Rohit Sharma: ಅತಿ ವೇಗದ ಕಾರು ಚಾಲನೆ! ದಂಡ ಕಟ್ಟಿದ ರೋಹಿತ್ ಶರ್ಮಾ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪುಣೆ-ಮುಂಬೈ ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈಗ ಹಲವು ಊಹಾಪೋಹಗಳಿಗೆ ತೆರೆಬಿದ್ದಿದ್ದು, ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ರೋಹಿತ್ ಶರ್ಮಾ ಮುಂಬೈನಿಂದ ಪುಣೆಗೆ ಬರುವಾಗ ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದು ನಿಜ, ಆದರೆ ಗುರುವಾರ ಅವರು ಗಂಟೆಗೆ 200 ಕಿ.ಮೀ ವೇಗದಲ್ಲಿ ಕಾರು ಚಾಲನೆ ಮಾಡಿದ್ದಾರೆ ಎನ್ನುವುದು ಸುಳ್ಳು ಎಂದು ತಿಳಿದುಬಂದಿದೆ.

rohit-sharmas-fines

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಮುಂಬೈನಿಂದ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂಗೆ ರೋಹಿತ್ ಕಾರು ಚಾಲನೆ ಮಾಡಿಕೊಂಡು ಬಂದಿದ್ದರು. ರೋಹಿತ್ ಹೆದ್ದಾರಿಯಲ್ಲಿ ಗಂಟೆಗೆ 105 ಕಿಮೀ ಮತ್ತು 117 ಕಿಮೀ ವೇಗದಲ್ಲಿ ಚಾಲನೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಹೆದ್ದಾರಿಯಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಮಾತ್ರ ವಾಹನ ಚಲಾಯಿಸಲು ಅನುಮತಿ ಇದೆ.

ರೋಹಿತ್ ಶರ್ಮಾ ಎರಡು ಬಾರಿ ಅತಿ ವೇಗದಲ್ಲಿ ಚಾಲನೆ ಮಾಡುವುದು ಕಂಡು ಬಂದಿದ್ದು, ಇದಕ್ಕಾಗಿ ಅವರಿಗೆ 4,000 ರೂಪಾಯಿ ದಂಡ ವಿಧಿಸಿದ್ದು, ಗುರುವಾರ ಅವರು ದಂಡ ಪಾವತಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಹೇಳಿದ್ದೇನು

"ಅಕ್ಟೋಬರ್ 17 ರಂದು ಈ ವೇಗದ ಉಲ್ಲಂಘನೆಗಳು ಸಂಭವಿಸಿವೆ ಮತ್ತು ನಿಯಮದ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ದಂಡವನ್ನು ತ್ವರಿತವಾಗಿ ಪಾವತಿಸಲಾಗಿದೆ" ಎಂದು ಹೆದ್ದಾರಿ ಪೊಲೀಸ್ ಅಧೀಕ್ಷಕ ಲತಾ ಫಾಡ್ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ರೋಹಿತ್ ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಚಾಲನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ ಆದರೆ ಅದು ಸತ್ಯವಲ್ಲ. ಅಧಿಕೃತ ವರದಿಯ ಪ್ರಕಾರ, ಆ ಹೆದ್ದಾರಿಯಲ್ಲಿ ರೋಹಿತ್ ಶರ್ಮಾ 117 ಕಿಮೀ ವೇಗದಲ್ಲಿ ಕಾರು ಓಡಿಸಿರುವುದು, ಎಕ್ಸ್‌ಪ್ರೆಸ್‌ವೇಯ ಎರಡೂ ಲೇನ್‌ಗಳಲ್ಲಿ ಅಳವಡಿಸಲಾದ ಆಟೋ ಕ್ಯಾಮೆರಾಗಳು ಸೆರೆಹಿಡಿದಿವೆ.

ಪೊಲೀಸರ ಪ್ರಕಾರ, ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯ ಎರಡೂ ಲೇನ್‌ಗಳಲ್ಲಿ ವಾಹನಗಳ ವೇಗವನ್ನು ಮೇಲ್ವಿಚಾರಣೆ ಮಾಡಲು ಸ್ವಯಂಚಾಲಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಾಹನವು ವೇಗದ ಮಿತಿಯನ್ನು ಉಲ್ಲಂಘಿಸಿದರೆ ಕ್ಯಾಮರಾ ಅದನ್ನು ರೆಕಾರ್ಡ್ ಮಾಡಲಿದ್ದು, ಪೊಲೀಸರು ಕಾರಿನ ಮಾಲೀಕರಿಗೆ ದಂಡವನ್ನು ವಿಧಿಸುತ್ತಾರೆ.

ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ಮುಂದುವರೆದಿದೆ, ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಕೂಡ 48 ರನ್‌ ಗಳಿಸಿದ ಅವರು, ಭಾರತಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು, 4 ಪಂದ್ಯಗಳಿಂದ 265 ರನ್ ಗಳಿಸಿದ್ದು ಭಾರತದ ಪರ ಈ ಬಾರಿ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+