SRH vs Mi IPL 2024: ಆರ್‌ಸಿಬಿ ದಾಖಲೆ ಮುರಿದು ಐಪಿಎಲ್‌ನಲ್ಲೇ ಹೊಸ ದಾಖಲೆ ಬರೆದ ಸನ್‌ರೈಸರ್ಸ್ ಹೈದರಾಬಾದ್
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿದಿದೆ. ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್ ಗಳ ಅಬ್ಬರಕ್ಕೆ ಹಲವು ದಾಖಲೆಗಳು ಪುಡಿಯಾಗಿದೆ. 2013ರಲ್ಲಿ ಆರ್‌ಸಿಬಿ ಮಾಡಿದ್ದ ದಾಖಲೆಯನ್ನು ಮುರಿದಿದೆ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ಗಳಿಸಿದ ದಾಖಲೆ ಮಾಡಿದೆ.
ಆರ್‌ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 263 ರನ್ ಗಳಿಸಿದ್ದು ಐಪಿಎಲ್‌ನಲ್ಲಿ ಇದುವರೆಗೂ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿತ್ತು. ಸನ್‌ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ವಿರುದ್ಧ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದ್ದು, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಯಾಕಾದ್ರು ಬೌಲಿಂಗ್ ಆಯ್ಕೆ ಮಾಡಿದ್ವೋ ಅನಿಸುವಂತೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಗಳು ಅಬ್ಬರಿಸಿದರು.
ಮಯಾಂಕ್ ಅಗರ್ವಾಲ್ 11 ರನ್ ಗಳಿಸಿ ಔಟಾದರೆ. ಮತ್ತೊಂದು ಕಡೆ ಟ್ರಾವಿಸ್ ಹೆಡ್ ಅಬ್ಬರಿಸಿದರು. ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು ಅದೇ ಫಾರ್ಮ್ ಅನ್ನು ಐಪಿಎಲ್‌ನಲ್ಲಿ ಮುಂದುವರೆಸಿದರು. ಕೇವಲ 24 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಿತ 62 ರನ್ ಗಳಿಸಿದರು. 18 ಎಸೆತಗಳಲ್ಲಿ 50 ರನ್ ಗಳಿಸಿ ಸನ್‌ರೈಸರ್ಸ್ ಪರವಾಗಿ ವೇಗದ ಅರ್ಧಶತಕ ಗಳಿಸಿದ ದಾಖಲೆ ಮಾಡಿದರು.
ಆದರೆ ಟ್ರಾವಿಸ್ ಹೆಡ್ ಅವರ ದಾಖಲೆಯನ್ನು ಅಭಿಷೇಕ್ ಶರ್ಮಾ ಕೆಲವೇ ನಿಮಿಷಗಳಲ್ಲಿ ಮುರಿದರು, 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅಭಿಷೇಕ್ 23 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಿತ 63 ರನ್ ಗಳಿಸಿದರು.
ಸನ್‌ರೈಸರ್ಸ್ ಹೈದರಾಬಾದ್ 7.1 ಓವರ್ ಗಳಲ್ಲಿ 104 ರನ್ ಗಳಿಸಿದರು. 14.4 ಓವರ್ ಗಳಲ್ಲಿ 200 ರನ್ಗಡಿ ದಾಟಿತು. ಹೆಡ್ ಮತ್ತು ಅಭಿಷೇಕ್ ಶರ್ಮಾ ಔಟಾದ ಬಳಿಕ ಬಂದ ಏಡೆನ್ ಮಾರ್ಕ್ರಮ್ ಮತ್ತು ಹೆನ್ರಿಚ್ ಕ್ಲಾಸೆನ್ 116 ರನ್‌ಗಳ ಜೊತೆಯಾಟ ಆಡಿದರು.
ಏಡೆನ್ ಮಾರ್ಕ್ರಮ್ 28 ಎಸೆತಗಳಲ್ಲಿ 2 ಬೌಂಡರಿ ಒಂದು ಸಿಕ್ಸರ್ ಸಹಿತ ಅಜೇಯ 42 ರನ್ ಗಳಿಸಿದರೆ, ಹೆನ್ರಿಚ್ ಕ್ಲಾಸೆನ್ 34 ಎಸೆತಗಳಲ್ಲಿ 4 ಬೌಂಡರಿ 7 ಸಿಕ್ಸರ್ ಸಹಿತ ಅಜೇಯ 80 ರನ್ ಗಳಿಸಿದರು.
ಆರ್ ಸಿಬಿ ದಾಖಲೆ ಮುರಿದ ಎಸ್‌ಆರ್ ಎಚ್
2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪುಣೆ ವಾರಿಯರ್ಸ್ ವಿರುದ್ಧ 20 ಓವರ್ ಗಳಲ್ಲಿ 263 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. 11 ವರ್ಷಗಳ ಬಳಿಕ ಆ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್ ಮುರಿದಿದೆ.












Click it and Unblock the Notifications