ್ 1 ಆಗುವ ದೊಡ್ಡ ಗುರಿಯನ್ನು ಹೊಂದಿದ್ದಾರೆ. ಇವರ ಆಸೆ ನೆರವೇರಲಿ ಎಂಬುದೇ ರಾಜ್ಯದ ಜನರ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+