T20 World Cup: ಟೀಮ್ ಇಂಡಿಯಾ ಟೆನ್ಷನ್‌ ಹೆಚ್ಚಿಸಿದ ಶಿವಂ ದುಬೆ ಫಾರ್ಮ್‌

ಇಂಡಿಯನ್ ಪ್ರೀಮಿಯರ್‌ ಲೀಗ್‌ನ ಮೊದಲಾರ್ಧದಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಏಕೆಂದರೆ ಆಲ್‌ರೌಂಡರ್‌ ಸ್ಥಾನಕ್ಕಾಗಿ ಹಲವು ಯುವ ಆಟಗಾರರು ಪೈಪೋಟಿ ನಡೆಸುತ್ತಾ ಇದ್ದರು. ಅಲ್ಲದೆ ಟಿ20 ವಿಶ್ವಕಪ್ ತಂಡದಲ್ಲಿ ತಮ್ಮನ್ನು ತಂಡದ ಆಯ್ಕೆಯಲ್ಲಿ ಪರಿಗಣಿಸುವಂತಹ ಇನ್ನಿಂಗ್ಸ್‌ ಕಟ್ಟಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಇದೇ ಸಾಲಿನಲ್ಲಿ ನಿಂತು ಕೊಳ್ಳುವ ಆಟಗಾರ ಶಿವಂ ದುಬೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಈ ಸ್ಟಾರ್ ಆಲ್‌ರೌಂಡರ್ ಆಟ ಕಂಡು ಫ್ಯಾನ್ಸ್‌ ಫುಲ್ ಖುಷ್ ಆಗಿದ್ದರು. ಮಿಡ್ಲ್ ಆರ್ಡರ್‌ನಲ್ಲಿ ಧಮಾಕೆದಾರ್ ಬ್ಯಾಟಿಂಗ್ ಮಾಡಿ ಎದುರಾಳಿಗಳಿಗೆ ನಡುಕ ಹುಟ್ಟುಸುತ್ತಿದ್ದ ಆಟಗಾರ ಈತ. ಐಪಿಎಲ್‌ನ ಮೊದಲಾರ್ಧದಲ್ಲಿ ಬರೀ ಬೌಂಡರಿ, ಸಿಕ್ಸರ್‌ಗಳ ಮೂಲಕ ರನ್‌ಗಳನ್ನು ಡೀಲ್ ಮಾಡ್ತಾ ಇದ್ದ ಶಿವಂ ದುಬೆ ಆಟ ಕಂಡು, ಬಿಸಿಸಿಐ ಟಿ20 ವಿಶ್ವಕಪ್‌ ತಂಡದಲ್ಲಿ ಈ ಯುವ ಆಟಗಾರನಿಗೆ ಮಣೆ ಹಾಕಿತು.

Shivam Dubey s Form Slump A Major Worry for Team India Ahead of Key Matches

ರಿಂಕು ಸ್ಥಾನಕ್ಕೆ ಕುತ್ತು

ಭಾರತದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಹಾಗೂ ಹಿಂದಿನ ಕೆಲವು ಪಂದ್ಯದಲ್ಲಿ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಂಕು ಸಿಂಗ್‌, ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಮಂಕಾಗಿತ್ತು. ಹೀಗಾಗಿ ಆರ್‌ಸಿಬಿ ಓಡುವ ಕುದುರೆಗೆ ಮಣೆ ಹಾಕಿತು. ಐಪಿಎಲ್‌ 2024ರಲ್ಲಿ ಶಿವಂ ದುಬೆ ಹೆಚ್ಚಾಗಿ ಇಂಪ್ಯಾಕ್ಟ್‌ ಪ್ಲೇಯರ್‌ ರೂಪದಲ್ಲಿ ಕಾಣಿಸಿಕೊಂಡರು. ಅವರ ಮುಗಿಲೆತ್ತರದ ಸಿಕ್ಸರ್‌ಗಳು ಹಾಗೂ ವೇಗವಾಗಿ ರನ್‌ ಕಲೆ ಹಾಕುವ ಪರಿ ಬಿಸಿಸಿಐ ಆಯ್ಕೆ ಮಂಡಳಿ ಮನಸ್ಸು ಗೆದ್ದಿತು.

ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದ ದುಬೆ

ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಾಗಿನಿಂದ ಶಿವಂ ಬ್ಯಾಟ್ ಮೌನಕ್ಕೆ ಶರಣಾಗಿದೆ. ರನ್‌ ಮಹಲ್ ಕಟ್ಟಿ ತಂಡಕ್ಕೆ ನೆರವಾಗುತ್ತಿದ್ದ ಸೂಪರ್ ಸ್ಟಾರ್‌ ಬ್ಯಾಟ್‌ ಲಯ ಕಳೆದುಕೊಂಡಿದೆ.. ಐಪಿಎಲ್‌ನ ಎರಡನೇ ಅವಧಿಯಲ್ಲಿ ಶಿವಂ ಅವರ ಬ್ಯಾಟ್ ತುಕ್ಕು ಹಿಡಿದಂತೆ ಕಾಣುತ್ತಿದೆ. ದುಬೆ ಮೈದಾನದಲ್ಲಿ ನಿರಂತರವಾಗಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದು ಬಿಸಿಸಿಐ ಚಿಂತೆಯನ್ನು ಹೆಚ್ಚಿಸಿದೆ.

ಶಿವಂ ದುಬೆ ತಂಡಕ್ಕೂ ಆಯ್ಕೆ ಆಗುವ ಮುನ್ನ 172 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಶಿವಂ ದುಬೆ 58 ರ ಸರಾಸರಿಯಲ್ಲಿ ರನ್ ಗಳಿಸಿದರು. ಆದರೆ ಅವರು ಆಯ್ಕೆಯಾದ ನಂತರ ಶಿವಂ ದುಬೆ ನಿರಾಸೆ ಕಡಲಿನಲ್ಲಿ ತೇಲುತ್ತಿದ್ದಾರೆ.

Shivam Dubey s Form Slump A Major Worry for Team India Ahead of Key Matches

ವಿಶ್ವಕಪ್‌ ತಂಡದ ಸೇರಿದ ಮೇಲೆ ಶಿವಂ ಮೌನ

ವಿಶ್ವ ಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಂತೆ ಶಿವಂ ದುಬೆ ಮೇ1 ರಂದು ನಡೆದ ಪಂದ್ಯದಲ್ಲಿ ಸೊನ್ನೆ ಸುತ್ತಿದರು. ಮೇ 5ರಂದು ಪಂಜಾಬ್‌ ವಿರುದ್ಧವೂ ಸೊನ್ನೆ ಇವರನ್ನು ಅಪ್ಪಿಕೊಂಡಿತು. ಮೇ 10 ರಂದು ಗುಜರಾತ್‌ ವಿರುದ್ಧ 21, ಮೇ 12 ರಂದು ರಾಜಸ್ಥಾನ ವಿರುದ್ಧ 18 ರನ್, ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಮೇ 18 ರಂದು 7 ರನ್‌ ಬಾರಿಸಿ ನಿರಾಸೆ ಅನುಭವಿಸಿದರು.

ದುಬೆ ಅವರ ಫಾರ್ಮ್ ಭಾರತ ತಂಡಕ್ಕೆ ಆತಂಕ ತಂದಿದೆ. ಚೆನ್ನೈನಲ್ಲಿ RCB ವಿರುದ್ಧದ ಮಹತ್ವದ ಪಂದ್ಯದಲ್ಲಿ 15 ಎಸೆತಗಳಲ್ಲಿ 7 ರನ್ ಗಳಿಸಿದ ನಂತರ ಅವರು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಅವರ ಇತ್ತೀಚಿನ ಪ್ರದರ್ಶನ ನೋಡಿದರೆ ವಿಶ್ವಕಪ್‌ನಲ್ಲೂ ಅವರ ಸ್ಥಾನಕ್ಕೆ ಸಂಕಷ್ಟ ಎದುರಾಗಿದೆ. 31 ವರ್ಷದ ಶಿವಂ ದುಬೆ ಐಪಿಎಲ್ 2024ರಲ್ಲಿ ಆಡಿದ 14 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ 396 ರನ್ ಗಳಿಸಿದ್ದಾರೆ.

Shivam Dubey s Form Slump A Major Worry for Team India Ahead of Key Matches

ತಂಡದಲ್ಲಿ ಬದಲಾವಣೆ ಮಾಡಲು ಬಿಸಿಸಿಐಗೆ ಅವಕಾಶ ಇದೆ. ಈ ಅವಕಾಶವನ್ನು ಬಳಸಿಕೊಂಡು ಬಿಸಿಸಿಐ ಶಿವಂ ದುಬೆ ಬದಲಿಗೆ ಬೇರೆ ಆಟಗಾರನಿಗೆ ಅವಕಾಶ ನೀಡುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

ಭಾರತದ ಪರ 21 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು 145.26ರ ಸರಾಸರಿಯಲ್ಲಿ 276 ರನ್‌ ಗಳಿಸಿದ್ದಾರೆ. ಈ ವೇಳೆ 19 ಬೌಂಡರಿ, 15 ಸಿಕ್ಸರ್ ಸೇರಿವೆ. ಅಲ್ಲದೆ ಬೌಲಿಂಗ್‌ನಲ್ಲೂ 8 ವಿಕೆಟ್ ಕಬಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+