IPL 2025: ಆರ್‌ಸಿಬಿ ಅಭಿಮಾನಿಗಳ ಪ್ರಕಾರ ‘ಈ ಸಲ ಕಪ್ ನಮ್ದೆ’... ಯಾಕೆ ಗೊತ್ತಾ?

ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಕ್ರೀಡಾ ಲೋಕದಲ್ಲಿ ಇದೊಂದು ಪದ ಸಾಕು ಇಡೀ ಜಗತ್ತನ್ನೇ ನಡುಗಿಸಿ ಹಾಕಿಬಿಡುತ್ತದೆ. ಯಾಕಂದ್ರೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಷ್ಟು ಅಭಿಮಾನಿ ಬಳಗ ಇಡೀ ಜಗತ್ತಿನ ಯಾವುದೇ ತಂಡಕ್ಕೂ ಇಲ್ಲವೇ ಇಲ್ಲ ಎನ್ನಬಹುದು. ಬಹುಶಃ ಫುಟ್‌ಬಾಲ್ ಕ್ರೀಡೆಯಲ್ಲೂ ಇಂತಹ ಬೆಂಬಲ ನಿರೀಕ್ಷೆ ಮಾಡಲು ಆಗುವುದಿಲ್ಲ. ಐಪಿಎಲ್ ತಂಡವೊಂದು ಹತ್ತಾರು ಕೋಟಿ ಅಭಿಮಾನಿಗಳನ್ನು ಹೊಂದಿರುವ ಘಟನೆಗೆ ಕನ್ನಡಿಗರೇ ಸಾಕ್ಷಿಯಾಗಿದ್ದಾರೆ.

ಬರೋಬ್ಬರಿ 17 ಐಪಿಎಲ್ ಟೂರ್ನಿಗಳು ಮುಗಿದು ಹೋಗಿದ್ದು, ಈಗ 18ನೇ ಐಪಿಎಲ್ ಟೂರ್ನಿ ಹವಾ ಶುರುವಾಗಿದೆ. ಇನ್ನು ಎರಡೇ ಎರಡು ದಿನಗಳಲ್ಲಿ ಆರ್‌ಸಿಬಿ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ಭರ್ಜರಿ ಸುದ್ದಿಯೊಂದನ್ನ ನಮ್ಮ ಆರ್‌ಸಿಬಿ ತಂಡದ ಅಭಿಮಾನಿಗಳು ಹೇಳುತ್ತಿದ್ದಾರೆ. ಆರ್‌ಸಿಬಿ ತಂಡವು ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತೆ... ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶತ್ರುಗಳಿಗೆ ಸರಿಯಾಗಿ ಉತ್ತರವನ್ನ ನೀಡುವ ಸಮಯ ಬಂದೇ ಬರುತ್ತೆ... ಅಂತಿದ್ದಾರೆ ಫ್ಯಾನ್ಸ್.

Royal Challengers Bengaluru Fans Have More Confidence To Win The Trophy This Time

'ಈ ಸಲ ಕಪ್ ನಮ್ದೆ ಗುರೂ'

ಹೌದು, ಪ್ರತಿಬಾರಿ ಐಪಿಎಲ್ ಟೂರ್ನಿ ಶುರುವಾದಾಗಲೂ 'ಈ ಸಲ ಕಪ್ ನಮ್ದೆ...' ಅಂತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳುತ್ತಾ ಬಂದಿದ್ದಾರೆ. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಲ್ ಫ್ಯಾನ್ಸ್ ಕಡೆಯಿಂದ ಮತ್ತೊಂದು ಭರ್ಜರಿ ಸುದ್ದಿ ಸಿಗುತ್ತಿದೆ. ಅದು ಏನಪ್ಪಾ ಅಂದ್ರೆ, ಆರ್‌ಸಿಬಿ ತಂಡ 2025ರ ಐಪಿಎಲ್ ಕಪ್ ಎತ್ತುವುದು ಗ್ಯಾರಂಟಿ ಅಂತಾ. ಅಲ್ಲದೆ ಇದಕ್ಕೆ ಕಾರಣ ಯಾರಪ್ಪಾ ಅಂದ್ರೆ, ಕಿಂಗ್ ವಿರಾಟ್ ಕೊಹ್ಲಿ ಅವರಂತೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+