IPL 2025: ಆರ್‌ಸಿಬಿ ಕಪ್ ಗೆಲ್ಲದೆ ಹೋದರೆ ಅಭಿಮಾನಿಗಳಿಂದ ಹೊಸ ನಿರ್ಧಾರ...

ಮನುಷ್ಯ ಮಂಗಳ ಗ್ರಹಕ್ಕೆ ಹೋಗಲ್ಲ, ಆರ್‌ಸಿಬಿ ಕಪ್ ಗೆಲ್ಲಲ್ಲ ಅಂತಾ ವಿರೋಧಿಗಳು ಈಗ ಬಾಯಿಗೆ ಬಂದಂತೆ ಮಾತನಾಡ್ತಾ ಇದ್ದಾರೆ. ಯಾಕಂದ್ರೆ ನಮ್ಮ ಆರ್‌ಸಿಬಿ ತಂಡ ಕಪ್ ಗೆದ್ದು & ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ತನ್ನ ಹವಾ ತೋರಿಸಿಲ್ಲ. ಆದರೆ ಆರ್‌ಸಿಬಿ ತಂಡದ ಶತ್ರುಗಳಿಗೆ & ವಿರೋಧಿಗಳಿಗೆ ಗೊತ್ತಿಲ್ಲ, ಮನುಷ್ಯ ಮಂಗಳ ಗ್ರಹಕ್ಕೆ ಹೋಗ್ತಾನೆ ಮತ್ತು ನಮ್ಮ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಅಂತಾ! ಇಂತಹ ಸಮಯದಲ್ಲೇ ಆರ್‌ಸಿಬಿ ಅಭಿಮಾನಿಗಳ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಐಪಿಎಲ್ ಕ್ರೀಡಾಕೂಟ ವಿಚಾರಕ್ಕೆ ಬಂದ್ರೆ ಆರ್‌ಸಿಬಿ ಟೀಂ ಮುಟ್ಟುವವರು ಯಾರು ಹೇಳಿ? ಹೀಗೆ ಕೋಟಿ ಕೋಟಿ ಫ್ಯಾನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಇದ್ದು, ಭಾರಿ ದೊಡ್ಡ ಪ್ರಮಾಣದಲ್ಲಿ ಸಪೋರ್ಟ್ ಕೊಡುತ್ತಾರೆ. ಬೆಂಗಳೂರು ತಂಡದ ಗೆಲುವಿಗೆ ಬೆಂಬಲ ನೀಡುತ್ತಿದ್ದಾರೆ ನಮ್ಮ ಆರ್‌ಸಿಬಿಯ ಅಭಿಮಾನಿಗಳು. ಇಂತಹ ಸಮಯದಲ್ಲೇ ಆರ್‌ಸಿಬಿ ಟೀಂ ಆಡಳಿತ ಮಂಡಳಿ ವಿರುದ್ಧ ರೊಚ್ಚಿಗೆದ್ದಿರುವ ಅಭಿಮಾನಿಗಳು, ಆರ್‌ಸಿಬಿ ಕಪ್ ಗೆಲ್ಲದೆ ಹೋದ್ರೆ ಅಭಿಮಾನಿಗಳಿಂದ ಹೊಸ ನಿರ್ಧಾರ...

Royal Challengers Bengaluru Fans Decided This About Winning The Cup

ಆರ್‌ಸಿಬಿ ತಂಡಕ್ಕೆ ಎಲ್ಲಾ ಇದ್ದರೂ...

ಆರ್‌ಸಿಬಿ ಕಪ್ ಗೆಲ್ಲುತ್ತೆ... ಆರ್‌ಸಿಬಿ ಕಪ್ ಗೆಲ್ಲುತ್ತೆ... ಅಂತಾ ಕಳೆದ 17 ವರ್ಷಗಳಿಂದಲು ಸಪ್ತಕೋಟಿ ಕನ್ನಡಿಗರು ಕಾಯುತ್ತಿದ್ದಾರೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರಿನ ಹೆಸರು ಇಟ್ಟುಕೊಂಡಿರುವ, ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಡೀ ಜಗತ್ತಿನಾದ್ಯಂತ ಹೆಸರು ಮಾಡಿದೆ. ಇಷ್ಟೆಲ್ಲಾ ಬೆಂಬಲ ಇದ್ದರೂ, ವಿರಾಟ್ ಕೊಹ್ಲಿ ರೀತಿಯ ಲೆಜೆಂಡ್ ಆಟಗಾರ ಇದ್ದರೂ ಕಪ್ ಮಾತ್ರ ಇದುವರೆಗೂ ಗೆದ್ದಿಲ್ಲ. ಇದೇ ಕಾರಣಕ್ಕೆ ಈಗ ಆರ್‌ಸಿಬಿ ಅಭಿಮಾನಿಗಳು ಹೊಸ ನಿರ್ಧಾರ ಮಾಡಿದ್ದಾರೆ!

ಅಂದಹಾಗೆ, 2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲದೇ ಹೋದರೆ ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ಚೇಂಜ್ ಆಗಲಿ ಅಂತಾ ಇದೀಗ ಅಭಿಮಾನಿಗಳು ಆಗ್ರಹ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಇದೀಗ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ.

ಅಲ್ಲದೆ ಆರ್‌ಸಿಬಿ ಕಪ್ ಗೆಲ್ಲದೇ ಇರುವುದಕ್ಕೆ ಆರ್‌ಸಿಬಿ ಟೀಂ ಆಡಳಿತ ಮಂಡಳಿ ಕೂಡ ಮುಖ್ಯ ಕಾರಣವಾಗಿದೆ ಅಂತಾ ಆರೋಪ ಮಾಡುತ್ತಿದ್ದಾರೆ ಅಭಿಮಾನಿಗಳು. ಇದೇ ಕಾರಣಕ್ಕೆ, 2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಸೋತರೆ ಆಡಳಿತ ಮಂಡಳಿ & ಅಧಿಕಾರಿಗಳು ಬದಲಾಗಲಿ ಅಂತಿದ್ದಾರೆ ಆರ್‌ಸಿಬಿ ಬೆಂಗಳೂರು ಫ್ಯಾನ್ಸ್.

ಆರ್‌ಸಿಬಿ ಕಪ್ ಗೆಲ್ಲೋದು ಗ್ಯಾರಂಟಿ?

ಬೆಂಗಳೂರು ತಂಡಕ್ಕೆ ಅಂತಾ ಇಷ್ಟು ದಿನಗಳ ಕಾಲ ಕಷ್ಟಪಟ್ಟರೂ, ವಿರಾಟ್ ಕೊಹ್ಲಿ ಅವರ ಸಾರಥ್ಯದಲ್ಲಿ ಇದುವರೆಗೂ ಒಂದೇ ಒಂದು ಐಪಿಎಲ್ ಕಪ್ ಗೆಲ್ಲಲು ಆಗಿಲ್ಲ. ಈ ಕಾರಣಕ್ಕೆ 2025ರ ಐಪಿಎಲ್ ಕಪ್ ನಮ್ಮದೆ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಈ ಬಾರಿ ಟೂರ್ನಿ ಯಾರು ಗೆಲ್ಲುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ. ಹಾಗೇ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಗೆದ್ದೇ ಗೆಲ್ಲಬೇಕು ಎಂಬ ಆಸೆ ಈಡೇರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+