Shane Watson: ಅಂದು ಕಪ್ ಗೆಲ್ಲುವ ಅವಕಾಶ ಇತ್ತು; ಆರ್‌ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಶೇನ್ ವಾಟ್ಸನ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿಯೂ ಒಮ್ಮೆಯೂ ಕಪ್ ಗೆಲ್ಲದ ಏಕೈಕ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ). 2009, 2011 ಮತ್ತು 2016ರಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿತ್ತು. 2016ರಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಆರ್‌ಸಿಬಿ ಫೈನಲ್‌ನಲ್ಲಿ ಎಡವಿತ್ತು.
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಕೆಎಲ್ ರಾಹುಲ್, ಶೇನ್ ವ್ಯಾಟ್ಸನ್ ಅವರಂತಹ ದಿಗ್ಗಜ ಆಟಗಾರರು ತಂಡದಲ್ಲಿದ್ದರೂ, ಕಪ್ ಗೆಲ್ಲಲು ಆಗಲಿಲ್ಲ. ಶೇನ್ ವ್ಯಾಟ್ಸನ್ ಅವರ ದುಬಾರಿ ಬೌಲಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಐಪಿಎಲ್ 2024ರ ಆವೃತ್ತಿಯಲ್ಲಿ ವೀಕ್ಷಕ ವಿವರಣೆಗಾರರಾಗಿರುವ ಶೇನ್ ವ್ಯಾಟ್ಸನ್ 2016ರಲ್ಲಿ ಮಾಡಿದ ಎಡವಟ್ಟಿಗೆ ಕ್ಷಮೆ ಕೇಳಿದ್ದಾರೆ. "2016ರ ಆವೃತ್ತಿಯಲ್ಲಿ ಅನಿರೀಕ್ಷಿತವಾಗಿ ಆರ್ ಸಿಬಿ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ, ಅದಕ್ಕಾಗಿ ಕ್ಷಮೆ ಇರಲಿ" ಎಂದಿದ್ದಾರೆ.
ಏಪ್ರಿಲ್ 10ರಂದು ಜಿಯೋ ಸಿನಿಮಾದಲ್ಲಿ ಐಪಿಎಲ್ ಪಂದ್ಯಗಳ ವೀಕ್ಷಕ ವಿವರಣೆ ಸಂದರ್ಭದಲ್ಲಿ ಹಿಂದಿನ ನೆನಪುಗಳನ್ನು ಹಂಚಿಕೊಂಡ ಅವರು. 2016ರಲ್ಲಿ ಕಪ್ ಗೆಲ್ಲುವ ಅವಕಾಶ ಕಳೆದುಕೊಂಡೆವು ಎಂದು ಹೇಳಿದ್ದಾರೆ.
ಫೈನಲ್‌ನಲ್ಲಿ ದುಬಾರಿ ಬೌಲಿಂಗ್
2016ರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಶೇನ್ ವ್ಯಾಟ್ಸನ್ ದುಬಾರ್ ಬೌಲರ್ ಆಗಿದ್ದರು. 4 ಓವರ್ ಗಳಲ್ಲಿ ಒಂದೂ ವಿಕೆಟ್ ಪಡೆಯದೇ 61 ರನ್ ಬಿಟ್ಟುಕೊಟ್ಟರು. ಬ್ಯಾಟಿಂಗ್‌ನಲ್ಲಿ ಕೂಡ ವಿಫಲವಾದ ಅವರು 9 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು. ಬಳಿಕ ಈ ಮೊತ್ತವನ್ನು ಬೆನ್ನತ್ತಿದ ಆರ್‌ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 200 ರನ್ ಗಳಿಸುವ ಮೂಲಕ 8 ರನ್‌ಗಳಿಂದ ಸೋಲೊಪ್ಪಿಕೊಂಡಿತು.
2016ರ ಬಳಿಕ ಆರ್ ಸಿಬಿ ಫೈನಲ್ ತಲುಪುವಲ್ಲಿ ಕೂಡ ವಿಫಲವಾಗಿದೆ. 2016ರ ಫೈನಲ್ ಪಂದ್ಯದ ಸೋಲು ಇಂದಿಗೂ ಅಭಿಮಾನಿಗಳನ್ನು ಕೆಟ್ಟ ಕನಸಿನಂತೆ ಕಾಡುತ್ತಿದೆ. ಅದೇ ವರ್ಷ ವಿರಾಟ್ ಕೊಹ್ಲಿ 973 ರನ್ ಗಳಿಸಿದ್ದರು, ಅದು ಇಂದಿಗೂ ದಾಖಲೆಯಾಗಿ ಉಳಿದಿದೆ.
2024ರ ಐಪಿಎಲ್‌ನಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನ ನೀಡುತ್ತಿದೆ. ಆಡಿರುವ 7 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದು, 6 ಪಂದ್ಯಗಳಲ್ಲಿ ಸೋಲನುಭವಿಸಿದೆ. ಪ್ಲೇ ಆಫ್ ತಲುಪಲು ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ ಮಾತ್ರ ಒಂದು ಅವಕಾಶ ಇರುತ್ತದೆ.












Click it and Unblock the Notifications