Richa Ghosh: ಚಿಕ್ಕ ಇನಿಂಗ್ಸ್ ಮೂಲಕ ವಿಶ್ವ ದಾಖಲೆ ಬರೆದ ರಿಚಾ
ಬ್ರಿಸ್ಟಲ್‌ನಲ್ಲಿ ಭಾರತ ವನಿತೆಯರು ಹಾಗೂ ಇಂಗ್ಲೆಂಡ್ ವನಿತೆಯರ ನಡುವಣ ಎರಡನೇ ಟಿ20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪ್ರವಾಸಿ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಈ ಮೂಲಕ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಆಲ್‌ರೌಂಡರ್ ಅಮನ್ಜೋತ್ ಕೌರ್ ಸ್ಥಿರ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಭರವಸೆಯ ಆಟಗಾರ್ತಿ ರಿಚಾ ಘೋಷ ಹೊಸ ವಿಶ್ವದಾಖಲೆ ಬರೆದಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 181 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ವನಿತೆಯರು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಸೇರಿಸಿ ಸೊಲು ಕಂಡಿತು. ಈ ಪಂದ್ಯದಲ್ಲಿ ರಿಚಾ ಘೋಷ್ ಹೊಸ ವಿಶ್ವದಾಖಲೆ ಬರೆದಿದ್ದಾರೆ.

ಎರಡನೇ ಟಿ20 ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಿಚಾ 20 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 32 ರನ್ ಸಿಡಿಸಿದರು. ಇವರ ಈ ಚಿಕ್ಕ ಇನಿಂಗ್ಸ್ ವಿಶ್ವದಾಖಲೆ ಬರೆಯಲು ಸಾಕಾಯಿತು. 21 ವರ್ಷದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಚಾ ಘೋಷ್, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್‌ಗಳನ್ನು ಪೂರ್ಣಗೊಳಿಸಿದರು. ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಪರ ರಿಚಾ ಈ ಸಾಧನೆ ಮಾಡಿದರು. ರಿಚಾ ಕೇವಲ 702 ಎಸೆತಗಳಲ್ಲಿ 1000 ರನ್ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸಿದರು.
ಕಡಿಮೆ ಎಸೆತಗಳಲ್ಲಿ 1000 ರನ್
ಇನ್ನು ಐಸಿಸಿ ಪೂರ್ಣ ಸದಸ್ಯತ್ವ ಅಲ್ಲದ ದೇಶಗಳ ಆಟಗಾರರ ಪಟ್ಟಿಯಲ್ಲೂ ರಿಚಾ 2ನೇ ಸ್ಥಾನದಲ್ಲಿದ್ದಾರೆ. ಐಲ್ ಆಫ್ ಮ್ಯಾನ್‌ನ ಲೂಸಿ ಬಾರ್ನೆಟ್ ಅವರು 700 ಎಸೆತಗಳಲ್ಲಿ ಒಂದು ಸಾವಿರ ರನ್ ಸಿಡಿಸಿದ್ದರು. ಸದಸ್ಯ ರಾಷ್ಟ್ರಗಳ ಪರ ವೇಗವಾಗಿ ಸಾವಿರ ರನ್ ದಾಖಲಿಸಿದ ಕೀರ್ತಿ ರಿಚಾಗೂ ಮೊದಲು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಆಟಗಾರ್ತಿ ಕ್ಲೋಯ್ ಟ್ರೆಯಾನ್ ಹೆಸರಿನಲ್ಲಿತ್ತು. ಇವರು 720 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಇವರು ಟಿ20 ಕ್ರಿಕೆಟ್‌ನಲ್ಲಿ 1 ಸಾವಿರ ರನ್ ಬಾರಿಸಲು 720 ಎಸೆತಗಳನ್ನು ಎದುರಿಸಿದ್ದರು.
ರಿಚಾ ಸಾಧನೆ
ರಿಚಾ ಭಾರತದ ಪರ 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದರು. ಈ ವರೆಗೆ ರಿಚಾ ಒಟ್ಟು 64 ಟಿ20 ಪಂದ್ಯಗಳ 53 ಇನಿಂಗ್ಸ್‌ಗಳಲ್ಲಿ 27.81ರ ಸರಾಸರಿಯಲ್ಲಿ 1029 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಅರ್ಧಶತಕಗಳು ಸೇರಿವೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 37 ಬಾರಿ ಕಣಕ್ಕೆ ಇಳಿದಿರುವ ರಿಚಾ 800 ರನ್ ಸಿಡಿಸಿದ್ದಾರೆ. ಇನ್ನು ಇವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ಮಿಂಚು ಹರಿಸಿದ್ದಾರೆ. ಇವರು ಆರ್‌ಸಿಬಿ ಪರ 26 ಪಂದ್ಯಗಳನ್ನು ಆಡಿದ್ದು, 34.72ರ ಸರಾರಿಯಲ್ಲಿ 625 ರನ್ ಕಲೆ ಹಾಕಿದ್ದಾರೆ.
-
ಸ್ವಾವಲಂಬಿ ಬದುಕಿಗೆ ರಾಮಲಿಂಗಾ ರೆಡ್ಡಿ ಸಾಥ್: ಮಂಗಳಮುಖಿಯರು ಮತ್ತು ಮಹಿಳೆಯರಿಗೆ 20 EV ಆಟೋ ಭಾಗ್ಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications