Shami Final: ಶಮಿ ಆಟಕ್ಕೆ ಮನಸೋತ ಅಭಿಮಾನಿಗಳು: ಸಚಿನ್, ಮೋದಿ ಏನಂದ್ರು?
12 ವರ್ಷಗಳ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಯುವಿಕೆ ಕೊನೆಯ ಹಂತಕ್ಕೆ ಬಂದು ನಿಂತಿದೆ. 2011ರ ಬಳಿಕ ಭಾರತ ತಂಡ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದೆ. 2015 ಮತ್ತು 2019ರಲ್ಲಿ ಸೆಮಿಫೈನಲ್ ಸೋಲಿನ ಬಳಿಕ, ಭಾರತಕ್ಕೆ 2023ರ ಸೆಮಿಫೈನಲ್ ಸವಾಲಾಗಿತ್ತು, ಅದರಲ್ಲೂ ಭಾರತಕ್ಕೆ ಎದುರಾಗಿದ್ದು ಬಲಿಷ್ಠ ಕಿವೀಸ್ ಪಡೆ.
ವಾಂಖೆಡೆ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೊಹ್ಲಿ ಅವರ 50ನೇ ಏಕದಿನ ಶತಕ, ಶ್ರೇಯಸ್ ಅಯ್ಯರ್ ಶತಕದ ನೆರವಿನಿಂದ 397 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಗೆಲ್ಲುವ ಸೂಚನೆ ನೀಡುವ ಮೂಲಕ ಭಾರತೀಯ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿತ್ತು.

ಇಂತಹ ಸಂಕಷ್ಟದಲ್ಲಿ ಭಾರತ ತಂಡಕ್ಕೆ ನೆರವಾಗಿದ್ದು ಮೊಹಮ್ಮದ್ ಶಮಿ ಎನ್ನುವ ಮಾಂತ್ರಿಕ ಬೌಲರ್, ಒಂದೇ ಓವರ್ ನಲ್ಲಿ ಕೇನ್ ವಿಲಿಯಮ್ಸ್ ಮತ್ತು ಟಾಮ್ ಲಾಥಮ್ ವಿಕೆಟ್ ಪಡೆದು ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಿದರು. ಬರೋಬ್ಬರ್ 7 ವಿಕೆಟ್ ಪಡೆದ ಶಮಿ, ಭಾರತ 70 ರನ್‌ಗಳ ಭರ್ಜರಿ ಗೆಲುವಿಗೆ ಕಾರಣವಾದರು. ಅವರ ಅದ್ಭುತ ಆಟಕ್ಕೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಶಮಿಫೈನಲ್ ಎಂದ ಅಭಿಮಾನಿಗಳು!
ಮೊಹಮ್ಮದ್ ಶಮಿ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಕಂಡು ಭಾರತದ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಇದು ಸೆಮಿಫೈನಲ್ ಅಲ್ಲ ಬದಲಾಗಿ ಶಮಿ ಫೈನಲ್ ಎಂದು ಹಾಡಿ ಹೊಗಳಿದರು.
What a Shami-final!!!!!!
— Sachin Tendulkar (@sachin_rt) November 15, 2023
Well done India for a superb batting display and a spectacular bowling performance to get into the final. 😊😊😊#INDvNZ pic.twitter.com/XtqZWQvcJT
ಸಚಿನ್ ತೆಂಡೂಲ್ಕರ್ ಭಾರತದ ಗೆಲುವಿನ ನಂತರ ಟ್ವೀಟ್ ಮಾಡಿ "ಎಂತಹ ಶಮಿ ಫೈನಲ್!!! ಭಾರತ ತಂಡಕ್ಕೆ ಅಭಿನಂದನೆಗಳು, ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಫೈನಲ್ ತಲುಪಿದ್ದಕ್ಕೆ" ಎಂದು ಟ್ವೀಟ್ ಮಾಡಿದ್ದಾರೆ.
Today’s Semi Final has been even more special thanks to stellar individual performances too.
— Narendra Modi (@narendramodi) November 15, 2023
The bowling by @MdShami11 in this game and also through the World Cup will be cherished by cricket lovers for generations to come.
Well played Shami!
ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದು ಮೊಹಮ್ಮದ್ ಶಮಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಇಂದಿನ ಸೆಮಿಫೈನಲ್ ಪಂದ್ಯ ವಿಶೇಷವಾಗಿತ್ತು. ಮೊಹಮ್ಮದ್ ಶಮಿ ಅವರ ಬೌಲಿಂಗ್ ಅತ್ಯುತ್ತಮವಾಗಿತ್ತು, ಈ ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ, ಶಮಿ ಅತ್ಯುತ್ತಮವಾಗಿ ಆಡಿದರು" ಎಂದು ಟ್ವೀಟ್ ಮಾಡಿದ್ದಾರೆ.
ಹಲವು ದಾಖಲೆ ನಿರ್ಮಾಣ
ಮೊಹಮ್ಮದ್ ಶಮಿ 9.5 ಓವರ್ ಗಳಲ್ಲಿ 57 ರನ್ ಬಿಟ್ಟುಕೊಟ್ಟು 7 ವಿಕೆಟ್ ಪಡೆದು ಮಿಂಚಿದರು. ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದರು. ವಿಶ್ವಕಪ್‌ನಲ್ಲಿ ವೇಗವಾಗಿ 50 ಪಡೆದ ಸಾಧನೆ ಮಾಡಿದರು, ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಏಕದಿನ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು.
ನವೆಂಬರ್ 19ರಂದು ಭಾರತ ಅಹಮದಾಬಾದ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಶಮಿ ಅವರು ಫೈನಲ್‌ನಲ್ಲಿ ಕೂಡ ಮಿಂಚಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications