Shreyanka Patil: ಕನ್ನಡತಿ 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ತಂಡಕ್ಕೆ ಆಯ್ಕೆ ಆಗಿದ್ದೇಗೆ..?

ಕರ್ನಾಟಕದ ಟಗರು ಪುಟ್ಟಿ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೇಯಾಂಕಾ ಪಾಟೀಲ್ ಸದ್ಯ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ಹೊಸ ಕ್ರಶ್‌. 2024ರ ಡಬ್ಲ್ಯೂಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ಕಪ್ ಗೆಲ್ಲುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಕಪ್ ಗೆದ್ದು ಟ್ರೆಂಡ್‌ನಲ್ಲಿರುವ ಶ್ರೇಯಾಂಕಾ ಪಾಟೀಲ್ ತಾವು ಆರ್‌ಸಿಬಿ ಟೀಂಗೆ ಆಯ್ಕೆಯಾಗಿರುವುದು ಹೇಗೆ..? ಆ ಕ್ಷಣ ಹೇಗಿತ್ತು ಎನ್ನುವುದರ ಕುರಿತು ಮಾತನಾಡಿದ್ದಾರೆ.

ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಡಬ್ಲ್ಯೂಪಿಎಲ್‌ ಹರಾಜು ದಿನ ನನಗೆ ಎಲ್ಲಾ ಅಪ್ಸ್‌ ಆ್ಯಂಡ್‌ ಡೌನ್ಸ್‌ ತರ ಇತ್ತು. ಮೊದಲು ಹೇಲಿ ಮ್ಯಾಥ್ಯೂಸ್ ಅನ್ಸೋಲ್ಡ್ ಆಯ್ತು. ನಾ ಅಂದೆ ಹೇಲಿ ಮ್ಯಾಥ್ಯೂಸ್ ಮುಂದೆ ನಾನು ಏನು. ಆಕೆ ಅನ್ಸೋಲ್ಡ್ ಆದರೆ ನನ್ನನ್ನು ಯಾರು ಆಯ್ಕೆ ಮಾಡುತ್ತಾರೆ. ಯಾರಿಗಾದರೂ ಆ ಆಲೋಚನೆ ಬರುತ್ತದೆ ಯಾಕೆಂದರೆ ಹೇಲಿ ಮ್ಯಾಥ್ಯೂಸ್ ಒಬ್ಬರು ಲೆಜೆಂಡ್‌.

Shreyanka Patil Talks About The Moment She Was Selected For The RCB Team

ನಾನು ಸರ್‌ ಜೊತೆನೆ ಡಬ್ಲ್ಯೂಪಿಎಲ್‌ ಹರಾಜು ನೋಡುತ್ತಿದ್ದೆ. ಪ್ಲೀಸ್ ಆಫ್‌ ಮಾಡಿ ಸಾಕು ಅಂದಿದ್ದೆ. ಯಾಕೆಂದರೆ ಹೇಲಿ ಮ್ಯಾಥ್ಯೂಸ್ ಅನ್ಸೋಲ್ಡ್ ಅಂದರೆ ಶ್ರೇಯಾಂಕಾ ಪಾಟೀಲ್ ಯಾರಿಗೆ ಗೊತ್ತು. ಆಮೇಲೆ ಹಂಗೆ ನೋಡುತ್ತಿದ್ದೇವು. ಸುಮಾರು ಆರು ಗಂಟೆ ಅಷ್ಟೊತ್ತಿಗೆ ಒಂದು ದೊಡ್ಡ ಬ್ರೇಕ್ ಕೊಟ್ಟರು. ಆ ಸಮಯದಲ್ಲಿ ಎಷ್ಟು ಆಲೋಚನೆಗಳು ಬರುತ್ತದೆ.

ಆ ವೇಳೆ ಬನ್ನಿ ಪಾನಿಪುರಿ ತಿನ್ನೋಣ ಸ್ವಲ್ಪ ಮೈಂಡ್‌ ಫ್ರೆಶ್‌ ಮಾಡಿಕೊಂಡು ಬರೋಣ ಅಂದೆ. ಅದಾದ ಮೇಲೆ ಮತ್ತೆ ಶುರುವಾಯ್ತು ಫೈನಲಿ ನನ್ನ ಹೆಸರು ಬಂತು. ನನಗೆ ಏನು ಅಂದರೆ ಬೋರ್ಡ್‌ ಎತ್ತಿ ಅನ್ಸೋಲ್ಡ್ ಅಂತಾ ಮಾಡಬಾರದು. ಕೊನೆ ಪಕ್ಷ ಐದರಿಂದ ಹತ್ತು ಸೆಕೆಂಡ್‌ ಕಾಯಬೇಕು ಅನ್ನೋದಿತ್ತು. ಆಮೇಲೆ 317 ಶ್ರೇಯಾಂಕಾ ಪಾಟೀಲ್ ಅಂದಾಗ ನಾನು ಕಣ್ಣು ಮುಚ್ಚಿಕೊಂಡೆ. ಎಲ್ಲಿ ಈಗ ಅನ್ಸೋಲ್ಡ್ ಹೋದರೆ ಏನು ಮಾಡುವುದು ಅಂತಾ. ಒಂದು ವೇಳೆ ಸೋಲ್ಡ್‌ ಆದರೆ ಆಮೇಲೆ ಖುಷಿಪಡಬಹುದು.

Shreyanka Patil Talks About The Moment She Was Selected For The RCB Team

317 ಶ್ರೇಯಾಂಕಾ ಪಾಟೀಲ್ ಅಂದಾಗ ಆರ್‌ಸಿಬಿ ಅವರು ಎತ್ತಿದರು. ಆಗ ನಾನು ಅಲ್ಲೇ ಸಾಕು ಸ್ಟಾಪ್‌ ಮಾಡಿ ಅಂತಾ ಅಂದುಕೊಳ್ಳುತ್ತಿದೆ. ಆಮೇಲೆ ಸೋಲ್ಡ್‌ ಫಾರ್ ಆರ್‌ಸಿಬಿ ಅಂದ್ರು. ಆ ಕ್ಷಣದ ಖುಷಿಯನ್ನು ನಾನು ಹೇಳಿಕೊಳ್ಳಲಾಗುವುದಿಲ್ಲ. ಫುಲ್‌ ಬ್ಲಾಂಕ್ ಆದೆ. ಕಣ್ಣಲ್ಲಿ ನೀರಿತ್ತು. ಅತ್ತು ಬಿಟ್ಟಿದ್ದೆ ಕೂಡ.

ಚಿಕ್ಕವಳಿರುವಾಗಲಿಂದಲೇ ಆರ್‌ಸಿಬಿ.. ಆರ್‌ಸಿಬಿ ಅಂದುಕೊಂಡು ಬಂದೆ. ಒಂದು ದಿನ ಡಬ್ಲ್ಯೂಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ಟೀಂಗೆ ಆಯ್ಕೆ ಆಗಿದ್ದೇನೆ. ಆರ್‌ಸಿಬಿ ಟೀಂನಲ್ಲಿ ಇರುತ್ತೇನೆ. ಆ ಜರ್ಸಿ ಹಾಕಿಕೊಳ್ಳುತ್ತೇನೆ. ಇವುಗಳನೆಲ್ಲಾ ನಾನು ಎಂದೂ ಅಂದುಕೊಂಡಿರಲಿಲ್ಲ. ಹಿಂದಿನ ದಿನ ಒಂದು ಚಿಕ್ಕ ಹುಡುಗಿ ತರ ಪ್ರಾಕ್ಟೀಸ್‌ ಮಾಡುತ್ತಿದ್ದೆ. ಯಾರಿಗೆ ಗೊತ್ತಿತ್ತು.. ಆ ಹುಡುಗಿ ಆರ್‌ಸಿಬಿ ಟೀಂ ಅಲ್ಲಿ ಆಯ್ಕೆ ಆಗುತ್ತಾಳೆ ಅಂತಾ ಎಂದು ಶ್ರೇಯಾಂಕಾ ಪಾಟೀಲ್ ಆರ್‌ಸಿಬಿಗೆ ಆಯ್ಕೆ ಆಗಿರುವ ಕ್ಷಣವನ್ನು ಮೆಲುಕು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+