Virat Kohli: ಅಮಿತ್ ಮಿಶ್ರಾ ಆರೋಪಗಳ ಬೆನ್ನಲ್ಲೇ ಕೊಹ್ಲಿಯನ್ನು ಹಾಡಿ ಹೊಗಳಿದ ಕನ್ನಡಿಗ ರಾಬಿನ್ ಉತ್ತಪ್ಪ

ವಿರಾಟ್ ಕೊಹ್ಲಿ ಕಂಡರೆ ಕೋಟ್ಯಂತರ ಮಂದಿಗೆ ಇಷ್ಟ, ಹಾಗೆ ಕೆಲವು ಮಂದಿಗೆ ಆತನನ್ನು ಕಂಡರೆ ಅದ್ಯಾಕೋ ಸಿಟ್ಟು, ಅಸಹನೆ ಇದೆ. ಕೆಲವು ಪರೋಕ್ಷವಾಗಿ ಕೊಹ್ಲಿಯನ್ನು ಟೀಕಿಸಿದರೆ ಇನ್ನೂ ಕೆಲವರು ನೇರವಾಗಿಯೇ ಕೊಹ್ಲಿ ಮೇಲೆ ಮುಗಿಬೀಳುತ್ತಾರೆ. ಕೊಹ್ಲಿ ಕೂಡ ತನ್ನ ವಿರುದ್ಧದ ಟೀಕೆಗಳಿಗೆ ನೇರಾ ನೇರಾ ಉತ್ತರ ಕೊಟ್ಟಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಅಮಿತ್ ಮಿಶ್ರಾ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡಕ್ಕಾಗಿ ಆಡಿರುವ ಅಮಿತ್ ಮಿಶ್ರಾಗೆ, ಕೊಹ್ಲಿ ಬದಲಾಗಿದ್ದು ತಡವಾಗಿ ಗೊತ್ತಾದಂತಿದೆ. ಅದಕ್ಕಾಗಿಯೇ ಈಗ ಆತನ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ಯಶಸ್ಸು ಸಿಕ್ಕ ಬಳಿಕ ಕೊಹ್ಲಿ ಬದಲಾದ, ಆತನಿಗೆ ಹೆಚ್ಚು ಸ್ನೇಹಿತರಿಲ್ಲ ಎಂದೆಲ್ಲಾ ಬಡಬಡಿಸಿದ್ದಾರೆ.

Robin Uthappa Commends Virat Kohli s Evolution Amidst Mishra s Allegations

ಕನ್ನಡಿಗ ರಾಬಿನ್ ಉತ್ತಪ್ಪ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದು, ಕೊಹ್ಲಿ ಏನು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದರುವ ರಾಬಿನ್ ಉತ್ತಪ್ಪ, ಕೊಹ್ಲಿ ಬೆಳೆದುಬಂದ ರೀತಿಯನ್ನು ಕೊಂಡಾಡಿದ್ದಾರೆ.

ಉತ್ತಪ್ಪ ಹೇಳಿದ್ದೇನು?

ದೆಹಲಿಯ ಹುಡುಗನೊಬ್ಬ ಕ್ರಿಕೆಟ್‌ನ ದಂತಕಥೆಯಾಗಿ ಬೆಳೆದ ರೀತಿಯನ್ನು ಉತ್ತಪ್ಪ ಶ್ಲಾಘಿಸಿದ್ದಾರೆ. 2008ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಕೊಹ್ಲಿ, ಆ ನಂತರ ದಿಗ್ಗಜನಾಗಿ ಬೆಳೆದು ನಿಂತಿದ್ದಾರೆ.

"ನಿಜವಾಗಿಯೂ ವಿರಾಟ್ ದಿಲ್ಲಿಯ ಹುಡುಗನಿಂದ ಮಾನವನಾಗಿ ವಿಕಸನಗೊಳ್ಳುವುದನ್ನು ನಾನು ನೋಡಿದ್ದೇನೆ. ಅವರ ಬೆಳವಣಿಗೆ ಸಾಕಷ್ಟು ಅದ್ಭುತವಾಗಿದೆ ಎಂದು ನಿಮಗೆ ತಿಳಿದಿದೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ. 15 ವರ್ಷಗಳ ಹಿಂದೆ ಬಿತ್ತಿದ್ದನ್ನು ಇಂದು ಅವರು ಪ್ರಾಯೋಗಿಕವಾಗಿ ಕೊಯ್ಯುತ್ತಿದ್ದಾರೆ" ಎಂದು ಉತ್ತಪ್ಪ ಹೇಳಿದರು.

ವಿರಾಟ್ ಕೊಹ್ಲಿಯವರ ಆತ್ಮವಿಶ್ವಾಸ ಬೇರೆಯವರನ್ನು ಅಚ್ಚರಿಗೊಳಿಸುತ್ತದೆ. ಅದೇ ವಿಶ್ವಾಸದಿಂದಲೇ ಅವರು ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿದರು. ಹಲವು ದಾಖಲೆಗಳನ್ನು ಮುರಿದರು ಎಂದು ಹೇಳಿದರು.

ಚೀಕು (ವಿರಾಟ್ ಕೊಹ್ಲಿ) ಬಗ್ಗೆ ನನಗೆ ಯಾವಾಗಲೂ ಕಾಣುವ ವಿಷಯವೆಂದರೆ ಅವನಲ್ಲಿರುವ ಸ್ಪಷ್ಟತೆ. ನಾನು 19 ವರ್ಷದ ಯುವಕ ವಿರಾಟ್ ಕೊಹ್ಲಿಯ ಮಾತುಗಳನ್ನು ಕೇಳಿದಾಗ, ಅವನ ಬಗ್ಗೆ ಅಥವಾ ಅವನ ದೃಢತೆಯ ಬಗ್ಗೆ ಮಾತನಾಡುವುದು ತಿಳಿದಿದೆ ಎಂದರು.

ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ವಿರಾಟ್ ಕೊಹ್ಲಿಗೆ ಟೀಕೆಗಳು ಏನೂ ಹೊಸದಲ್ಲ. ಅದೆಲ್ಲದಕ್ಕೂ ಕೊಹ್ಲಿ ಮೈದಾನದಲ್ಲಿ ಮತ್ತು ಮೈದಾನದ ಹೊರಗಡೆ ತಕ್ಕ ಉತ್ತರ ಕೊಟ್ಟಿದ್ದಾರೆ.

ಸದ್ಯ ಪತ್ನಿ ಮಕ್ಕಳ ಜೊತೆ ಲಂಡನ್‌ನಲ್ಲಿ ಬಿಡುವಿನ ವೇಳೆಯನ್ನು ಕಳೆಯುತ್ತಿರುವ ವಿರಾಟ್ ಕೊಹ್ಲಿ, ಬಾಂಗ್ಲಾದೇಶದ ವಿರುದ್ದದ ಟೆಸ್ಟ್ ಸರಣಿಗೆ ಮರಳುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+