India vs New Zealand: ಭಾರತ ಕ್ರಿಕೆಟ್ ಆಟಗಾರರ ಹೀನಾಯ ಪ್ರದರ್ಶನ ಕಂಡು ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿ!
ಭಾರತ ಕ್ರಿಕೆಟ್ ತಂಡದ ಆಟ ಕಂಡು ಇಂದು ಭಾರತೀಯರು ಕೆರಳಿ ಕೆಂಡವಾಗಿದ್ದಾರೆ. ಈ ಆಟವನ್ನ ಗಲ್ಲಿ ಕ್ರಿಕೆಟ್ ಆಟಗಾರರು ಕೂಡ ಆಡುವುದಿಲ್ಲ ಅಂತಾ ಭಾರತದ ಕ್ರಿಕೆಟ್ ಫ್ಯಾನ್ಸ್ ಈಗ ಗೊಣಗುತ್ತಿದ್ದಾರೆ. ಅದರಲ್ಲೂ ನಮ್ಮ ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಮ್ಯಾಚ್ ಹೀನಾಯ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಹಾಗಾದ್ರೆ ಟೀಂ ಇಂಡಿಯಾದ ಹೀನಾಯ ಪ್ರದರ್ಶನದ ಬಗ್ಗೆ ಸೋಷಿಯಲ್ ಮೀಡಿಯಾ ಏನ್ ಹೇಳುತ್ತಿದೆ?
ಭಾರತ ಕ್ರಿಕೆಟ್ ತಂಡ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ನಮ್ಮ ಬೆಂಗಳೂರಿನಲ್ಲಿ ಭಾರತ ಕ್ರಿಕೆಟ್ ತಂಡದ ಅಭಿಮಾನಿ ಬಳಗ ಅತ್ಯಂತ ಖುಷಿಯಿಂದ ಕಾಯ್ತಾ ಇದ್ದರು. ಕಳೆದ 4 ದಿನಗಳಿಂದ ಗ್ಯಾಪ್ ಕೊಡದೆ ಸುರಿಯುತ್ತಿದ್ದ ಮಳೆರಾಯ ಇಂದು ಸ್ವಲ್ಪ ಗ್ಯಾಪ್ ಕೊಟ್ಟ ಕಾರಣಕ್ಕೆ ಮ್ಯಾಚ್ ಶುರುವಾಗಿತ್ತು.

ಹೀಗಿದ್ದರೂ ಭಾರತದ ಬ್ಯಾಟಿಂಗ್ ಕಳಪೆಯಾಗಿದ್ದ ಕಾರಣಕ್ಕೆ, ಒಳ್ಳೆ ತರಗೆಲೆ ರೀತಿ ಭಾರತದ ಆಟಗಾರರು ಔಟ್ ಆಗಿ ಹೋದರು. ಈ ಮೂಲಕ ಭಾರತ ಕ್ರಿಕೆಟ್ ತಂಡ ಅನಗತ್ಯ ದಾಖಲೆ ಸೃಷ್ಟಿಸಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾ ಕೂಡ ರೊಚ್ಚಿಗೆದ್ದಿದೆ. ಭಾರತ ಆಡಿರುವ ಕಳಪೆ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ನಡುವೆ ಟ್ರೋಲ್ ಹಾವಳಿ ಕೂಡ ಜೋರಾಗಿಬಿಟ್ಟಿದೆ!
enjoy 😂😂 #INDvsNZpic.twitter.com/U04FwdvVrZ
— Ashraf. (@akhunzada74) October 17, 2024
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹೋಗಲ್ವಾ?
ಭಾರತ ತಂಡ ಈ ಬಾರಿಯ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದರು. ಆದ್ರೆ ಈಗ ನೋಡಿದರೆ ಪರಿಸ್ಥಿತಿ ಬೇರೆಯೇ ಆಗಿದೆ, ನ್ಯೂಜಿಲೆಂಡ್ ವಿರುದ್ಧ ಇದೀಗ ಹೀನಾಯವಾಗಿ ಪ್ರದರ್ಶನ ನೀಡಿರುವ ಭಾರತ ತಂಡ ಈ ಮ್ಯಾಚ್ ಸೋತು ಹೋದರೆ ಮುಂದೆ ಕಷ್ಟ ಕಷ್ಟ. ಹೀಗಾಗಿ ಮುಂದೆ ಫೈನಲ್‌ಗೆ ಕೂಡ ಎಂಟ್ರಿ ಕೊಡುವುದು ಭಾರತ ತಂಡಕ್ಕೆ ಸಮಸ್ಯೆಯಾಗುತ್ತೆ.
NOTHING, just the Indian batting lineup today #INDvsNZ pic.twitter.com/rG3ZIep0ZW
— TEAM VR RAJA (@TEAM_VR_RAJA) October 17, 2024
ಚಚ್ಚಿ ಬಿಸಾಡುತ್ತಿರುವ ನ್ಯೂಜಿಲೆಂಡ್!
ಭಾರತ ತಂಡ ಹೀನಾಯ ಪ್ರದರ್ಶನ ನೀಡಿದ್ರೆ ಮತ್ತೊಂದು ಕಡೆ ನ್ಯೂಜಿಲೆಂಡ್ ತಂಡದಿಂದ ಅತ್ಯುತ್ತಮ ಆಟವೇ ಹೊರ ಬರುತ್ತಿದೆ. ಭಾರತ ನೀಡಿದ್ದ 46 ರನ್‌ಗಳ ಗುರಿ ಬೆನ್ನು ಹತ್ತಿದ್ದ ನ್ಯೂಜಿಲೆಂಡ್ ತಂಡ ಈಗಾಗಲೇ 180 ರನ್ ಬಾರಿಸಿದ್ದು ಕೇವಲ 3 ವಿಕೆಟ್ ಕಳೆದುಕೊಂಡಿದೆ. ಹೀಗಾಗಿ ಭಾರತ ತಂಡಕ್ಕೆ ಈ ಮ್ಯಾಚ್ ಗೆಲ್ಲುವುದು ಕಷ್ಟ ಆಗುತ್ತಾ? ಎಂಬ ಆತಂಕ ಇದೀಗ ಅಭಿಮಾನಿಗಳನ್ನ ಕಾಡುತ್ತಿದೆ.












Click it and Unblock the Notifications