Rohan Bopanna: ಕನ್ನಡಿಗ ರೋಹನ್ ಬೋಪಣ್ಣ ಟೆನಿಸ್‌ಗೆ ವಿದಾಯ
ಕರ್ನಾಟಕದ ಸ್ಟಾರ್ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಪ್ಯಾರೀಸ್‌ನಲ್ಲಿ ನಿರಾಸೆ ಅನುಭವಿಸಿದ ಬಳಿಕ ರೋಹನ್ ಬೋಪಣ್ಣ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ತಂಡವು 7-5, 6-2 ರಿಂದ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನ ಬಳಿಕ ಬೋಪಣ್ಣ ತಮ್ಮ ವೃತ್ತಿ ಜೀವನಕ್ಕೆ ಪುರ್ಣ ವಿರಾಮ ನೀಡಿದ್ದಾರೆ. ಬೋಪಣ್ಣ 22 ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಈಗ ಅವರು ತಮ್ಮ ಐತಿಹಾಸಿಕ ವೃತ್ತಿಜೀವನಕ್ಕೆ ಕೊನೆಗೊಳಿಸಿದ್ದಾರೆ.

ಇದು ನನ್ನ ಟೆನಿಸ್ ವೃತ್ತಿಜೀವನದ ಕೊನೆಯ ಪಂದ್ಯಾವಳಿ. ಆಟಗಾರನಾಗಿ ನನ್ನ ಸಾಧನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಎಲ್ಲಿದ್ದೇನೆ ಎಂಬುದು ನನಗೆ ದೊಡ್ಡ ಸಮಾಧಾನ. ನಾನು ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸರಲಿಲ್ಲ. 20 ವರ್ಷಗಳಿಗೂ ಹೆಚ್ಚು ಕಾಲ ದೇಶವನ್ನು ಪ್ರತಿನಿಧಿಸಿರುವ ಖುಷಿ ಇದೆ. ನಾನು ಈ ಐತಿಹಾಸಿಕ ವೃತ್ತಿಜೀವನದ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಎಂದು ಕನ್ನಡಿಗ ರೋಹನ್ ಬೋಪಣ್ಣ ಹೇಳಿದ್ದಾರೆ.
2 ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತ
ರೋಹನ್ ಬೋಪಣ್ಣ ತಮ್ಮ ಐತಿಹಾಸಿಕ ಟೆನಿಸ್ ವೃತ್ತಿಜೀವನದಲ್ಲಿ 6 ಬಾರಿ ಡಬಲ್ಸ್ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಸ್ಲಾಮ್ ಫೈನಲ್‌ಗೆ ಅರ್ಹತೆ ಪಡೆದಿದ್ದರೆ. ಅಲ್ಲದೆ 2 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. 2017 ರಲ್ಲಿ, ಬೋಪಣ್ಣ ಅವರು ಕೆನಡಾದ ಗ್ಯಾಬ್ರಿಯೆಲಾ ದಬ್ರೊವ್ಸ್ಕಿ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು, 2024 ರಲ್ಲಿ, ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ತಂಡ ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ ನಂತರವೂ ಪದಕ ಗೆಲ್ಲಲು ವಂಚಿತರಾಗಿದ್ದರು. ಈ ಬಾರಿ ಶ್ರೀರಾಮ್ ಬಾಲಾಜಿ ಜತೆಗೂಡಿ ಒಲಿಂಪಿಕ್ ಪದಕ ಗೆಲ್ಲುವ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶ ಸಿಕ್ಕಿತ್ತು. ಆದರೆ ಫ್ರೆಂಚ್ ಜೋಡಿ ಗೇಲ್ ಮೊನ್ಫಿಲ್ಸ್ ಮತ್ತು ರೋಜರ್ ವಾಸೆಲಿನ್ ಇದಕ್ಕೆ ಅವಕಾಶ ನೀಡಲಿಲ್ಲ.












Click it and Unblock the Notifications