Shikhar Dhawan Marriage: ಭಾರತೀಯ ಕ್ರಿಕೆಟರ್ ಶಿಖರ್ ಧವನ್ ಎರಡನೇ ವಿವಾಹ: ವಿದೇಶಿ ಯುವತಿ ಜೊತೆ ಪ್ರೇಮ ಪಯಣ ಹೇಗಿತ್ತು?
Shikhar Dhawan Marriage: ಭಾರತೀಯ ಕ್ರಿಕೆಟರ್ ಶಿಖರ್ ಧವನ್ 40ನೇ ವಯಸ್ಸಿನಲ್ಲಿ ಐರಿಷ್ ಮೂಲದ ಸೋಫಿ ಶೈನ್ ಅವರೊಂದಿಗೆ ಶನಿವಾರ (ಫೆಬ್ರವರಿ 21) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಧವನ್ ಅವರ ಎರಡನೇ ವಿವಾಹವಾಗಿದೆ. ಇಬ್ಬರು ಸುಮಾರು ಒಂದು ವರ್ಷದಿಂದ ಪರಸ್ಪರ ಸಂಪರ್ಕದಲ್ಲಿದ್ದು, ಜನವರಿ 12ರಂದು ಇನ್‌ಸ್ಟಾಗ್ರಾಂ ಮೂಲಕ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು.
ದೆಹಲಿ-ಎನ್‌ಸಿಆರ್‌ನಲ್ಲಿ ನಡೆದ ಈ ಮದುವೆ ಸಮಾರಂಭವನ್ನು ಕುಟುಂಬದವರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು. ಸಹ ಆಟಗಾರ ಯುವಜೇಂದ್ರ ಚಹಲ್ ಅವರು ಈ ಫೋಟೋಗಳನ್ನು ತಮ್ಮ ಇನಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, 'ಮೇರೇ ಯಾರ್ ಕಿ ಶಾದಿ ಹೈ' ಎಂದು ಬರೆದುಕೊಂಡು ಗಮನ ಸೆಳೆದಿದ್ದಾರೆ. ಈ ಫೋಟೋಗಳು ವೈರಲ್ ಆದ ತಕ್ಷಣ ಅಭಿಮಾನಿಗಳು, ಕ್ರಿಕೆಟಿಗರು ಶುಭಹಾರೈಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಈ ಸಮಾರಂಭಕ್ಕೆ ಹಲವು ಕ್ರಿಕೆಟಿಗರು ಆಗಮಿಸಿ ಜೋಡಿಗೆ ಆಶೀರ್ವದಿಸಿದ್ದಾರೆ.

2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯವು ದುಬೈನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಇವರ ಪ್ರೀತಿ ಆರಂಭವಾಗಿದೆ. ಅಲ್ಲಿ ಇವರಿಬ್ಬರು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರು. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಆಗ ಅವರ ಪ್ರೀತಿ ವಿಚಾರ ಬಯಲಿಗೆ ಬಂದಿದೆ. ಐರಿಷ್ ಕಾರ್ಪೊರೇಟ್ ಹಾಗೂ ಶಿಖರ್ ಧವನ್ ಫೌಂಡೇಶನ್‌ನ ಮುಖ್ಯಸ್ಥೆಯಾಗಿರುವ ಸೋಫಿ, ಈ ಸಂಬಂಧಕ್ಕೆ ಒಂದು ಅರ್ಥವನ್ನು ತಂದರು. ಸ್ನೇಹದಿಂದ ಪ್ರೀತಿಯಾಗಿ ಮಾರ್ಪಟ್ಟು ಬಳಿಕ ನಿಶ್ಚಿತಾರ್ಥವನ್ನೂ ಕೂಡ ಮಾಡಿಕೊಂಡರು.
ಆಯೇಷಾ ಮುಖರ್ಜಿಯೊಂದಿಗೆ ವಿಚ್ಛೇದನ
ಭಾರತೀಯ ಕ್ರಿಕೆಟ್ ತಾರೆ ಶಿಖರ್ ಧವನ್ ಅವರ ಮೊದಲ ಮದುವೆ 2012ರಲ್ಲಿ ಆಯೇಷಾ ಮುಖರ್ಜಿ ಅವರೊಂದಿಗೆ ನಡೆದಿದೆ. ದಂಪತಿ 9 ವರ್ಷಗಳ ಕಾಲ ಜೊತೆಗೆ ಸಂಸಾರ ನಡೆಸಿದ್ದರು. ಆದರೆ, 2021ರಲ್ಲಿ ಇವರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಈ ಸುದ್ದಿ ಹೊರಬಿದ್ದ ಎರಡು ವರ್ಷಗಳ ನಂತರ 2023ರಲ್ಲಿ ಇವರಿಬ್ಬರು ವಿವಾಹ ವಿಚ್ಛೇದನ ಪಡೆದು ದೂರಾದರು. ಮೊದಲ ಪತ್ನಿಗೆ ಜೋರಾವರ್ ಧವನ್ ಎಂಬ ಓರ್ವ ಪುತ್ರನಿದ್ದು, ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ವಿದೇಶಿ ಯುವತಿ ಜೊತೆಗಿನ ಪ್ರೇಮ ಪಯಣ ಹೀಗಿತ್ತು
ಮೊದಲ ಪತ್ನಿಗೆ ವಿಚ್ಛೇದ ನೀಡಿದ ಕೆಲವೇ ತಿಂಗಳೊಳಗೆ, ಧವನ್ ಹೊಸ ಪ್ರೀತಿಯ ಬಲೆಗೆ ಬಿದ್ದರು. ಶಿಖರ್ ಧವನ್ ಮತ್ತು ಐರಿಷ್ ಮೂಲದ ಸೋಫಿ ಶೈನ್ ಕಳೆದ ಎರಡು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಅವರ ಸಂಬಂಧವು ಮೊದಲ ಬಾರಿ 2024ರಲ್ಲಿ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ ಮತ್ತು 2025ರಲ್ಲಿ ಈ ಬಗ್ಗೆ ದೃಢಪಡಿಸಿದರು.
ಸೋಫಿ ಮೇ 1, 2025ರಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಧವನ್ ಜೊತೆಗಿನ ಫೋಟೋವನ್ನು 'My love' ಎಂಬ ಶೀರ್ಷಿಕೆ ಮತ್ತು ಹೃದಯ ಎಮೋಜಿಯೊಂದಿಗೆ ಪೋಸ್ಟ್ ಮಾಡಿದ್ದರು. ಈ ಮೂಲಕ ತಮ್ಮ ನಡುವಿನ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿದರು. ಇವರಿಬ್ಬರ ನಡುವಿನ ಸಂಬಂಧವು ಇದೀಗ 2026ರಲ್ಲಿ ಮದುವೆ ಮೂಲಕ ಹೊಸ ಅಧ್ಯಾಯ ಪ್ರಾರಂಭಿಸಿದೆ. ದುಬೈನಲ್ಲಿ ಪ್ರಾರಂಭವಾದ ಸ್ನೇಹದಿಂದ ಪ್ರೀತಿ, ನಂತರ ನಿಶ್ಚಿತಾರ್ಥ ಮತ್ತು ಇದೀಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ಧವನ್ ಮದುವೆಯಾದ ಸೋಫಿ ಶೈನ್ ಯಾರು?
ಶಿಖರ್ ಧವನ್ ಅವರ ಎರಡನೇ ಪತ್ನಿ ಸೋಫಿ ಶೈನ್ ವೃತ್ತಿ ಜೀವನದಲ್ಲಿ ಬಹುಮುಖ ಪ್ರತಿಭಾವಂತರು. ಅವರು ಉತ್ಪನ್ನ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ. ಶಿಕ್ಷಣದಲ್ಲಿ ತಾಳಮೇಳ ಇರುವ ಸೋಫಿ, ಐರ್ಲೆಂಡ್‌ನ ಲಿಮೆರಿಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ. ಶೈಕ್ಷಣಿಕ ಯಾತ್ರೆಯು ಕ್ಯಾಸ್ಟ್ಲೆರಾಯ್ ಕಾಲೇಜಿನಲ್ಲಿ ಮಾರ್ಕೆಟಿಂಗ್ ಮತ್ತು ನಿರ್ವಹಣೆಯಲ್ಲಿ ಅಧ್ಯಯನ ಮಾಡುವ ಮೂಲಕ ಮುಂದುವರೆದಿದೆ.
ಪ್ರಸ್ತುತ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಶನ್‌ನಲ್ಲಿ ಎರಡನೇ ಉಪಾಧ್ಯಕ್ಷ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಧವನ್ ಅವರೊಂದಿಗೆ ಅವರ ಸಂಪರ್ಕವು ಸ್ನೇಹದಿಂದ ಪ್ರೀತಿ ಮತ್ತು ನಂತರ ಮದುವೆಗೆ ಬದಲಾದದ್ದು ಅಭಿಮಾನಿಗಳಿಗೆ ವಿಶೇಷ ಗಮನಸೆಳೆಯುವ ಸಂಗತಿಯಾಗಿದೆ.
ಮಕ್ಕಳ ಸಂಪರ್ಕ ಕಳೆದುಕೊಂಡ ಧವನ್
ಶಿಖರ್ ಧವನ್ ಮತ್ತು ಅವರ ಮೊದಲ ಪತ್ನಿ ಆಯೇಷಾ ಮುಖರ್ಜಿ ವಿವಾಹ ವಿಚ್ಛೇದನವಾಗಿದ್ದು, ನ್ಯಾಯಾಲಯವು ಧವನ್‌ಗೆ ಮಕ್ಕಳನ್ನು ಭೇಟಿಯಾಗುವ ಹಕ್ಕು ಮತ್ತು ವೀಡಿಯೋ ಕರೆ ಮಾಡುವ ಹಕ್ಕನ್ನು ನೀಡಿತ್ತು. ಆದರೆ ನಂತರ ಧವನ್ ಹೇಳುವ ಪ್ರಕಾರ, ಆ ಸಂಪರ್ಕವು ಸಂಪೂರ್ಣವಾಗಿ ತಡೆಯಲ್ಪಟ್ಟಿತ್ತು. ಈ ಪ್ರಕರಣವು ಧವನ್ ಅವರ ವೈಯಕ್ತಿಕ ಜೀವನದ ತೀವ್ರ ಪರಿಣಾಮ ಬೀರಿತು ಎಂದು ವರದಿಯಾಗಿತ್ತು.
ಸ್ಫೋಟಕ ಬ್ಯಾರ್ ಆಗಿದ್ದ ಶಿಖರ್ ಧವನ್
ಭಾರತ ತಂಡದಲ್ಲಿ ಶಿಖರ್ ಧವನ್ ಓಪನಿಂಗ್ ಬ್ಯಾಟರ್ ಆಗಿದ್ದು, ಸ್ಫೋಟಕ ಬ್ಯಾಟಿಂಗ್ ಮಾಡುವಲ್ಲಿ ಪ್ರಸಿದ್ಧರಾಗಿದ್ದರು. ವೈಯಕ್ತಿಕ ಕಷ್ಟಗಳನ್ನು ತಾಳ್ಮೆ ಮತ್ತು ಶ್ರದ್ಧೆಯೊಂದಿಗೆ ಇದನ್ನೆಲ್ಲಾ ನಿರ್ವಹಿಸಿದ್ದಾರೆ. ನಿವೃತ್ತಿಯ ನಂತರ ಅವರು ಕುಟುಂಬ, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ.












Click it and Unblock the Notifications