ಟೀಮ್ ಇಂಡಿಯಾ ಸಾರ್ವಕಾಲಿಕ ಟೆಸ್ಟ್ ತಂಡದಲ್ಲಿ ಕನ್ನಡಿಗ ನಂಬರ್ 1.. ಕೊಡಗಿನ ಉತ್ತಪ್ಪನ ನಿರ್ಧಾರಕ್ಕೆ ಭಾರಿ ಮೆಚ್ಚುಗೆ
Robin Uthappa: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್, ಕನಾಟಕದ ಕೊಡಗಿನ ರಾಬಿನ್ ಉತ್ತಪ್ಪ ಅವರು ಭಾರತದ ಸಾರ್ವಕಾಲಿಕ ಟೆಸ್ಟ್ ತಂಡವನ್ನು ಪ್ರಕಟಿಸಿದ್ದಾರೆ. ಹಾಗಾದ್ರೆ ಇದರಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ರಾಬಿನ್ ಉತ್ತಪ್ಪ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋವೊಂದರಲ್ಲಿ ಭಾರತದ ಸಾರ್ವಕಾಲಿಕ ಟೆಸ್ಟ್ ಪ್ಲೇಯಿಂಗ್ 11 ತಂಡವನ್ನು ಪ್ರಕಟಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಅದರಲ್ಲೂ 4ನೇ ಕ್ರಮಾಂಕಕ್ಕೆ ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ಉತ್ತಪ್ಪ ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

4ನೇ ಕ್ರಮಾಂಕದ ಕುರಿತು ಉತ್ತಪ್ಪ ನಿರ್ಧಾರ ಏನು?
ವಿಶ್ವಶ್ರೇಷ್ಠ ಬ್ಯಾಟರ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಅವಧಿವರೆಗೂ ಟೆಸ್ಟ್ ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲೇ ಬ್ಯಾಟ್ ಬೀಸಿದವರು. ಈ ಇಬ್ಬರಲ್ಲಿ ಒಬ್ಬರನ್ನು 4ನೇ ಸ್ಥಾನಕ್ಕೆ ಆಯ್ಕೆ ಮಾಡಬೇಗಿ ಬಂದಾಗ ಉತ್ತಪ್ಪ, 'ಸಚಿನ್ ತೆಂಡೂಲ್ಕರ್ 4ನೇ ಕ್ರಮಾಂಕದಲ್ಲಿ ಆಡುತ್ತಾರೆ, ವಿರಾಟ್ ಕೊಹ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬೀಸಲಿದ್ದಾರೆ. ಏಕೆಂದರೆ ವಿರಾಟ್‌ಗಾಗಿ ನಾವು ತಂಡದಲ್ಲಿ ಜಾಗ ಮಾಡಿಕೊಡಲೇಬೇಕು,' ಎಂದು ವಿವರಿಸಿದ್ದಾರೆ.
ಉತ್ತಪ್ಪ ಹೆಸರಿಸಿದ ಸಾರ್ವಕಾಲಿಕ ಭಾರತೀಯ ಟೆಸ್ಟ್ ತಂಡ
* ಆರಂಭಿಕರಾಗಿ ವಿರೇಂದ್ರ ಸೆಹ್ವಾಗ್ ಮತ್ತು ಕೆ. ಎಲ್. ರಾಹುಲ್
* 3ನೇ ಕ್ರಮಾಂಕ: ರಾಹುಲ್ ದ್ರಾವಿಡ್,
* 4ನೇ ಕ್ರಮಾಂಕ: ಸಚಿನ್ ತೆಂಡೂಲ್ಕರ್,
* 5ನೇ ಕ್ರಮಾಂಕ: ವಿರಾಟ್ ಕೊಹ್ಲಿ
* ವಿಕೆಟ್ ಕೀಪರ್: ಎಂ.ಎಸ್. ಧೋನಿ
* ಆಲ್ ರೌಂಡರ್: ಕಪಿಲ್ ದೇವ್
* ಸ್ಪಿನ್ನರ್‌ಗಳು: ರವಿಚಂದ್ರನ್ ಅಶ್ವಿನ್ ಮತ್ತು ಅನಿಲ್ ಕುಂಬ್ಳೆ
* ವೇಗದ ಬೌಲರ್‌ಗಳು: ಜಸ್ಪ್ರೀತ್ ಬುಮ್ರಾ ಮತ್ತು ಜಹೀರ್ ಖಾನ್
ತಂಡದಲ್ಲಿ ಕನ್ನಡಿಗನಿಗೆ ನಂಬರ್ 1 ಸ್ಥಾನ..
ಈ ತಂಡದಲ್ಲಿ ಆರಂಭಿಕರಾಗಿ ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ನೀಡಿದ ಆದ್ಯತೆಯಿಂದಾಗಿ ಸುನಿಲ್ ಗವಾಸ್ಕರ್ ಹಾಗೂ ಗೌತಮ್ ಗಂಭೀರ್ ಹೊರಗುಳಿದಿದ್ದಾರೆ. ಹಾಗೆಯೇ ಸೌರವ್ ಗಂಗೂಲಿ, ಚೇತೇಶ್ವರ್ ಪೂಜಾರ ಹಾಗೂ ಹರ್ಭಜನ್ ಸಿಂಗ್ ಅವರಂತಹ ದಿಗ್ಗಜರಿಗೂ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ.
ಇನ್ನೂ ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್ ಕುರಿತು ಉತ್ತಪ್ಪ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ಅವರು, ಇಂದು ಜಾಗತಿಕ ಕ್ರಿಕೆಟ್‌ನ ಅತ್ಯಂತ ಫಿಟ್ ಆಗಿರುವ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ.
ದೆಹಲಿ ಮೂಲದ ವಿರಾಟ್ ಕೊಹ್ಲಿ ಅವರು ಆರಂಭದಲ್ಲಿ ಚೋಲೆ ಬಟೂರೆ, ಬ್ರೆಡ್ ಪಕೋಡ, ಪನೀರ್ ಖುರ್ಚಾನ್ ಮತ್ತು ಕೆಸ್ಸಾಟಾ ಐಸ್‌ಕ್ರೀಮ್‌ಗಳಂತಹ ಖಾದ್ಯಗಳನ್ನು ಹೆಚ್ಚು ಸೇವನೆ ಮಾಡುತ್ತಿದ್ದರು. ಆದರೆ ವಿಶ್ವ ದರ್ಜೆಯ ಕ್ರಿಕೆಟಿಗನಾಗಲು ಅವರು ತಮ್ಮ ಆಹಾರ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡು ಕೋಟ್ಯಂತರ ಅಭಿಮಾನಿಗಳಿಗೆ ಫಿಟ್‌ನೆಸ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ.
ರಾಬಿನ್ ಉತ್ತಪ್ಪ ಅವರ ಈ ಸಾರ್ವಕಾಲಿಕ ಟೆಸ್ಟ್ ತಂಡವು ಹಳೆಯ ಮತ್ತು ಹೊಸ ಪೀಳಿಗೆಯ ಶ್ರೇಷ್ಠ ಆಟಗಾರರ ಸಮತೋಲಿತ ಸಂಯೋಜನೆಯಿಂದ ಕೂಡಿದೆ. ಅದರಲ್ಲೂ ಸಚಿನ್ ಮತ್ತು ವಿರಾಟ್ ಇಬ್ಬರನ್ನೂ ಒಂದೇ ತಂಡದಲ್ಲಿ ಸೇರಿಸುವ ಚಾಣಾಕ್ಷ ಪ್ರಯತ್ನವನ್ನು ಮಾಡಿದ್ದಾರೆ ಎನ್ನಲಾಗಿದೆ.


Click it and Unblock the Notifications
