Smriti Mandhana: ಪ್ರೀತಿಯಲ್ಲಿ ಬಿದ್ದು 5 ವರ್ಷ! ಗೆಳೆಯನ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಸ್ಮೃತಿ ಮಂಧಾನ
ಮಹಿಳಾ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್, ಆರ್ ಸಿಬಿ ತಂಡಕ್ಕೆ ಮೊದಲ ಕಪ್ ಗೆದ್ದುಕೊಟ್ಟ ನಾಯಕಿ, ಹಲವು ಹಡುಗರ ಕನಸಿನ ಹುಡುಗಿ ಸ್ಮೃತಿ ಮಂಧಾನ ಪ್ರೀತಿಯಲ್ಲಿ ಬಿದ್ದು ಐದು ವರ್ಷ ಪೂರೈಸಿದೆ!
ಸ್ಮೃತಿ ಮಂಧಾನ ಹಲವು ಕ್ರಿಕೆಟ್ ಅಭಿಮಾನಿಗಳ ಕ್ರಷ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸ್ಮೃತಿ ಮಂಧಾನ ಅವರು ಈಗಾಗಲೇ ತಮ್ಮ ಜೀವನದ ಸಹಪಾಠಿಯನ್ನು ಹುಡುಕಿಕೊಂಡಿದ್ದಾರೆ. ಆರ್ ಸಿಬಿ ಕಪ್ ಗೆದ್ದಾಗ ಕೂಡ ಬಾಯ್‌ಫ್ರೆಂಡ್ ಜೊತೆ ಫೋಟೊ ತೆಗೆಸಿಕೊಂಡಿದ್ದರು.

ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗೆ ಸ್ಮೃತಿ ಮಂಧಾನ ಪ್ರೀತಿಯಲ್ಲಿದ್ದು, ಅವರಿಬ್ಬರ ಈ ಬಾಂಧವ್ಯಕ್ಕೆ ಐದು ವರ್ಷ ತುಂಬಿದೆ. ಇದೇ ಖುಷಿಯಲ್ಲಿ ಇಬ್ಬರು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.
ಪಲಾಶ್ ಮುಚ್ಚಲ್ ಅವರು ಸ್ಮೃತಿ ಮಂಧಾನ ಜೊತೆ ಇರುವ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ #5 ಮತ್ತು ಹೃದಯದ ಇಮೋಜಿ ಹೊರತುಪಡಿಸಿ ಏನೂ ಮಾಹಿತಿ ನೀಡಿಲ್ಲ. ಪಲಾಶ್ ಅವರ ಸಹೋದರಿ ಪಾಲಕ್ ಮತ್ತು ಸ್ಮೃತಿ ಕೂಡ ಪೋಸ್ಟ್‌ನಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ, ಸ್ಮೃತಿ ಮಂಧಾನ ಗೆಳೆಯನಿಗೆ ಮೂರು ಹೃದಯಗಳ ಇಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಪಲಾಶ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರ ಸಹೋದರಿ ಪಾಲಕ್ ಮುಚ್ಚಲ್, "ಮೈ ಕ್ಯೂಟೀಸ್" ಎಂದು ಕಾಮೆಂಟ್ ಮಾಡಿದ್ದಾರೆ. ನಟ ಪಾರ್ಥ್ ಸಮತಾನ್ ಅವರು ಕಾಮೆಂಟ್ ವಿಭಾಗದಲ್ಲಿ ಹೃದಯದ ಎಮೋಜಿಯೊಂದಿಗೆ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಮತ್ತೊಂದೆಡೆ, ರುಬಿನಾ ದಿಲೈಕ್ 'ನೀವಿಬ್ಬರೂ' ಎಂದು ಕಮೆಮಟ್ ಮಾಡಿದ್ದಾರೆ.
ಇದಕ್ಕೂ ಮೊದಲು, ಪಲಾಶ್ ಅವರು ಸ್ಮೃತಿ ಪಿಯಾನೋ ನುಡಿಸಲು ಕಲಿಯುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಸ್ಮೃತಿ ಪಿಯಾನೋ ಕಲಿಯುತ್ತಿದ್ದರೆ, ಪಲಾಶ್ ಮಾರ್ಗದರ್ಶನ ನೀಡುತ್ತಿದ್ದಾರೆ.
ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಲವು ತಿಂಗಳಿನಿಂದ ಹರಿದಾಡುತ್ತಿವೆ. ಮೊದಲ ಬಾರಿಗೆ ಅವರು ತಮ್ಮ 5 ನೇ ವಾರ್ಷಿಕೋತ್ಸವದ ಪೋಸ್ಟ್‌ನೊಂದಿಗೆ ಅದನ್ನು ಅಧಿಕೃತಗೊಳಿಸಿದ್ದಾರೆ.
ಪಲಾಶ್ ಮುಚ್ಚಲ್ ಯಾರು?
29 ವರ್ಷದ ಪಲಾಶ್ ಮುಚ್ಚಲ್ ಸಂಗೀತ ನಿರ್ದೇಶಕ ಮತ್ತು ಸಿನಿಮಾ ನಿರ್ಮಾಪಕ. ಪಲಾಶ್ ಮುಚ್ಚಲ್ ಅಕ್ಕ ಪಾಲಕ್ ಮುಚ್ಚಲ್ ಬಾಲಿವುಡ್‌ನಲ್ಲಿ ಗಾಯಕಿಯಾಗಿ ಹೆಸರು ಮಾಡಿದ್ದಾರೆ. ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಸೇರಿ ಹಲವು ಪ್ರಮುಖ ಸಿನಿಮಾನಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಅವರು ಅಭಿಷೇಖ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಜೊತೆಗೆ ಅಶುತೋಷ್ ಗೋವಾರಿಕರ್ ಸಿನಿಮಾವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಪಲಾಶ್ ಅವರು ಟಿಸಿರೀಸ್, ಜೀ ಮ್ಯೂಸಿಕ್ ಕಂಪನಿ ಮತ್ತು ಪಾಲ್ ಸಂಗೀತಕ್ಕಾಗಿ 40 ಕ್ಕೂ ಹೆಚ್ಚು ಸಂಗೀತ ವೀಡಿಯೊಗಳನ್ನು ಮಾಡಿದ್ದಾರೆ. ಅವರು ರಿಕ್ಷಾ ಎಂಬ ವೆಬ್‌ಸರಣಿಯನ್ನು ನಿರ್ದೇಶಿಸಿದ್ದಾರೆ ಮತ್ತು ರಾಜ್‌ಪಾಲ್ ಯಾದವ್ ಮತ್ತು ರುಬಿನಾ ದಿಲಾಯಿಕ್ ನಟಿಸಿದ "ಅರ್ಧ್" ಎಂಬ ಚಲನಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿಗೆ ಮುನ್ನ ಆರ್ ಸಿಬಿ ತಂಡಕ್ಕೆ 3.40 ಕೋಟಿ ರೂಪಾಯಿಗೆ ಹರಾಜಾಗಿದ್ದ ಸ್ಮೃತಿ ಮಂಧಾನ, ನಾಯಕಿಯಾಗಿ ಎರಡನೇ ಆವೃತ್ತಿಯಲ್ಲೇ ಕಪ್ ಗೆದ್ದು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.












Click it and Unblock the Notifications