ICC World Cup 2023: ಭಾರತ VS ಆಸ್ಟ್ರೇಲಿಯಾ ಫೈನಲ್ ಮ್ಯಾಚ್ ಫಿಕ್ಸ್?
2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಈಗ ಒಂದು ಹದಕ್ಕೆ ಬಂದು ನಿಂತಿದೆ, ಇಂದು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ & ದಕ್ಷಿಣ ಆಫ್ರಿಕಾ ನಡುವೆ 2ನೇ ಸೆಮಿಫೈನಲ್ ನಡೆಯುತ್ತಿದೆ. ಆದರೆ ಈಗಾಗಲೇ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದ್ದು, ಭಾರತ VS ಆಸ್ಟ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಹೇಗೆ ಗೊತ್ತಾ?
ದಕ್ಷಿಣ ಆಫ್ರಿಕಾ ತಂಡ ಯಾವಾಗಲೂ ಹೀಗೆ ಆಡುತ್ತೆ, ತನಗೆ ಸಿಗುವ ಅಮೂಲ್ಯ ಅವಕಾಶ ಹಾಳು ಮಾಡಿಕೊಳ್ಳುತ್ತದೆ. ಹೀಗೆ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸ ತೆಗೆದರೆ ಈ ಎಡವಟ್ಟುಗಳ ರಾಶಿಯೇ ದಕ್ಷಿಣ ಆಫ್ರಿಕಾ ತಂಡದಲ್ಲಿ ಸಿಗುತ್ತೆ. ಆದರೂ 2023ರಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ದಕ್ಷಿಣ ಆಫ್ರಿಕಾದ ಹಣೆಬರಹ ಬದಲಾಯಿಸಬಹುದು ಎನ್ನುವ ವಿಶ್ವಾಸ ಅಭಿಮಾನಿಗಳಿಗೆ ಇತ್ತು. ಆದ್ರೆ ಆ ನಿರೀಕ್ಷೆ ಕೂಡ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸುಳ್ಳಾಗಿ ಹೋಗಿದೆ.

ದಕ್ಷಿಣ ಆಫ್ರಿಕಾ ಸೋಲು ಫಿಕ್ಸ್?
ಅಷ್ಟಕ್ಕೂ ಈಗಿನ ಲೆಕ್ಕಾಚಾರದಂತೆ ನೋಡುವುದಾದ್ರೆ ಕೊಲ್ಕತ್ತ ನಗರದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ, 2ನೇ ಸಮಿಫೈನಲ್ ಆಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಕೇವಲ 212 ರನ್ ಗಳಿಸಿ ಸರ್ವ ಪತನ ಕಂಡಿದೆ. ಆದರೆ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಈ ಸ್ಕೋರ್‌ನ ಸುಲಭವಾಗಿ ಚೇಸ್ ಮಾಡುವುದು ಕಷ್ಟ ಆಗಲ್ಲ. ಟಾಸ್ ಗೆದ್ದು ಮೊದ್ಲು ಬ್ಯಾಟ್ ಬೀಸಿದ ದಕ್ಷಿಣ ಆಫ್ರಿಕಾ ತಂಡ, 49.4 ಓವರ್‌ಗೆ 212 ರನ್ ಗಳಿಸಿ ಆಲೌಟ್ ಆಗಿದೆ. ಹಾಗೆ ದಕ್ಷಿಣ ಆಫ್ರಿಕಾ ತಂಡದ ಒಬ್ಬೊಬ್ಬ ಅಟಗಾರನ ರನ್ ಕೂಡ, ಮೊಬೈಲ್ ನಂಬರ್‌ನ ರೀತಿ ಇತ್ತು ಅಂತಾ ಅಭಿಮಾನಿಗಳು ಆಡಿಕೊಳ್ಳುತ್ತಿದ್ದಾರೆ.
ಬಂದವರೆಲ್ಲಾ ಎಸ್ಕೇಪ್ ಆಗೋದ್ರು!
ವಿಶ್ವಕಪ್ ಕ್ರಿಕೆಟ್ ಟೂರ್ನಿ ಅಂದ್ರೆ ಸಾಕಷ್ಟು ತಾಳ್ಮೆ ಬೇಕಿರುತ್ತೆ, ಆದ್ರೆ ಇಂದಿನ ಮ್ಯಾಚ್‌ನ ನೋಡಿದ್ರೆ ದಕ್ಷಿಣ ಆಫ್ರಿಕಾ ತಂಡದ ಆಟಗಾರರಲ್ಲಿ ತಾಳ್ಮೆ ಅನ್ನೋದು ಕಾಣಲೇ ಇಲ್ಲ. ಈ ಮಧ್ಯೆ, ಆರಂಭಿಕರಾಗಿ ಬಂದ ಕ್ವಿಂಟನ್ ಡಿ ಕಾಕ್ ಮತ್ತು ಟೆಂಬಾ ಬವುಮಾ ಕ್ರಮವಾಗಿ 03 ಹಾಗೂ 00 ರನ್ ಸುತ್ತಿ ಹೋದರು. ಹೀಗಿದ್ದಾಗ ಮುಂದೆ ಬಂದ ದಕ್ಷಿಣ ಆಫ್ರಿಕಾದ ಮತ್ತೆ ಇಬ್ಬರು ದಾಂಡಿಗರು ಭಾರಿ ಮಳೆಗೆ ಕೊಚ್ಚಿ ಹೋಗುವ ಹುಲ್ಲು ಕಡ್ಡಿಯಂತೆ ಔಟ್ ಆದ್ರು. ಆದರೆ ಕೊನೆಗೆ ಸೌತ್ ಆಫ್ರಿಕಾ ತಂಡಕ್ಕೆ ನೆರವಾಗಿದ್ದು ಮಾತ್ರ ಡೇವಿಡ್ ಮಿಲ್ಲರ್. ಭರ್ಜರಿ ಶತಕ ಬಾರಿಸಿದ ಮಿಲ್ಲರ್ 101 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡ 212 ರನ್ ಗಳಿಸುವಲ್ಲಿ ದೊಡ್ಡ ಕೊಡುಗೆ ನೀಡಿದರು.

ಹೀಗೆ ದಕ್ಷಿಣ ಆಫ್ರಿಕಾ ನೀಡಿದ 212 ರನ್ ಗುರಿಯನ್ನು ಆಸ್ಟ್ರೇಲಿಯಾ ತಂಡ ಸುಲಭವಾಗಿ, ಅತಿ ವೇಗವಾಗಿ ಬೆನ್ನತ್ತುವ ನಿರೀಕ್ಷೆ ಇದೆ. ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ಮ್ಯಾಚ್ ಬಹುತೇಕ ಫಿಕ್ಸ್ ಅಂತಾನೇ ಹೇಳಲಾಗುತ್ತಿದೆ. ಹೀಗಾಗಿ, ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಮ್ಮೆ ಭಾರತ & ಆಸ್ಟ್ರೇಲಿಯಾದ ನಡುವೆ ಭರ್ಜರಿ ವಿಶ್ವಕಪ್ ಫೈನಲ್ ನಡೆಯೋದು ಬಹುತೇಕ ಗ್ಯಾರಂಟಿ ಆಗಿದೆ.












Click it and Unblock the Notifications