Arjun Tendulkar: ಹ್ಯಾಪಿ ಹುಟ್ದಬ್ಬ ಅಪ್ಪಾ, ನಾನು ಕೇಕ್ ತಿನ್ನಲ್ಲ'; ತಂದೆ ಸಚಿನ್ ತೆಂಡೂಲ್ಕರ್‌ಗೆ ಪುತ್ರ ಅರ್ಜುನ್ ವಿಶ್
Arjun Tendulkar: ಕ್ರಿಕೆಟ್ ದೇವರು ಅಂತಲೇ ಪ್ರಸಿದ್ಧಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ಇಂದು (ಏಪ್ರಿಲ್ 24) ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದ ನಡುವೆ ಅವರ ಪುತ್ರ ಹಾಗೂ ಐಪಿಎಲ್‌ನ ಎಲ್‌ಎಸ್‌ಜಿ ತಂಡದ ಆಟಗಾರ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆಗೆ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದು, ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಸದ್ಯ ಐಪಿಎಲ್ 2026ರ ಪಂದ್ಯಗಳಿಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಜೊತೆಗಿರುವ ಅರ್ಜುನ್, ತಂದೆಗೆ ವೀಡಿಯೋ ಮೂಲಕ ಶುಭಾಷಯ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಕೈಯಲ್ಲಿ ಕೇಕ್ ಹಿಡಿದು ಕ್ಯಾಮೆರಾ ಮುಂದೆ ಬಂದ ಅರ್ಜುನ್, "ಹ್ಯಾಪಿ ಬರ್ತ್‌ಡೇ ಅಪ್ಪಾ.. ಆದರೆ ನಾನು ಈ ಕೇಕ್ ತಿನ್ನುವುದಿಲ್ಲ," ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಹೀಗೆ ಹೇಳಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಅರ್ಜುನ್ ಕೇಕ್ ತಿನ್ನದಿರಲು ಕಾರಣ ಏನು?
ಅರ್ಜುನ್ ತೆಂಡ್ಯೂಲ್ಕರ್ ಕೇಕ್ ತಿನ್ನದಿರಲು ಕಾರಣ ಅವರು ಕಟ್ಟುನಿಟ್ಟಾಗಿ ಡಯಟ್ ಮಾಡುತ್ತಿದ್ದಾರೆ. "ನಾನು ಹೆಚ್ಚಾಗಿ ಸಕ್ಕರೆ ಪದಾರ್ಥಗಳನ್ನು ಸೇವಿಸುವುದಿಲ್ಲ, ಹಾಗಾಗಿ ಈ ಕೇಕ್ ತಿನ್ನುತ್ತಿಲ್ಲ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ," ಎಂದು ಅರ್ಜುನ್ ನಗುಮುಖದಿಂದ ತಂದೆಗೆ ವಿಡಿಯೋದ ಮೂಲಕ ತಿಳಿಸಿದ್ದಾರೆ. ಇನ್ನೂ ತಂದೆಯ ಹುಟ್ಟುಹಬ್ಬದ ಸಂದರ್ಭದಲ್ಲೂ ತಮ್ಮ ಫಿಟ್‌ನೆಸ್ ಹಾಗೂ ಡಯಟ್ ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿರುವ ಅರ್ಜುನ್ ಅವರ ಶಿಸ್ತಿಗೆ ನೆಟ್ಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹುಟ್ಟುಹಬ್ಬ ಸಂಭ್ರಮದಲ್ಲಿ ಕ್ರಿಕೆಟ್ ದೇವರು
ಮುಂಬೈನ ತಮ್ಮ ನಿವಾಸದಲ್ಲಿ ಸಚಿನ್ ಅವರು ಪತ್ನಿ ಅಂಜಲಿ, ತಾಯಿ ಮತ್ತು ತಮ್ಮ ಸಾಕುನಾಯಿಯೊಂದಿಗೆ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅಲ್ಲದೆ, ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡಿದ್ದಾರೆ. ಇನ್ನೂ ಸಚಿನ್ ಅವರ 53ನೇ ಜನ್ಮದಿನದ ಅಂಗವಾಗಿ ಅವರ ಅಪ್ರತಿಮ ದಾಖಲೆಗಳನ್ನು ಗಮನಿಸಲೇಬೇಕಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ (34,357), ಟೆಸ್ಟ್‌ನಲ್ಲಿ 51 ಮತ್ತು ಏಕದಿನ ಪಂದ್ಯದಲ್ಲಿ 49 ಶತಕಗಳನ್ನು ಸೇರಿದಂತೆ ಒಟ್ಟು 100 ಶತಕ ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಅವರದ್ದು.
ಇನ್ನೂ ಅರ್ಜುನ್ ತೆಂಡ್ಯೂಲ್ಕರ್ ಅವರು ತಮ್ಮ ತಂದೆ ಸಚಿನ್ ತೆಂಡ್ಯೂಲ್ಕರ್ ಅವರಿಗೆ ಶುಭಾಶಯ ತಿಳಿಸಿರುವ ವಿಡಿಯೋವನ್ನು ಲಕ್ನೋ ಸೂಪರ್ ಜೈಂಟ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ಸಚಿನ್ ಸರ್, ಅರ್ಜುನ್ ಮತ್ತು ನಮ್ಮ ಕಡೆಯಿಂದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು," ಎಂದು ಶೀರ್ಷಿಕೆಯೊಂದಿಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಅವರಿಗೆ ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ.
Sachin sir, Arjun aur hamare taraf se aapke liye cake 🍰
— Lucknow Super Giants (@LucknowIPL) April 24, 2026
Happy Birthday ❤️💙 pic.twitter.com/wuO4VrZNau












Click it and Unblock the Notifications