Viral Video 2026: ಎಸ್‌ಆರ್‌ಎಚ್ ಮನೆಗೆ ಹೊರಟ ಬೆನ್ನಲ್ಲೇ ಆರ್‌ಸಿಬಿಗೆ ಸವಾಲೆಸೆದ ಯುವತಿ ವಿಡಿಯೋ ವೈರಲ್

IPL Fan Viral Video: ಐಪಿಎಲ್ 2026ರ ಹಬ್ಬ ಅಂತಿಮ ಘಟ್ಟಕ್ಕೆ ತಲುಪಿದೆ. ಆದರೆ ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಲ್ಲನ್‌ನಲ್ಲಿ ಬುಧವಾರ (ಮೇ 28) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹೈದರಾಬಾದ್ ತಂಡದ ಅಭಿಮಾನಿ ಯುವತಿಯ ಹಳೆಯ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಧೂಳೆಬ್ಬಿಸುತ್ತಿರುವ ಈ ವಿಡಿಯೋದಲ್ಲಿ ಆರೆಂಜ್ ಆರ್ಮಿಯ ಜೆರ್ಸಿ ಧರಿಸಿದ ಯುವತಿಯೊಬ್ಬರು ಕ್ಯಾಮರಾ ಮುಂದೆ ಅತೀವವಾದ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದಾರೆ. ಹೈದರಾಬಾದ್ ಶೈಲಿಯ ತೆಲುಗಿನಲ್ಲಿ ಎದುರಾಳಿ ತಂಡಗಳಿಗೆ ಸವಾಲು ಹಾಕುವ ಆಕೆಯ ಆವೇಶ ಈಗ ಟ್ರೋಲ್ ಪೇಜ್‌ಗಳಿಗೆ ಆಹಾರವಾಗಿದೆ.

SRH Fan Girl Video Viral on Social media After IPL 2026 Eliminator Defeat Against Rajasthan Royals

ಎಸ್‌ಆರ್‌ಎಚ್‌ ಅಭಿಮಾನಿ ಹೇಳಿರುವುದೇನು?

ಈ ವಿಡಿಯೋದಲ್ಲಿ 'ಈ ಬಾರಿ 2016ರ ಇತಿಹಾಸ ಮರುಕಳಿಸಲಿದೆ. ಈ ಸಲ ಕಪ್ ನಮ್ಮದೇ. ಯಾರೇ ಎದುರಾಳಿಗಳು ಬಂದರೂ ನೋಡಿಕೊಳ್ಳೋಣ. ಆರ್‌ಸಿಬಿ ಇರಲಿ, ಎಲ್‌ಎಸ್‌ಜಿ ಇರಲಿ ಅಥವಾ ಎಂಐ ಇರಲಿ... ಯಾರೇ ಬಂದರೂ ನಾವು ಸಿದ್ಧರಿದ್ದೇವೆ. ಈ ಸಲ ಕಪ್ ಗೆದ್ದೇ ತೀರುತ್ತೇವೆ. ಈ ಬಾರಿ ಖಂಡಿತವಾಗಿಯೂ ನಮ್ಮದೇ ಕಪ್,' ಎಂದು ಸನ್‌ರೈಸರ್ಸ್‌ ಹೈದರಾಬಾದ್‌ ಜರ್ಸಿ ಧರಿಸಿರುವ ಯುವತಿಯೊಬ್ಬರು ಹೇಳಿದ್ದಾರೆ.

2016ರ ಐಪಿಎಲ್‌ ಇತಿಹಾಸ ಪ್ರಸ್ತಾಪ

ಈ ಯುವತಿಯು 2016ರ ಐಪಿಎಲ್‌ ಇತಿಹಾಸವನ್ನು ಪ್ರಸ್ತಾಪಿಸಿದ್ದರು. ಆ ವರ್ಷ ಸನ್ ರೈಸರ್ಸ್ ಹೈದರಾಬಾದ್ ತಂಡವು ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದೇ ರೀತಿ ಈ ಬಾರಿಯೂ ನಡೆಯುತ್ತದೆ ಎಂದು ಹೇಳಿದ್ದರು. ಆದರೆ 2026ರ ಎಲಿಮಿನೇಟರ್ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡ ಹೀನಾಯವಾಗಿ ಸೋಲುತ್ತಿದ್ದಂತೆ ಆಕೆಯ ಅತಿಯಾದ ಆತ್ಮವಿಶ್ವಾಸದ ಈ ವಿಡಿಯೋವನ್ನು ಇಟ್ಟುಕೊಂಡು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ನೆಟ್ಟಿಗರು ಹೇಳೋದೇನು?

ಯಾವುದೇ ತಂಡ ಸೋತಾಗ ಅಭಿಮಾನಿಗಳ ಹಳೆಯ ವಿಡಿಯೋಗಳನ್ನು ವೈರಲ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಈ ಯುವತಿಯ ಹೈದರಾಬಾದಿ ಹಿಂದಿ-ತೆಲುಗು ಮಿಶ್ರಿತ ಆವೇಶದ ಮಾತುಗಳನ್ನು ಇಟ್ಟುಕೊಂಡು ನೆಟ್ಟಿಗರು ಕಾಮಿಡಿ ಮಾಡುತ್ತಿದ್ದಾರೆ. 'ಅಯ್ಯೋ ಎಸ್‌ಆರ್‌ಎಚ್‌ ತಂಡ ಈಗಾಗಲೇ ಮನೆಗೆ ಹೋಗಿ ಆಯ್ತು.. ಮುಂದಿನ ಬಾರಿ ಕಪ್‌ ನಮ್ದೆ ಎಂದು ಘೋಷಣೆ ಕೂಗಿ ಮತ್ತೊಂದು ವಿಡಿಯೋ ಮಾಡಿ,' ಎಂದು ತಮಾಷೆ ಮಾಡಿ ಕಾಲೆಳೆದಿದ್ದಾರೆ. ಯಾವುದೇ ಆಗಲಿ ಅತಿಯಾಗಬಾರದು. ಒಂದು ವೇಳೆ ಹೀಗೆ ಆದರೆ ದೊಡ್ಡವರು ಹೇಳಿದಂತೆ ಅತಿಯಾದರೆ ಹಾಲು ಸಹ ವಿಷ ಆಗುತ್ತದೆ ಎಂಬಂತೆ ಟ್ರೋಲ್‌ಗಳಿಗೆ ಒಳಗಾಗುವುದಂತೂ ಖಂಡಿತ. ಹಾಗಂತ ಇವರಿಗೊಬ್ಬರಿಗೆ ಹೇಳುತ್ತಿಲ್ಲ ಈ ಮಾತನ್ನ, ಬದಲಾಗಿ ಎಲ್ಲಾರಿಗೂ ಅನ್ವಯ ಆಗುತ್ತದೆ.

ಒಟ್ಟಿನಲ್ಲಿ ಮೈದಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋತಿದ್ದರೆ, ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಈ ಯುವತಿಯ ಕಾನ್ಫಿಡೆನ್ಸ್ ವಿಡಿಯೋ ಮಾತ್ರ ಸೋಲಿಲ್ಲದ ಸರದಾರನಂತೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಭಿಮಾನಿಗಳ ಅತಿಯಾದ ನಿರೀಕ್ಷೆಗಳು ಕೆಲವೊಮ್ಮೆ ಹೇಗೆ ಹಾಸ್ಯಕ್ಕೆ ಕಾರಣವಾಗುತ್ತವೆ ಎಂಬುದಕ್ಕೆ ಈ ಘಟನೆಯೇ ಪ್ರಮುಖ ಸಾಕ್ಷಿ ಅಂದ್ರೆ ತಪ್ಪಾಗಲಾರದು. ಆದ್ದರಿಂದ ಯಾವುದೇ ತಂಡದ ಅಭಿಮಾನಿಗಳಾಗಿದ್ದರೂ ಕ್ರೀಡಾ ದೃಷ್ಟಿಯಿಂದ ಪಂದ್ಯ ವೀಕ್ಷಣೆ ಮಾಡಿ ಸಂತಸ ಪಡಬೇಕೆ ಹೊರತು, ಇನ್ನೊಂದು ತಂಡದ ಅಭಿಮಾನಿಗಳನ್ನು ಹೀಯಾಳಿಸಬಾರದು. ಇದು ಬರೀ ಹೆಣ್ಣುಮಕ್ಕಳಿಗಲ್ಲದೆ, ಗಂಡುಮಕ್ಕಳಿಗೂ ಸಹ ಅನ್ವಹಿಸುತ್ತದೆ ಎನ್ನುವುದನ್ನ ಮರೆಯಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+