Get Updates
Get notified of breaking news, exclusive insights, and must-see stories!

Hi to Marriage: ಚಾರು-ಸಂಜು ಪ್ರೀತಿಗೆ ಫೇಸ್‌ಬುಕ್‌ ಸೇತುವೆ, ಧರ್ಮದ ಗೋಡೆ ಒಡೆದ ಪ್ರೀತಿ

Sanju Samson Love Story: ಟಿ20 ವಿಶ್ವಕಪ್‌ 2026 ಸೂಪರ್ 8 ಹಂತದ ಕೊನೇ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ಇದರ ಬೆನ್ನಲ್ಲೇ ಅವರ ವೈಯಕ್ತಿಕ ವಿಚಾರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಮುಖ್ಯವಾಗಿ ಅವರ ಲವ್‌ ಸ್ಟೋರಿ ಕ್ರಿಕೆಟ್‌ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಕಾಲೇಜು ದಿನಗಳಲ್ಲೇ ಆರಂಭವಾದ ಸಂಜು ಸ್ಯಾಮ್ಸನ್ ಅವರ ಪ್ರೇಮಕಥೆ ಇಂದು ಹಲವರಿಗೆ ಪ್ರೇರಣೆಯಾಗಿದೆ. ಸಂಜು ಸ್ಯಾಮ್ಸನ್ ಮತ್ತು ಚಾರುಲತಾ ರಮೇಶ್ ಅವರು ಮೊದಲ ಬಾರಿಗೆ ತಿರುವನಂತಪುರಂನ ಮಾರ್ ಇವಾನಿಯೊಸ್ ಕಾಲೇಜಿನಲ್ಲಿ ಭೇಟಿಯಾದರು. ಅಲ್ಲಿ ಅವರಿಬ್ಬರೂ ಸ್ನೇಹಿತರಾಗಿದ್ದು, ಬಳಿಕ ಈ ಸ್ನೇಹ ಪ್ರೀತಿಗೆ ತಿರುಗಿತು.

Sanju Samson Love Story From College Romance to a Beautiful Marriage with Charulatha Now details

ಸಂಜು-ಚಾರು 'ಲವ್' ಶುರುವಾಗಿದ್ದು ಹೇಗೆ?

ಸಂಜು ಸ್ಯಾಮ್ಸನ್ ಆಗಸ್ಟ್ 22, 2013ರಂದು ಚಾರುಲತಾ ಅವರಿಗೆ ಫೇಸ್‌ಬುಕ್‌ನಲ್ಲಿ ಒಂದು ಹಾಯ್ ('Hi') ಎಂಬ ಸಂದೇಶ ಕಳುಹಿಸಿದ್ದರು. ಇದು ಅವರ ಪ್ರೀತಿ ಬಂಧಕ್ಕೆ ಅಡಿಪಾಯ ಹಾಕಿದ ಕ್ಷಣವಾಗಿತ್ತು. ಸಂಜು ಕ್ರಿಕೆಟ್‌ನಲ್ಲಿ ಸಾಧನೆ ಮಾಡುತ್ತಿದ್ದು, ಇದೇ ಕಾರಣದಿಂದ ಇವರಿಬ್ಬರೂ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಎಲ್ಲಿಯೂ ಬಹಿರಂಗಪಡಿಸಲಿಲ್ಲ. ಸುಮಾರು ಐದು ವರ್ಷಗಳ ಕಾಲ ಇವರು ಪರಸ್ಪರ ಡೇಟಿಂಗ್ ನಡೆಸಿದ್ದರು.

ಚಾರುಲತಾ ಅವರ ಬುದ್ಧಿವಂತಿಕೆ ಮತ್ತು ಶಾಂತ ಸ್ವಭಾವವು ಸಂಜು ಅವರನ್ನು ತುಂಬಾ ಆಕರ್ಷಿಸಿತ್ತು. ಸಂಭಾಷಣೆಗಳು ಮತ್ತು ಪರಸ್ಪರ ಅರ್ಥ ಮಾಡಿಕೊಂಳ್ಳುವಿಕೆಯಿಂದ ಇವರ ಬಂಧ ಮತ್ತಷ್ಟು ಗಟ್ಟಿಯಾಯಿತು. ವಿಶೇಷ ಅಂದ್ರೆ, ಸಂಜು ಕ್ರಿಶ್ಚಿಯನ್ ಮತ್ತು ಚಾರುಲತಾ ಹಿಂದೂ ಧರ್ಮದವರಾಗಿದ್ದರೂ, ಧರ್ಮವು ಅವರ ಪ್ರೀತಿಗೆ ಅಡ್ಡಿಯಾಗಲಿಲ್ಲ.

ವರದಿಗಳ ಪ್ರಕಾರ, ಸಂಜು ಮತ್ತು ಚಾರುಲತಾ ಅವರ ಕಥೆಯು ಒಂದು ಉತ್ತಮ ಸಂಬಧದ ತಿರುವು ಪಡೆದಿದ್ದು ಫೇಸ್‌ಬುಕ್ ಮೂಲಕ. ಸಂಜು ಅವರು ಚಾರುಲತಾ ಅವರಿಗೆ ಮೊದಲು ಫೇಸ್‌ಬುಕ್‌ನಲ್ಲಿ ಸಂದೇಶ ಕಳುಹಿಸುವ ಮೂಲಕ ಸಂಪರ್ಕ ಬೆಳೆಸಿದರು. ಆರಂಭದಲ್ಲಿ ಕೇವಲ ಸಾಮಾನ್ಯವಾಗಿ ನಡೆಯುತ್ತಿದ್ದ ಮಾತುಕತೆಗಳು ಕಾಲಕ್ರಮೇಣ ಪ್ರೀತಿಯ ಸಂಭಾಷಣೆಗಳಾಗಿ ಬದಲಾದವು.

ಕಷ್ಟದ ಸಮಯದಲ್ಲಿ ಸಂಜು ಜೊತೆ ನಿಂತ ಚಾರು

ಪರಸ್ಪರ ವಿಚಾರಗಳನ್ನು ಹಂಚಿಕೊಳ್ಳುತ್ತಾ ಬೆಳೆದ ಈ ಸ್ನೇಹವು, ನಂತರ ಪ್ರೇಮ ಸಂಬಂಧಕ್ಕೆ ತಿರುಗಿತು. ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಈ ಪುಟ್ಟ ಸಂಭಾಷಣೆಯು, ಪ್ರೀತಿಗೆ ತಿರುಗಿ ಅಂತಿಮವಾಗಿ ಅವರಿಬ್ಬರ ವಿವಾಹ ಕೂಡ ಆಯಿತು. ಸಂಜು ಅವರ ಆರಂಭಿಕ ಕ್ರಿಕೆಟ್ ಜೀವನದ ಏರಿಳಿತದ ಹಂತಗಳಲ್ಲಿ ಚಾರುಲತಾ ಯಾವಾಗಲೂ ಬೆಂಬಲವಾಗಿ ನಿಂತಿದ್ದರು.

ಆರಂಭದಲ್ಲಿ ಇವರಿಬ್ಬರೂ ತಮ್ಮ ಸಂಬಂಧವನ್ನು ಎಲ್ಲಿಯೂ ಬಹಿರಂಗಪಡಿಸದೆ, ಅತ್ಯಂತ ಗೌಪ್ಯವಾಗಿ ಇಟ್ಟಿಟ್ಟದ್ದರು. ಸಂಜು ದೇಶೀಯ ಕ್ರಿಕೆಟ್‌ನಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ಸಮಯದಲ್ಲಿ, ಚಾರುಲತಾ ಸಂಜು ಅವರ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದರು. ಸುಮಾರು ಐದು ವರ್ಷಗಳ ಕಾಲ ಅತ್ಯಂತ ಸಮಾಧಾನದಿಂದ ಮತ್ತು ಪರಸ್ಪರ ಗೌರವದಿಂದ ತಮ್ಮ ಪ್ರೇಮವನ್ನು ಕಾಪಾಡಿಕೊಂಡರು.

ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಜು

ಡಿಸೆಂಬರ್ 22, 2018 ರಂದು ಈ ಜೋಡಿಯು ಕೇರಳದ ಕೋವಲಂನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಮದುವೆಯಲ್ಲಿ ಕೇವಲ ಹತ್ತಿರದ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಸಂಜು ಮತ್ತು ಚಾರುಲತಾ ಅವರು ತಮ್ಮ ವಿವಾಹವನ್ನು 'ವಿಶೇಷ ವಿವಾಹ ಕಾಯ್ದೆ'ಯ ಅಡಿಯಲ್ಲಿ ನೋಂದಾಯಿಸಿಕೊಳ್ಳಲು ನಿರ್ಧರಿಸಿದರು. ಇದು ಅವರ ಸ್ವತಂತ್ರ ನಿರ್ಧಾರ ಮತ್ತು ಪರಸ್ಪರ ಧರ್ಮಗಳ ಬಗೆಗಿನ ಗೌರವವನ್ನು ಪ್ರತಿಬಿಂಬಿಸುತ್ತದೆ. ಒಬ್ಬ ಸ್ಟಾರ್ ಕ್ರಿಕೆಟಿಗನಾಗಿದ್ದರೂ, ಸಂಜು ಯಾವುದೇ ಅದ್ದೂರಿತನವಿಲ್ಲದೆ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೇರಳದ ಕಡಲತೀರದ ನಗರವಾದ ಕೋವಲಂನ ರೆಸಾರ್ಟ್‌ವೊಂದಲ್ಲಿ ಈ ಶುಭ ಕಾರ್ಯ ನೆರವೇರಿತು.

ಚಾರುಲತಾ ಶಿಕ್ಷಣದ ವಿವರ

ಚಾರುಲತಾ ಅವರು ತಿರುವನಂತಪುರಂನ ಮಾರ್ ಇವಾನಿಯೊಸ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು. ನಂತರ, ಅವರು ಮಾನವ ಸಂಪನ್ಮೂಲ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಯಶಸ್ವಿಯಾಗಿ ಮುಗಿಸಿದರು. ಸದಾ ಪ್ರಚಾರದಿಂದ ದೂರ ಉಳಿಯಲು ಬಯಸುತ್ತಾರಾದರೂ, ಅವರು ಕೆಲವು ಉದ್ಯಮಗಳ ವಿಚಾರದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಒಬ್ಬ ಸ್ಟಾರ್ ಕ್ರಿಕೆಟಿಗನ ಪತ್ನಿಯಾಗಿದ್ದರೂ, ಅವರು ಮಾಧ್ಯಮಗಳಿಂದ ದೂರವಿರಲು ಇಷ್ಟಪಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟಾಗಿ ಸಕ್ರಿಯರಿಲ್ಲದ ಅವರು, ತಮ್ಮ ವೈಯಕ್ತಿಕ ಜೀವನವನ್ನು ಅತ್ಯಂತ ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುತ್ತಾರೆ. ಸಂಜು ಸ್ಯಾಮ್ಸನ್ ಅವರ ಕ್ರಿಕೆಟ್ ವೃತ್ತಿಜೀವನದ ಯಶಸ್ಸಿನ ಜೊತೆಗೆ ಚಾರುಲತಾ ಅವರು ಯಾವಾಗಲೂ ಬೆಂಬವಾಗಿ ನಿಂತಿದ್ದಾರೆ.

ಸಂಜು ಅವರ ವೃತ್ತಿಜೀವನದ ಏರಿಳಿತದ ಸಮಯದಲ್ಲಿ ಚಾರುಲತಾ ಅವರು ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಅಪರೂಪದ ಕೆಲವು ಪಂದ್ಯಗಳ ಸಮಯದಲ್ಲಿ ಅವರು ಸಂಜು ಅವರನ್ನು ಪ್ರೋತ್ಸಾಹಿಸಲು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ. ಇವರಿಬ್ಬರ ನಡುವಿನ ಹೊಂದಾಣಿಕೆ ಮಾತ್ರ ಇತರರಿಗೆ ಮಾದರಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+