Neeraj Chopra: ನೀರಜ್ ಚೋಪ್ರಾ ಚಿನ್ನ ಗೆದ್ದರೆ ನೀವು 10 ಲಕ್ಷ ಹಣ ಗೆಲ್ಲಬಹುದು! ಹೇಗೆ ಗೊತ್ತಾ?

ಕುಸ್ತಿಪಟು ವಿನೇಶ್ ಫೋಗಟ್‌ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಪರ್ಧಿಸಲು ಅನರ್ಹ ಎಂದು ಘೋಷಣೆಯಾದ ಬಳಿಕ ಭಾರತದ ಮತ್ತೊಂದು ಪದಕದ ಕನಸು ಕಮರಿದೆ. ಈಗ ಭಾರತಕ್ಕೆ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ. ಈಗಾಗಲೇ ಫೈನಲ್ ತಲುಪಿರುವ ಅವರು ಚಿನ್ನ ಗೆಲ್ಲುವ ಅವಕಾಶವಿದೆ. ಈ ಬೆನ್ನಲ್ಲೇ ಕ್ರಿಕೆಟಿಗ ರಿಷಬ್ ಪಂತ್ ಅಭಿಮಾನಿಗಳಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರನ್ನು ಬೆಂಬಲಿಸಲು ರಿಷಬ್ ಪಂತ್ ವಿಭಿನ್ನ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನೀರಜ್ ಚೋಪ್ರಾ ಚಿನ್ನ ಗೆದ್ದರೆ ಅದೃಷ್ಟಶಾಲಿ ಹಿಂಬಾಲಕರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ರಿಷಬ್‌ ಪಂತ್ ಭರವಸೆ ನೀಡಿದ್ದಾರೆ. ರಿಷಬ್ ಪಂತ್ ಎಕ್ಸ್‌ನಲ್ಲಿ ಮಾಡುವ ಪೋಸ್ಟ್‌ನಲ್ಲಿ ಹೆಚ್ಚು ಇಷ್ಟಪಡುವ ಕಾಮೆಂಟ್ ಮಾಡುವ ವ್ಯಕ್ತಿಗೆ ₹1,00,089 ಬಹುಮಾನ ನೀಡುವುದಾಗಿ ಪಂತ್ ಘೋಷಣೆ ಮಾಡಿದ್ದಾರೆ. ಉಳಿದ 10 ವಿಜೇತರಿಗೆ ಉಚಿತ ವಿಮಾನ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ.

Rishabh Pant Offers Cash Reward for Fans if Neeraj Chopra win final

ಎಕ್ಸ್‌ನಲ್ಲಿ ರಿಷಬ್ ಪಂತ್ ಪೋಸ್ಟ್ ಹಂಚಿಕೊಂಡಿದ್ದು ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ನೀರಜ್ ಚೋಪ್ರಾ ನಾಳೆ ಚಿನ್ನದ ಪದಕ ಗೆದ್ದರೆ. ಟ್ವೀಟ್ ಅನ್ನು ಹೆಚ್ಚು ಇಷ್ಟಪಡುವ ಮತ್ತು ಹೆಚ್ಚು ಕಮೆಂಟ್ ಮಾಡುವ ವ್ಯಕ್ತಿಗೆ 100089 ರೂಪಾಯಿಗಳನ್ನು ಪಾವತಿಸುತ್ತೇನೆ. ಉಳಿದ 10 ಜನರಿಗೆ ವಿಮಾನ ಟಿಕೆಟ್ ನೀಡುತ್ತೇನೆ. ನನ್ನ ಸಹೋದರನಿಗೆ ಭಾರತ ಮತ್ತು ಹೊರದೇಶಗಳಿಂದ ಕೂಡ ಹೆಚ್ಚಿನ ಬೆಂಬಲ ಸಿಗಲಿ" ಎಂದು ಹೇಳಿದ್ದಾರೆ.

ಕ್ರೀಡಾಪಟುಗಳಿಗೆ ಬೆಂಬಲ ಮುಖ್ಯ

ಮತ್ತೊಂದು ಪೋಸ್ಟ್‌ನಲ್ಲಿ "ಫಲಿತಾಂಶವನ್ನು ಲೆಕ್ಕಿಸದೇ ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸುವುದು ಮುಖ್ಯ ಎಂದು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅವರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಅವರು ಆಟಗಳಿಗೆ ತರುವ ಉತ್ಸಾಹವನ್ನು ನಾವೆಲ್ಲರೂ ಮೆಚ್ಚಬೇಕು ಮತ್ತು ಆಚರಿಸಬೇಕು. ನಿಜವಾಗಲೂ ಭಾರತೀಯ ಕ್ರೀಡೆಯ ಅದ್ಭುತ ಸ್ಪೂರ್ತಿಯನ್ನು ಜಗತ್ತಿಗೆ ತೋರಿಸೋಣ" ಎಂದು ಹೇಳಿದ್ದಾರೆ.

ನೀವೂ ಕೂಡ ರಿಷಬ್ ಪಂತ್ ಅವರ ಪೋಸ್ಟ್‌ಗೆ ಲೈಕ್ ಮಾಡಿ, ಕಾಮೆಂಟ್ ಮಾಡುವ ಮೂಲಕ 10 ಲಕ್ಷ ರೂಪಾಯಿ ಹಣ ಗೆಲ್ಲುವ ಅದೃಷ್ಟವನ್ನು ಪರೀಕ್ಷೆ ಮಾಡಬಹುದು. ನೀರಜ್ ಚೋಪ್ರಾ ಏನಾದರೂ ಚಿನ್ನ ಗೆದ್ದರೆ, ಅದು ಭಾರತೀಯರಿಗೆ ಮತ್ತೊಂದು ಹೆಮ್ಮೆಯ ಕ್ಷಣವಾಗಲಿದೆ.

ಜಾವೆಲಿನ್ ಎಸೆತ ಫೈನಲ್ ಯಾವಾಗ?

ಮಂಗಳವಾರ ನಡೆದ ಒಲಿಂಪಿಕ್ಸ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 89.34 ಮೀಟರ್‌ ಎಸೆಯುವ ಮೂಲಕ ಒಂದೇ ಎಸೆತದಿಂದ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಆಗಸ್ಟ್ 8ರಂದು ಭಾರತೀಯ ಕಾಲಮಾನ ರಾತ್ರಿ 11.55 ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

ಮೊದಲ ಎಸೆತದಲ್ಲೇ 84 ಮೀಟರ್ ಗಿಂತ ಹೆಚ್ಚು ದೂರ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದುಕೊಂಡರು. ಚೋಪ್ರಾ ಅವರು ಜೂನ್ 2022 ರಲ್ಲಿ ಸ್ವೀಡನ್‌ನ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.

ಪಂತ್‌ಗೆ ಸಿಕ್ಕಿದೆ ಅವಕಾಶ

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ರಿಷಬ್ ಪಂತ್ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ವಿಫಲವಾಗಿದ್ದರಿಂದ ಮೂರನೇ ಪಂದ್ಯದಲ್ಲಿ ರಿಷಬ್ ಪಂತ್ ಅವರಿಗೆ ಅವಕಾಶ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+