ಶ್ರೇಯಸ್ ಅಯ್ಯರ್‌ ವಿಕೆಟ್‌ ಪಡೆದ ತಾಯಿ: ವಿಡಿಯೋ ವೈರಲ್

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳ ಪಟ್ಟಿ ನೋಡಿದರೆ ಈ ಪಟ್ಟಿಯಲ್ಲಿ ಎದ್ದು ಕಾಣುವ ಆಟಗಾರ ಶ್ರೇಯಸ್ ಅಯ್ಯರ್. ಸೀಮಿತ ಓವರ್‌ಗಳಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಛಾಪು ಮೂಡಿಸಿದ ಆಟಗಾರ. ಇವರನ್ನು ಔಟ್ ಮಾಡಲು ಎದುರಾಳಿ ಬೌಲರ್‌ಗಳು ಹೈರಾಣಾಗುತ್ತಾರೆ. ಆದರೆ ಇವರನ್ನು ಔಟ್ ಮಾಡಿ ಅಯ್ಯರ್ ಅವರ ತಾಯಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ವೈರ್ ಆಗುತ್ತಿದೆ.

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿಯೂ ಗಮನ ಸೆಳೆದಿದ್ದಾರೆ. ಸದ್ಯ ಶ್ರೇಯಸ್ ಅಯ್ಯರ್ ತಂಡದಿಂದ ದೂರ ಉಳಿದಿದ್ದಾರೆ. ಈ ವೇಳೆ ಶ್ರೇಯಸ್ ತಮ್ಮ ಕುಟುಂಬಸ್ಥರ ಜೊತೆಗೆ ಸಮಯವನ್ನು ಕಳೆಯುತ್ತಿದ್ದಾರೆ. ಇದೇ ವೇಳೆ ಮನೆಯಲ್ಲಿ ಕ್ರಿಕೆಟ್‌ ಆಡುತ್ತಿರುವ ವಿಡಿಯೋ ಸಖತ್ ಸದ್ದು ಮಾಡತ್ತಿದೆ. ಈ ವಿಡಿಯೋವನ್ನು ಪಂಜಾಬ‌ ಕಿಂಗ್ಸ್ ತಂಡ ಹಂಚಿಕೊಂಡಿದೆ.

Shreyas Iyer s Mom Bowls Him Out Viral Video Delights Fans

ವಿಡಿಯೋದಲ್ಲಿ ಶ್ರೇಯಸ‌ ಅಯ್ಯರ್ ಹಾಗೂ ಅವರ ತಾಯಿಯನ್ನು ಕಾಣಬಹುದಾಗಿದೆ. ಈ ವಿಡಿಯೋದಲ್ಲಿ ತಾಯಿ ಬೌಲಿಂಗ್ ಮಾಡುತ್ತಿದ್ದು, ಮಗ ಶ್ರೇಯಸ್‌ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ಎಸೆತವನ್ನು ಶ್ರೇಯಸ್ ಕಲಾತ್ಮಕವಾಗಿ ಡಿಫೆನ್ಸ್ ಮಾಡಿದರೆ, ಎರಡನೇ ಎಸೆತದಲ್ಲಿ ಬಿಟ್ ಆಗಿದ್ದು ಕಂಡು ಬಂದಿದೆ. ಈ ವೇಳೆ ತಾಯಿ ವಿಕೆಟ್ ಪಡೆದವರ ರೀತಿ ಸಂಭ್ರಮಿಸಿ ಖುಷಿ ಪಟ್ಟಿದ್ದಾರೆ. ಈ ಟ್ವೀಟ್ ಭಾರೀ ವೈರಲ್ ಆಗುತ್ತಿದೆ. ಇದಕ್ಕೆ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ಭಾರೀ ವೈರಲ್

ಅಭಿಮಾನಿಗಳಲ್ಲಿ ಒಬ್ಬರು ಆಂಟಿ ಎರಡನೇ ಟೆಸ್ಟ್‌ಗೆ ಲಭ್ಯರಿದ್ದಾರೇಯೆ ಎಂದು ಕೇಳಿದ್ದಾರೆ. ಇನ್ನು ಒಬ್ಬ ನೆಟ್ಟಿಗ ತಾಯಿ ಎಸೆದ ಚೆಂಡು ಹಾಗೂ ಚಪ್ಪಲ ಎಂದು ಮಿಸ್ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ತಮ್ಮದೆ ಆದ ಧಾಟಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ತಂಡ ಲೀಗ್‌ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಪರಿಣಾಮ ಮೊದಲ ಕ್ವಾಲಿಫೈಯರ್‌ನಲ್ಲಿ ಆಡಿ, ಆರ್‌ಸಿಬಿ ವಿರುದ್ಧ ಸೋಲು ಕಂಡಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಮಣಿಸಿದ ಪಂಜಾಬ್‌ ಫೈನಲ್‌ಗೆ ಅರ್ಹತೆ ಪಡೆದಿತ್ತು. ಅಲ್ಲದೆ ಫೈನಲ್‌ ಪಂದ್ಯದಲ್ಲಿ ಸೋಲು ಕಂಡು ನಿರಾಸೆಯನ್ನು ಅನುಭವಿಸಿತ್ತು. ಪಂಜಾಬ್‌ ಇತಿಹಾಸದಲ್ಲಿ ಎರಡನೇ ಬಾರಿಗೆ ಫೈನಲ್‌ ತಲುಪಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+