ಭಾರತದ ಕ್ರಿಕೆಟರ್ ಸರ್ಫರಾಜ್ ಖಾನ್‌ ಕಾಶ್ಮೀರಿ ಕನ್ಯೆಗೆ ಕ್ಲೀನ್ ಬೋಲ್ಡ್ ಆಗಿದ್ದೇಗೆ?

ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಈಗ ಸರ್ಫರಾಜ್ ಖಾನ್‌ ಹೆಸರು ಚಿರಪರಿಚಿತ. ಯಾಕಂದ್ರೆ ಈ ಆಟಗಾರ ಭಾರತ ಕ್ರಿಕೆಟ್ ತಂಡಕ್ಕೆ ಹೆಜ್ಜೆ ಇಟ್ಟ ಮೊದಲ ಪಂದ್ಯದಲ್ಲೇ ಭಾರಿ ದೊಡ್ಡ, ಸೌಂಡ್ ಮಾಡುತ್ತಿದ್ದಾರೆ. ಅದೃಷ್ಟದಲ್ಲಿ ಅವಕಾಶ ಗಿಟ್ಟಿಸಿಕೊಂಡರೂ, ಸಿಕ್ಕ ಅವಕಾಶವನ್ನ ಸರ್ಫರಾಜ್ ಖಾನ್‌ ಅಚ್ಚುಕಟ್ಟಾಗಿ ಬಳಸಿಕೊಂಡ ಕಾರಣ ಭಾರತೀಯ ಕ್ರಿಕೆಟ್ ಜಗತ್ತು ಈಗ ಈ ಆಟಗಾರನಿಗೆ ತಲೆಬಾಗಿದೆ. ಹೀಗಿದ್ದಾಗ ಕಾಶ್ಮೀರದ ಕನ್ಯೆಯನ್ನ ಸರ್ಫರಾಜ್ ಮದುವೆ ಆದ ವಿಚಾರ ನಿಮಗೆ ಗೊತ್ತಾ?

5 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಪಂದ್ಯ ಭಾರತ & ಇಂಗ್ಲೆಂಡ್ ಟೀಂ ಮಧ್ಯೆ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ. ಭಾರತ ತಂಡದ ಯುವ ಸ್ಟಾರ್ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್‌ಗೆ ಈ ಪಂದ್ಯವೆ ದೊಡ್ಡ ಟರ್ನಿಂಗ್ ನೀಡಿದೆ. ಈ ಪಂದ್ಯದಲ್ಲಿ ಸರ್ಫರಾಜ್‌ಗೆ ಟೆಸ್ಟ್‌ ಪದಾರ್ಪಣೆ ಅವಕಾಶ ಸಿಕ್ಕು ಮಿಂಚಿದ್ದಾರೆ. ಹಾಗಾದರೆ ಸರ್ಫರಾಜ್ ಖಾನ್‌ ಮದುವೆ ಕಹಾನಿ ಬಗ್ಗೆ ನಿಮಗೆ ಗೊತ್ತಾ? ಈ ಸಮಯದಲ್ಲಿ ಮೈದಾನದಲ್ಲಿ ತನ್ನ ಗಂಡ ಅಂದರೆ, ಪತಿಗೆ ಬೆಂಬಲ ನೀಡಲು ಸರ್ಫರಾಜ್ ಖಾನ್‌ ಪತ್ನಿ ಬಂದಿದ್ದು ಏಕೆ? ಮುಂದೆ ಓದಿ.

Romana Zahoor Biography: All you need to know about Sarfaraz Khan Wife in kannada

ಸರ್ಫರಾಜ್ ಖಾನ್ ಪತ್ನಿ ಯಾರು?

ಅಂದಹಾಗೆ ವಿರಾಟ್ ಕೊಹ್ಲಿ ಅಲಭ್ಯತೆ ಹಾಗೂ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಗಾಯದ ಕಾರಣ ಭಾರತ & ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆಲ ಹೊಸ ಆಟಗಾರರಿಗೆ ಅವಕಾಶ ಸಿಕ್ಕಿದೆ. ಪದಾರ್ಪಣೆ ಮಾಡಲು ಚಾನ್ಸ್ ಗಿಟ್ಟಿಸಿಕೊಂಡು, ರಜತ್ ಪಾಟಿದಾರ್ ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ ಟೆಸ್ಟ್ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ. ರಾಜ್‌ಕೋಟ್ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಿದ್ದಾಗ ಸರ್ಫರಾಜ್ ಖಾನ್‌ಗೆ ಮೊದಲ ಪಂದ್ಯದಲ್ಲೇ ಕೋಟಿ ಕೋಟಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಾಗಾದ್ರೆ ಈ ಆಟಗಾರನ ಹೆಂಡತಿ ಎಲ್ಲಿಯವರು ಗೊತ್ತಾ?

ಮದುವೆ ನಂತರ ಸರ್ಫರಾಜ್‌ಗೆ ಅದೃಷ್ಟ?

ಯುವ ಆಟಗಾರರು ಭಾರತ ತಂಡಕ್ಕೆ ಎಂಟ್ರಿಕೊಡಲು, ಅವರ ಪರಿಶ್ರಮದ ಜೊತೆಗೆ ಲೇಡಿ ಲಕ್​ ಸಹ ಇದೆ ಎಂಬ ಮಾತುಗಳು ಓಡಾಡುತ್ತಿವೆ. ಇದಕ್ಕೆ ತಕ್ಕಂತೆ ಸರ್ಫರಾಜ್ ಖಾನ್ ಜೀವನಕ್ಕೆ ಕೂಡ ಅವರ ಪತ್ನಿ ಅದೃಷ್ಟ ತಂದಿದ್ದಾರೆ. 2023ರ ಆಗಸ್ಟ್ 6 ರಂದು ರೊಮಾನಾ ಜಹೂರ್ ಅವರನ್ನು ಸರ್ಫರಾಜ್ ಖಾನ್​ ವಿವಾಹವಾದರು. ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದ ಅವರು ಮದುವೆ ನಂತರ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 26 ವರ್ಷದ ಸರ್ಫರಾಜ್ ಅವರ ಪತ್ನಿ ರೊಮಾನಾ ಜಹೂರ್, ಕಾಶ್ಮೀರದ ಶೋಪಿಯಾನ್ ಜಿಲ್ಲೆ ನಿವಾಸಿ.

ಸರ್ಫರಾಜ್ ಖಾನ್ ಲವ್ ಕಹಾನಿ!

ರೊಮಾನಾ ಜಹೂರ್, ಕಾಶ್ಮೀರದ ಶೋಪಿಯಾನ್ ಜಿಲ್ಲೆ ಮೂಲದವರೇ ಆಗಿದ್ದರೂ ಭಾರತದ ರಾಜಧಾನಿ ದೆಹಲಿಯಲ್ಲಿ ಬಿಎಸ್ಸಿ ಮಾಡಿದ್ದು, ಸರ್ಫರಾಜ್ ಖಾನ್ ಅವರ ಸೋದರ ಸಂಬಂಧಿಗೆ ಕ್ಲಾಸ್ ಮೇಟ್ ಆಗಿದ್ದರಂತೆ. ಈ ಸೋದರ ಸಂಬಂಧಿ ಜೊತೆಗೆ ರೊಮಾನಾ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂಗೆ ಸರ್ಫರಾಜ್ ಅವರ ಪಂದ್ಯ ವೀಕ್ಷಿಸಲು ಹೋಗಿದ್ದರು. ಅಲ್ಲಿಯೇ ಇಬ್ಬರೂ, ಮೊದಲ ಬಾರಿಗೆ ಭೇಟಿಯಾಗಿದ್ದರು. ಬಳಿಕ ನಿಧಾನವಾಗಿ ಇಬ್ಬರಿಗೂ ಪರಿಚಯವಾಗಿ ಇಬ್ಬರೂ ಇಷ್ಟಪಡಲು ಪ್ರಾರಂಭಿಸಿ ಲವ್ವಲ್ಲಿ ಬಿದ್ದರಂತೆ. ಹೀಗಾಗಿ ಎರಡೂ ಕುಟುಂಬಗಳು ಮದುವೆಗೆ ಒಪ್ಪಿದ್ದರಿಂದ, 6 ಆಗಸ್ಟ್ 2023 ರಂದು ಕಾಶ್ಮೀರದಲ್ಲಿ ಅದ್ಧೂರಿ ಮದುವೆ ಕೂಡ ಆಗಿತ್ತು.

ಇನ್ನ ರಾಜ್‌ಕೋಟ್‌ನಲ್ಲಿ ಸರ್ಫರಾಜ್‌ಗೆ ಅನಿಲ್ ಕುಂಬ್ಳೆ ಟೆಸ್ಟ್ ಕ್ಯಾಪ್ ಕೊಟ್ಟಾಗ ಭಾವುಕ ಘಟನೆ ನಡೆದಿತ್ತು. ಅದು ಏನೆಂದರೆ ಸರ್ಫರಾಜ್ ಖಾನ್‌ಗೆ ಟೆಸ್ಟ್ ಕ್ಯಾಪ್ ಕೊಡುವಾಗ, ಸರ್ಫರಾಜ್ ಅವರ ತಂದೆ ನೌಶಾದ್ ಮತ್ತು ಪತ್ನಿ ರೊಮಾನಾ ಕೂಡ ಅಲ್ಲಿದ್ದರು. ಹೀಗೆ ಇಡೀ ಪಂದ್ಯದಲ್ಲಿ ತನ್ನ ಪತಿಯ ಆಟವನ್ನ ನೋಡುತ್ತಾ, ರೊಮಾನಾ ಅವರು ಬೆಂಬಲ ವ್ಯಕ್ತಪಡಿಸಿದರು. ಈ ರೀತಿ ನೋಡ ನೋಡುತ್ತಲೇ ಹಾಫ್ ಸೆಂಚುರಿ ಬಾರಿಸಿದ ಸರ್ಫರಾಜ್ ಖಾನ್ ಹೊಸ ದಾಖಲೆ ಬರೆಯಬೇಕು ಎನ್ನುವಷ್ಟರಲ್ಲಿ, ಔಟ್ ಆಗಿದ್ದರು. ಆದರೂ ಸರ್ಫರಾಜ್ ಖಾನ್ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತು ತಲೆಬಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+