CPL 2024: ಕೊನೆಗೂ ಕಪ್ ಗೆದ್ದ ಪ್ರೀತಿ ಝಿಂಟಾ ತಂಡ! ರೋಹಿತ್ ಶರ್ಮಾರಂತೆ ಕಪ್ ಎತ್ತಿ ಸಂಭ್ರಮಿಸಿದ ಫಾಫ್ ಡುಪ್ಲೆಸಿಸ್
ಐಪಿಎಲ್‌ನಲ್ಲಿ ಪ್ರೀತಿ ಝಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಇದುವರೆಗೂ ಕಪ್ ಗೆಲ್ಲುವಲ್ಲಿ ವಿಫಲವಾಗಿವೆ. ನಾಯಕ ಫಾಫ್ ಡುಪ್ಲೆಸಿಸ್ಈ ಬಾರಿ ಕೂಡ ಆರ್ ಸಿಬಿ ಪರವಾಗಿ ಆಡುವ ವಿಶ್ವಾಸದಲ್ಲಿದ್ದಾರೆ. ಈಗ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್ 2024) ಪ್ರೀತಿ ಝಿಂಟಾ ಒಡೆತನದ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ಫಾಫ್ ಡುಪ್ಲೆಸಿಸ್ ನಾಯಕರಾಗಿದ್ದು, ಚೊಚ್ಚಲ ಪ್ರಶಸ್ತಿಯನ್ನ ಗೆದ್ದು ಸಂಭ್ರಮಿಸಿದೆ.
ಭಾನುವಾರ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಗಯಾನ ಅಮೇಜಾನ್ ವಾರಿಯರ್ಸ್ ವಿರುದ್ಧ 6 ವಿಕೆಟ್‌ಗಳಿಂದ ಗೆಲುವ ಸಾಧಿಸುವ ಮೂಲಕ ಮೊದಲ ಬಾರಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಕಪ್ ಗೆದ್ದುಕೊಂಡಿದೆ.

ಸೇಂಟ್ ಲೂಸಿಯಾ ತಂಡಕ್ಕೆ ಫಾಫ್ ಡು ಪ್ಲೆಸಿಸ್ ನಾಯಕತ್ವ ವಹಿಸಿಕೊಂಡಿದ್ದು, ತಂಡಕ್ಕೆ ಕಪ್ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಶಸ್ತು ಗೆದ್ದ ಬಳಿಕ ತಮ್ಮ ವಿಭಿನ್ನ ಶೈಲಿನ ಸಂಭ್ರಮಾಚರಣೆಯಿಂದ ಅಭಿಮಾನಿಗಳನ್ನು ರಂಜಿಸಿರು. 2022 ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟಿನಾ ತಂಡ ಲಿಯೋನೆಲ್ ಮೆಸ್ಸಿ ಮಾಡಿದ್ದ ರೋಬೊಟಿಕ್ ಪ್ರದರ್ಶನವನ್ನು ಫಾಫ್ ಅನುಕರಿಸಿದರು. ಇದೇ ಶೈಲಿಯಲ್ಲಿ ಟಿ20 ವಿಶ್ವಕಪ್ ಗೆದ್ದಾಗ ರೋಹಿತ್ ಶರ್ಮಾ ಕೂಡ ಮಾಡಿದ್ದರು.
ಫೈನಲ್‌ನಲ್ಲಿ ಸುಲಭ ಗೆಲುವು
ಟಾಸ್ ಗೆದ್ದ ಸೈಂಟ್ ಲೂಸಿಯಾ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಗಯಾನ ಅಮೇಜಾನ್ ವಾರಿಯರ್ಸ್ ತಂಡವನ್ನು 138 ರನ್‌ಗಳಿಗೆ ಕಟ್ಟಿಹಾಕಿತು. ನೂರ್ ಅಹ್ಮದ್ 3 ವಿಕೆಟ್ ಪಡೆಯುವ ಮೂಲಕ ಗಯಾನ ತಂಡಕ್ಕೆ ಆಘಾತ ನೀಡಿದರು. 139 ರನ್‌ಗಳ ಗುರಿಯನ್ನು ಬೆನ್ನತ್ತಿದ ಸೈಂಟ್ ಲೂಸಿಯಾ ಕಿಂಗ್ಸ್ 18.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಗೆಲುವು ಸಾಧಿಸಿತು. ನಾಯಕ ಫಾಫ್ ಡುಪ್ಲೆಸಿಸ್ 21 ರನ್ ಗಳಿಸಿದರೆ, ರಾಸ್ಟನ್ ಚೇಸ್ ಅಜೇಯ 39 ರನ್ ಗಳಿಸಿದರು, ಆರನ್ ಜಾನ್ಸ್ 31 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿ ಮಿಂಚಿದರು.
Captain Faf Du Plessis doing Indian Captain Rohit Sharma's Iconic walk celebrations style with CPL Trophy.🔥
— Tanuj Singh (@ImTanujSingh) October 7, 2024
- ROHIT SHARMA 🤝 FAF DU PLESSIS...!!!!pic.twitter.com/xEaZuCrqQO
ಚೊಚ್ಚಲ ಪ್ರಶಸ್ತಿ ಗೆದ್ದ ಸೇಂಟ್ ಲೂಸಿಯಾ
11 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಸೇಂಟ್ ಲೂಸಿಯಾ ತಮ್ಮ ಮೊದಲ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಿಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲದ ಏಕೈಕ ತಂಡವಾಗಿದ್ದ ಅವರು, ಈ ಬಾರಿ ಆ ಕೊರತೆಯನ್ನು ನೀಗಿಸಿಕೊಂಡರು. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮಾಲೀಕತ್ವ ಹೊಂದಿರುವ ಫ್ರಾಂಚೈಸಿಯೇ ಸಿಪಿಎಲ್‌ನಲ್ಲಿ ಸೇಂಟ್ ಲೂಸಿಯಾ ತಂಡದ ಮಾಲೀಕತ್ವ ಹೊಂದಿದ್ದಾರೆ. ಪಂಜಾಬ್ ಕಿಂಗ್ಸ್ ಇನ್ನೂ ಮೊದಲ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದು, ಸಿಪಿಎಲ್‌ನಲ್ಲಿ ಟ್ರೋಫಿ ಬರ ನೀಗಿಸಿಕೊಂಡಿದೆ.
ಫಾಫ್ ಡುಪ್ಲೆಸಿಸ್ ಹೇಳಿದ್ದೇನು?
ಗೆಲುವಿನ ಬಳಿಕಮಾತನಾಡಿದ ನಾಯಕ ಫಾಫ್ ಡುಪ್ಲೆಸಿಸ್, 10-15 ವರ್ಷಗಳಿಂದ ಟ್ರೋಫಿಯನ್ನು ಗೆಲ್ಲಲು ಪ್ರಯತ್ನ ನಡೆಸಲಾಗಿತ್ತು, ಉತ್ತಮ ಬೌಲಿಂಗ್ ಪ್ರದರ್ಶನದಿಂದ ಈ ಬಾರಿ ಅದು ಸಾಧ್ಯವಾಗಿದೆ. ತಂಡವಾಗಿ ಆಟಗಾರರ ಬಗ್ಗೆ ನನಗೆ ಹೆಮ್ಮೆಯಿದೆ. ಪಂದ್ಯಾವಳಿ ಆರಂಭದಲ್ಲೇ ಈ ಬಾರಿ ನಮ್ಮ ತಂಡ ಮೊದಲ ಕಪ್ ಗೆಲ್ಲಲಿದೆ ಎನ್ನುವ ಭರವಸೆ ಇತ್ತು ಈಗ ಅದು ನಿಜವಾಗಿದೆ ಎಂದರು.
ಆರ್ ಸಿಬಿ ತಂಡದ ನಾಯಕನಾಗಿ ಐಪಿಎಲ್‌ನಲ್ಲಿ ಕೂಡ ಸಿಪಿಎಲ್‌ನಲ್ಲಿ ಮಾಡಿದ ಜಾದೂ ಮರುಕಳಿಸುವಂತೆ ಮಾಡುತ್ತಾರ ಎಂದು ನೋಡಬೇಕಿದೆ.












Click it and Unblock the Notifications