India Women's Team: ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಶ್ರೇಯಾಂಕಾ ಪಾಟೀಲ್‌ಗೆ ಅವಕಾಶ

ಮಹಿಳಾ ಐಪಿಎಲ್ ಪಂದ್ಯಾವಳಿ ಬಳಿಕ, ಭಾರತ ಮಹಿಳಾ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಸಜ್ಜಾಗುತ್ತಿದೆ. ಏಪ್ರಿಲ್ 28ರಿಂದ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ ಆರಂಭವಾಗಲಿದ್ದು, ಭಾರತ ಮಹಿಳಾ ತಂಡವನ್ನು ಘೋಷಿಸಲಾಗಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ಶ್ರೇಯಾಂಕಾ ಪಾಟೀಲ್ ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ಅವರು ಸದ್ಯ ಚೇತರಿಸಿಕೊಂಡಿದ್ದು, ಬಾಂಗ್ಲಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

Senior Women s India Squad Announced for Bangladesh Tour RCB Star Shreyanka Patil Picked

ಆರ್ ಸಿಬಿ ತಂಡದ ಮತ್ತೊಬ್ಬ ಯಶಸ್ವಿ ಬೌಲರ್ ಆಶಾ ಶೋಭನಾ ಅವರಿಗೂ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದೆ. ಮೊದಲ ಬಾರಿಗೆ ಭಾರತ ತಂಡಕ್ಕೆ ಆಡಲು ಸಜ್ಜಾಗಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಅವರಿಗೆ ಭಾರತ ತಂಡದಿಂದ ಕರೆ ಬಂದಿದೆ.

ಬಾಂಗ್ಲಾದೇಶ ವಿರುದ್ಧದ 5 ಟಿ20 ಪಂದ್ಯಗಳಿಗೆ ಭಾರತ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ದಯಾಲನ್ ಹೇಮಲತಾ, ಸಜನಾ ಸಜೀವನ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅಮಂಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಸೈಕಾ ಇಶಾಕ್, ಆಶಾ ಸೋಭಾನಾ, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು.

ಭಾರತ - ಬಾಂಗ್ಲಾದೇಶ ಟಿ20 ಸರಣಿ ವೇಳಾಪಟ್ಟಿ

1) ಭಾನುವಾರ, ಏಪ್ರಿಲ್ 28, 2024, ಸಂಜೆ 6 ಗಂಟೆಗೆ
2) ಮಂಗಳವಾರ, ಏಪ್ರಿಲ್ 30, 2024, ಸಂಜೆ 6 ಗಂಟೆಗೆ
3) ಗುರುವಾರ, ಮೇ 2, 2024, ಮಧ್ಯಾಹ್ನ 1.30ಕ್ಕೆ
4) ಸೋಮವಾರ, ಮೇ 6, 2024, ಮಧ್ಯಾಹ್ನ 1.30ಕ್ಕೆ
5) ಗುರುವಾರ, ಮೇ 9, 2024, ಸಂಜೆ 6 ಗಂಟೆಗೆ

ಎಲ್ಲಾ ಪಂದ್ಯಗಳು ಸಿಲ್ಹೆಟ್‌ನ ಎಸ್‌ಐಸಿಎಸ್‌ ಕ್ರೀಡಾಂಗಣದಲ್ಲಿ ನಡೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+