Rishabh Pant: ಹಣಕ್ಕಾಗಿಯೇ ಡೆಲ್ಲಿ ಬಿಟ್ರಾ ಪಂತ್? ಶಾಕಿಂಗ್ ವಿಚಾರ ಬಹಿರಂಗಪಡಿಸಿದ ಕೋಚ್‌

ರಿಷಬ್ ಪಂತ್‌ ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಜೆಡ್ಡಾದಲ್ಲಿ ನಡೆದ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಬ್ ಪಂತ್‌ ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾರಾಟವಾದರು. ಡೆಲ್ಲಿ ಕ್ಯಾಪಿಟಲ್ಸ್ ಪಂತ್‌ರನ್ನು ಆರ್ ಟಿಎಂ ಬಳಸಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದರು, ಎಲ್‌ಎಸ್‌ಜಿ ಬರೋಬ್ಬರಿ 27 ಕೋಟಿ ರೂಪಾಯಿಗೆ ಬಿಡ್‌ ಮೊತ್ತ ಏರಿಕೆ ಮಾಡಿದ್ದರಿಂದ ಡೆಲ್ಲಿ ಹಿಂದೆ ಸರಿಯಿತು.

ರಿಷಬ್‌ ಪಂತ್‌ ಜೊತೆ ಡೆಲ್ಲಿ ಕ್ಯಾಪಿಟಲ್ಸ್ ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಫ್ರಾಂಚೈಸಿ. ಪಂತ್‌ಗೆ ಅಪಘಾತವಾಗಿ 2023ರ ಐಪಿಎಲ್‌ನಲ್ಲಿ ಹೊರಗುಳಿದಿದ್ದ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂತ್‌ರ ಜೆರ್ಸಿಯನ್ನು ಡಗೌಟ್‌ನಲ್ಲಿ ಪ್ರದರ್ಶಿಸಿ ಅಭಿಮಾನ ತೋರಿಸಿತ್ತು. ಗಾಯಗೊಂಡಿದ್ದರು ಪಂತ್ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಮೈದಾನಕ್ಕೆ ಬಂದಿದ್ದರು.

Rishabh pant exit delhi capitals for money ipl 2025

2024ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕನಾಗಿ ಮರಳಿದ್ದರು. ಪಂತ್‌ ನಾಯಕತ್ವ ವಹಿಸಿಕೊಂಡರೂ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. 14 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 7 ಪಂದ್ಯ ಸೋತು 14 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿ ಅಭಿಯಾನ ಮುಗಿಸಿತ್ತು. ಐಪಿಎಲ್ ಮೆಗಾ ಹರಾಜಿಗೆ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಪಂತ್‌ರನ್ನು ರೀಟೇನ್ ಮಾಡಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿತ್ತು. 'ನಾನು ಹರಾಜಿಗೆ ಬಂದರೆ ಯಾವ ಮೊತ್ತಕ್ಕೆ ಹರಾಜಾಗಬಹುದು' ಎಂದು ಪಂತ್‌ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಹಣಕ್ಕಾಗಿ ಅಲ್ಲ ಎಂದಿದ್ದ ಪಂತ್‌

ರಿಟೇನ್ ವಿಚಾರದಲ್ಲಿ ಹಣ ಕಡಿಮೆಯಾಯ್ತು ಎಂದು ಪಂತ್‌ ಡೆಲ್ಲಿ ತೊರೆದರು ಎನ್ನುವ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಂತ್‌ ಇದು ಹಣದ ವಿಚಾರವಲ್ಲ ಎಂದಿದ್ದರು. ಆದರೆ ಈಗ ಡೆಲ್ಲಿ ಕ್ಯಾಪಿಟಲ್ಸ್ ನೂತನ ಕೋಚ್ ಹೇಮಂಗ್‌ ಬದಾನಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸುಬ್ರಮಣ್ಯಂ ಬದರಿನಾಥ್ ಅವರೊಂದಿಗೆ ಮಾತನಾಡುತ್ತಾ, ಪಂತ್‌ ಹರಾಜಿಗೆ ಹೋಗಿ ತಮ್ಮ ಬೆಲೆಯನ್ನು ಪರೀಕ್ಷಿಸಿಕೊಳ್ಳಲು ಬಯಸಿದ್ದರು. ನಾವು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂದರೆ ಫ್ರಾಂಚೈಸಿ ಮತ್ತು ಆಟಗಾರರ ನಡುವೆ ಒಪ್ಪಿಗೆ ಇರಬೇಕು. ನಾವು ಪಂತ್ ಜೊತೆ ಮಾತನಾಡಲು ಪ್ರಯತ್ನಿಸಿದೆವು, ಫ್ರಾಮಚೈಸಿ ಅವರ ಜೊತೆ ಮಾತನಾಡಲು ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಹೇಳಿದರು.

ರಿಟೇನ್ ಮಾಡುವುದಕ್ಕಿಂತ ಹೆಚ್ಚಿನ ಹಣವನ್ನು ಹರಾಜಿನಲ್ಲಿ ಪಡೆಯುವ ವಿಶ್ವಾಸ ಹೊಂದಿದ್ದರು. ಹರಾಜಿನಲ್ಲಿ ಅದು ಸಾಬೀತಾಗಿದೆ, ಅವರು 27 ಕೋಟಿ ರೂಪಾಯಿಗೆ ಹರಾಜಾದರು, ಆತ ಉತ್ತಮ ಆಟಗಾರ, ನಾವು ಆತನನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಜೀವನ ಮುಂದೆ ಸಾಗಬೇಕು ಎಂದು ಹೇಳಿದ್ದಾರೆ.

2016ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿದ ರಿಷಬ್ ಪಂತ್ 2024ರವರೆಗೂ ಅದೇ ತಂಡಕ್ಕಾಗಿ ಆಡಿದರು. 2021ರಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. 8 ವರ್ಷಗಳ ಕಾಲ ತಂಡದ ಜೊತೆ ಅತ್ಯುತ್ತಮ ಒಡನಾಟ ಹೊಂದಿದ್ದರೂ, ಕೊನೆಗೆ ಹಣವೇ ಮುಖ್ಯವಾಯಿತಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+