RCB: 42 ಎಸೆತಗಳಲ್ಲಿ 101 ರನ್ ಗಳಿಸಿ ಎಸ್‌ಎ 20 ಲೀಗ್‌ನಲ್ಲಿ ಅಬ್ಬರಿಸಿದ ಆರ್‌ಸಿಬಿ ಆಲ್‌ರೌಂಡರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳಿಗೆ ಸಂತಸ ಸುದ್ದಿ ಸಿಕ್ಕಿದೆ. ಕಳೆದ ಸೀಸನ್‌ನಲ್ಲಿ ಗಾಯದ ಕಾರಣದಿಂದ ಐಪಿಎಲ್‌ನಿಂದ ಹೊರಗುಳಿದಿದ್ದ ಆರ್ ಸಿಬಿ ಆಲ್‌ರೌಂಡರ್ ಈ ಬಾರಿ ಐಪಿಎಲ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ 20 ಲೀಗ್‌ನಲ್ಲಿ ಆರ್ ಸಿಬಿ ತಂಡದ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಅಬ್ಬರಿಸಿದ್ದಾರೆ. ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡುವ ವಿಲ್ ಜ್ಯಾಕ್ಸ್ ಡರ್ಬನ್ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಶತಕ ಸಿಡಿಸಿದರು.

42 ಎಸೆತಗಳಲ್ಲಿ 8 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ 240.48 ಸ್ಟ್ರೈಕ್‌ರೇಟ್‌ನಲ್ಲಿ 101 ರನ್ ಬಾರಿಸಿದರು. ಅವರ ಭರ್ಜರಿ ಆಟದ ನೆರವಿನಿಂದ ಪ್ರಿಟೋರಿಯಾ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 204 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಡರ್ಬನ್ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 187 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.
ಬೌಲಿಂಗ್‌ನಲ್ಲಿ ಮಿಂಚಿದ ಜ್ಯಾಕ್ಸ್
ಮೊದಲು ಬ್ಯಾಟಿಂಗ್ ಮಾಡಿದಾಗ ಶತಕ ಸಿಡಿಸಿ ಮಿಂಚಿದ್ದ ವಿಲ್ ಜ್ಯಾಕ್ಸ್ ಆ ಬಳಿಕ ಬೌಲಿಂಗ್‌ನಲ್ಲಿ ಮಿಂಚಿದರು. 3 ಓವರ್ ಬೌಲಿಂಗ್ ಮಾಡಿದ ಅವರು ಕೇವಲ 18 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದುಕೊಂಡರು.
ವಿಲ್‌ಜ್ಯಾಕ್ಸ್ ಅವರ ಆಲ್‌ರೌಂಡ್ ಪ್ರದರ್ಶನ ನೋಡಿದ ಆರ್ ಸಿಬಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದ ಅವರು ಬೌಲಿಂಗ್‌ನಲ್ಲಿ ಕೂಡ ಮಿಂಚುತ್ತಾರೆ. ಈಗಾಗಲೇ ಸ್ಫೋಟಕ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ ಆರ್ ಸಿಬಿ ಪಾಳಯದಲ್ಲಿದ್ದು ವಿಲ್ ಜ್ಯಾಕ್ಸ್ ಕೂಡ ಅದೇ ರೀತಿಯ ಆಟಗಾರನಾಗಿದ್ದಾರೆ ಇಬ್ಬರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿ ಅಬ್ಬರಿಸಿದರೆ ಆರ್ ಸಿಬಿ ಗೆಲುವು ಸುಲಭವಾಗಲಿದೆ.
ಐಪಿಎಲ್ 2023 ರ ಹರಾಜಿನಲ್ಲಿ ವಿಲ್ ಅವರನ್ನು ಆರ್ ಸಿಬಿ ಖರೀದಿಸಿತು ಆದರೆ ಅವರು ಇನ್ನೂ ಜರ್ಸಿಯನ್ನು ಧರಿಸಿಲ್ಲ. ಕಳೆದ ವರ್ಷ ಋತುವಿನಲ್ಲಿ ಅವರು ಗಾಯಗೊಂಡು ಐಪಿಎಲ್‌ನಿಂದ ಹೊರಗುಳಿದರು. ಅವರ ಬದಲಾಗಿ ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.
ಇಂಗ್ಲೆಂಡ್ ಬ್ಯಾಟರ್ ವಿಲ್ ಜ್ಯಾಕ್ಸ್ ಈ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಈ ಬಾರಿ ಮಿನಿ ಹರಾಜಿಗೂ ಮುನ್ನ ಬ್ರೇಸ್‌ವೆಲ್ ಅವರನ್ನು ಬಿಡುಗಡೆ ಮಾಡಿದ ಆರ್ ಸಿಬಿ ವಿಲ್ ಜ್ಯಾಕ್ಸ್‌ರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅವರನ್ನು ಕಳೆದ ಐಪಿಎಲ್ ಹರಾಜಿನಲ್ಲಿ 3.2 ಕೋಟಿ ರೂ.ಗೆ ಖರೀದಿ ಮಾಡಲಾಗಿತ್ತು.












Click it and Unblock the Notifications