ಆರ್‌ಸಿಬಿ ಕಪ್ ಗೆಲ್ಲಲು ಇನ್ನೂ ಇದೆ ಅವಕಾಶ: ಇಲ್ಲಿದೆ ಓದಿ ವಿವರಣೆ!
ಐಪಿಎಲ್ ಅಂದ್ರೆ ಆರ್‌ಸಿಬಿ, ನಮ್ಮ ಆರ್‌ಸಿಬಿ ಇಲ್ಲದೆ ಐಪಿಎಲ್ ಟೂರ್ನಿಗೆ ಕಳೆ ಬರೋದಿಲ್ಲ ಅನ್ನೋ ಮಾತು ಅಭಿಮಾನಿಗಳಿಂದ ಕೇಳಿಬರುತ್ತದೆ. ಆ ಮಾತು ಕೂಡ ನಿಜ ಎನ್ನಬಹುದು. ಯಾಕಂದ್ರೆ ನಮ್ಮ ಬೆಂಗಳೂರು ತಂಡಕ್ಕೆ ಆರ್‌ಸಿಬಿ ಅಭಿಮಾನಿಗಳು ಅಷ್ಟರಮಟ್ಟಿಗೆ ಬೆಂಬಲ ನೀಡುತ್ತಾರೆ. ಹೀಗಿದ್ದಾಗ 2024ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಇನ್ನೇನು ಹೊರಬಿದ್ದು ಕನಸುಗಳು ನುಚ್ಚು ನೂರಾದವು ಎನ್ನುವಷ್ಟರಲ್ಲೇ ಮತ್ತೆ ಆಸೆ ಚಿಗುರೊಡೆದಿದೆ. ಹಾಗಾದರೆ ಆರ್‌ಸಿಬಿ ಕಪ್ ಗೆಲ್ಲಲು ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಮುಂದೆ ಓದಿ.
ಇಡೀ ಜಗತ್ತಿನಲ್ಲೇ, ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ ನಮ್ಮ ಆರ್‌ಸಿಬಿ. ಹೀಗಾಗಿ ಆರ್‌ಸಿಬಿ ತಂಡಕ್ಕೆ ಪ್ರತಿ ಪಂದ್ಯದಲ್ಲೂ ಭರ್ಜರಿ ಬೆಂಬಲ ಸಿಗುತ್ತದೆ. ಆರ್‌ಸಿಬಿ ತಂಡ ಕಪ್ ಗೆಲ್ಲಬೇಕು, ಆರ್‌ಸಿಬಿ ತಂಡಕ್ಕೆ ಕಪ್ ಬರಬೇಕು ಎಂಬುದು ಕೋಟಿ ಕೋಟಿ ಕನ್ನಡಿಗರ ಆಸೆ. ಆದರೂ ಅದು ಈಡೇರುತ್ತಿಲ್ಲ, ಆರ್‌ಸಿಬಿ ತಂಡ ಕಪ್ ಗೆಲ್ಲುತ್ತಿಲ್ಲ. ಹೀಗಿದ್ದಾಗ ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿ ತಂಡ ಈಗ ಕಂಬ್ಯಾಕ್ ಮಾಡಿದ್ದು, ಭರ್ಜರಿ ಗೆಲುವು ಸಾಧಿಸುತ್ತಿದೆ. ಇದೇ ಸಮಯದಲ್ಲಿ ಆರ್‌ಸಿಬಿ ತಂಡಕ್ಕೆ ಕಪ್ ಗೆಲ್ಲಲು, ಇನ್ನೂ ಅವಕಾಶ ಇದೆ ಅನ್ನೋದು ರಿವೀಲ್ ಆಗಿದೆ. ಅದು ಹೇಗೆ ಗೊತ್ತಾ? ಮಾಹಿತಿ ತಿಳಿಯಲು ಮುಂದೆ ಓದಿ.

ಆರ್‌ಸಿಬಿ ಕಪ್ ಗೆಲ್ಲುವುದು ಹೇಗೆ?
ಈಗಿರುವ ಮಾಹಿತಿ ಪ್ರಕಾರ ಆರ್‌ಸಿಬಿ ತಂಡ ಬಾಕಿ ಉಳಿದ 3 ಪಂದ್ಯಗಳನ್ನು ಭರ್ಜರಿಯಾಗಿ ಗೆಲ್ಲಬೇಕಿದೆ. ಪಂಜಾಬ್, ದೆಹಲಿ ಮತ್ತು ಚೆನ್ನೈ ವಿರುದ್ಧ ನಡೆಯುವ ಪಂದ್ಯಗಳಲ್ಲಿ ನಮ್ಮ ಆರ್‌ಸಿಬಿ ಗೆದ್ದು ಬೀಗಬೇಕಿದೆ. ಈ ಮೂಲಕ ರನ್ ರೇಟ್ ಕೂಡ ಹೆಚ್ಚಿಸಿಕೊಂಡು, ಟಾಪ್ 4 ಹಂತಕ್ಕೆ ಆರ್‌ಸಿಬಿ ಬಂದು ಸೇರುವುದು ಸುಲಭವಾಗಲಿದೆ. ಇದೇ ಹಂತದಲ್ಲಿ ಹೈದರಾಬಾದ್ ಮತ್ತು ಲಖನೌ ತಂಡಗಳು ಸೋಲು ಕಾಣಬೇಕು. ಈ ಮೂಲಕ ಆರ್‌ಸಿಬಿ ಮುಂದಿನ ಹಂತ ಸುಲಭವಾಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಲೆಕ್ಕಾಚಾರದಲ್ಲಿ ಒಂದು ಚೂರು ಎಡವಟ್ಟು ನಡೆದರೂ ಆರ್‌ಸಿಬಿ ತಂಡ ಹೊರಗಡೆ ಬೀಳಲಿದೆ.
ಆರ್‌ಸಿಬಿ ತಂಡ ನಿನ್ನೆ ಒದ್ದಾಡಿತ್ತು
ಆರ್‌ಸಿಬಿ ತಂಡಕ್ಕೆ ಎಷ್ಟೇ ಅವಕಾಶ ಇದ್ರೂ, ಕಡೆಗೆ ಜೀವ ಬಾಯಿಗೆ ಬರಿಸಿ ಗೆಲ್ಲುತ್ತಿದೆ. ನಿನ್ನೆ 148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 5.5 ಓವರ್‌ಗಳಲ್ಲಿ 92 ರನ್ ಚಚ್ಚಿ ಬಿಸಾಡಿತ್ತು. 92 ರನ್ ಆಗುವ ತನಕ ಒಂದೇ ಒಂದು ವಿಕೆಟ್ ಕೂಡ ಆರ್‌ಸಿಬಿ ತಂಡ ಕಳೆದುಕೊಂಡಿರಲಿಲ್ಲ. ಆದ್ರೆ 117 ರನ್ ಆಗುವಷ್ಟರಲ್ಲಿ ಬರೋಬ್ಬರಿ 6 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಆ ನಂತರ ಆರ್‌ಸಿಬಿ ತಂಡ, ಕೇವಲ 56 ರನ್ ಗಳಿಸಲು ಪರದಾಡಿತ್ತು. ಒಟ್ನಲ್ಲಿ ಏನೇ ಆಗಲಿ ನಮ್ಮ ಆರ್‌ಸಿಬಿ ತಂಡಕ್ಕೆ ಕಪ್ ಬರಲಿ ಅಂತಿದ್ದಾರೆ ಅಭಿಮಾನಿಗಳು.












Click it and Unblock the Notifications