RCB: ಆರ್‌ಸಿಬಿ ಪರ ಮುಂದಿನ ಪಂದ್ಯದಲ್ಲಿ ಪ್ರಮುಖ ನಾಲ್ವರು ಆಟಗಾರರು ಆಡೋದು ಡೌಟ್‌

IPL 2025 RCB: ಐಪಿಎಲ್‌ 2025ನೇ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದ್ದು, ಪ್ಲೇ ಆಫ್‌ ಭವಿಷ್ಯ ಇನ್ನೂ ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ. ಈಗಾಗಲೇ ಆರ್‌ಸಿಬಿ ಈ ಹಂತವನ್ನು 50% ಪೂರ್ಣಗೊಳಿಸಿದೆ. ಉಳಿದಿರುವ ಮೂರು ಪಂದ್ಯಗಳಲ್ಲಿ ಉತ್ತಮ ರನ್‌ ರೇಟ್‌ ಮೂಲಕ ಗೆದ್ದರೇ ಬಹುತೇಕ ಪ್ಲೇ ಆಫ್‌ ತಲುಪಲಿದೆ. ಆದರೆ ಈ ವೇಳೆಯೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗುವ ಆತಂಕ ಶುರುವಾಗಿದೆ.

ಇದುವರೆಗೂ ಆಡಿರುವ 17 ಸೀಸನಗಳಿಂದಲೂ ಆರ್‌ಸಿಬಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೂ ಅಭಿಮಾನಿಗಳ ಸಂಖ್ಯೆಯೇನು ಕಡಿಮೆ ಆಗಿಲ್ಲ. ಬದಲಾಗಿ ದುಪ್ಪಟ್ಟಾಗುತ್ತಲೇ ಇದ್ದು, ಈ ಬಾರಿ ಅಂದರೆ 2025ರ 18ನೇ ಆವೃತ್ತಿಯಲ್ಲಾದರೂ ಕಪ್‌ ಹೊಡೆದೇ ಹೊಡೆಯುತ್ತದೆ ಎನ್ನುವ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ. ಯಾಕಂದ್ರೆ ಈ ಬಾರಿ ಬ್ಯಾಟಿಂಗ್‌, ಬೌಲಿಂಗ್‌ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ.

RCB s These Four Players Are Unlikely to Play in Next Match

ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳು ಹೊಂದಿರುವ ತಂಡ ಅಂದ್ರೆ, ಅದು ಆರ್‌ಸಿಬಿ ಮಾತ್ರ. ಕಪ್‌ ಗೆಲ್ಲದಿದ್ದರೂ ಅಷ್ಟರ ಮಟ್ಟಿಗೆ ಅಭಿಮಾನಿಗಳು ಈ ತಂಡವನ್ನು ನೆಚ್ಚಿಕೊಂಡುಬಿಟ್ಟಿದ್ದಾರೆ. ಅದರಲ್ಲೂ ಈ ಸೀಸನ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು, ಪ್ಲೇ ಹಂತ ಪ್ರವೇಶಿಸುವ ತವಕದಲ್ಲಿದೆ.

ಇನ್ನೊಂದು ಪಂದ್ಯ ಗೆದ್ದರೆ ಬಹುತೇಕ ಆರ್‌ಸಿಬಿಗೆ ಪ್ಲೇ ಆಫ್‌ ಪ್ರವೇಶದ ದಾರಿಯೂ ಸುಲಭ ಆದಂತಾಗಲಿದೆ. ಆದರೆ, ಈ ನಡುವೆಯೇ ನಾಲ್ಕು ಸ್ಫೋಟಕ ಆಟಗಾರರು ಅಲಭ್ಯವಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದ್ರೆ ಯಾರು ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಒಬ್ಬರು ಕೈಕೊಟ್ಟರೆ ಮತ್ತೊಬ್ಬರು ಕೈಹಿಡಿಯುವ ಆಟಗಾರರನ್ನು ಹೊಂದಿರುವ ತಂಡ ಆರ್‌ಸಿಬಿ ಮಾತ್ರ. ಆದರೆ, ಇದೀಗ ನಾಲ್ವರು ಆಡುವುದು ಡೌಟ್‌ ಎನ್ನಲಾಗುತ್ತಿದ್ದು, ಇದರಿಂದ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ತಂಡಕ್ಕೆ ಆಘಾತ ಎದುರಾಗಿದೆ.

ಆರ್‌ಸಿಬಿ ತಂಡದ ಪ್ರಮುಖ ನಾಲ್ಕು ಆಟಗಾರರು ಗಾಯದಿಂದ ಬಳಲುತ್ತಿದ್ದು, ಮುಂದಿನ ಪಂದ್ಯಗಳನ್ನು ಆಡುವುದು ಅನುಮಾನ ಎನ್ನಲಾಗುತ್ತಿದೆ. ನಾಯಕ ರಜತ್ ಪಾಟಿದಾರ್, ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್, ಮಾರಕ ಬೌಲಿಲಿಂಗ್‌ ದಾಳಿಯ ಜೋಶ್ ಹೇಜಲ್‌ವುಡ್ ಹಾಗೂ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಇವರು ಉತ್ತಮ ಫಾರ್ಮ್‌ನಲ್ಲಿದ್ದು, ಹೊರಗುಳಿದರೆ ಮುಂದಿನ ಪಂದ್ಯಕ್ಕೆ ತಂಡಕ್ಕೆ ಆಸರೆ ಯಾರು ಎನ್ನುವ ಆತಂಕ ಶುರುವಾಗಿದೆ.

ಇತ್ತೀಚೆಗಷ್ಟೇ ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ನಾಯಕ ರಜತ್ ಪಟಿದಾರ್ ಬೆರಳಿಗೆ ಗಾಯ ಆಗಿತ್ತು. ಆದ್ದರಿಂದ ಅವರು ಮುಂದಿನ ಪಂದ್ಯ ಅಂದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡುವುದು ಅನುಮಾನ ಎನ್ನಲಾಗುತ್ತಿದೆ. ಇನ್ನು ಉತ್ತಮ ಫಾರ್ಮ್‌ನಲ್ಲಿ ಇರುವ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಜ್ವರದಿಂದಾಗಿ ಕಳೆದೆರಡು ಪಂದ್ಯಗಳಿಂದ ದೂರ ಉಳಿದಿದ್ದಾರೆ. ಇನ್ನೂ ಕೂಡ ಅವರು ಜ್ವರದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಅವರು ಮುಂದಿನ ಪಂದ್ಯದಲ್ಲೂ ಆಡುವುದು ಡೌಟ್‌ ಎನ್ನಲಾಗುತ್ತಿದೆ. ಇವರ ಸ್ಥಾನ ತುಂಬಲು ಮತ್ತೊಬ್ಬ ದಾಂಡಿಗ ಈಗಾಗಲೇ ಸಜ್ಜಾಗಿದ್ದಾರೆ.

Take a Poll

ಆದರೂ ಅನುಭವಿ ಆಟಗಾರ ಫಿಲ್‌ ಸಾಲ್ಟ್‌ ಮುಂದಿನ ಪಂದ್ಯ ಆಡಿದ್ದರೆ ಚೆನ್ನಗಿರುತ್ತಿತ್ತು ಎನ್ನುವುದು ಅಭಿಮಾನಿಗಳ ಆಸೆಯಾಗಿದೆ. ಕಳೆದ ಪಂದ್ಯ ಸಿಎಸ್‌ಕೆ ವಿರುದ್ಧ ಅವರ ಸ್ಥಾನದಲ್ಲಿ ಜಾಕೋಬ್ ಬೆಥೆಲ್ ಅವರನ್ನು ಆಡಿಸಲಾಗಿದ್ದು, ಅವರು ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದ್ದರಿಂದ ಫಿಲ್‌ ಸಾಲ್ಟ್‌ ಸ್ಥಾನ ತುಂಬಲು ಇವರಿದ್ದರೇ ಸಾಕು ಅಂತಲೂ ಹೇಳುತ್ತಿದ್ದಾರೆ.

ಮಾರಕ ವೇಗಿ ಜೋಶ್ ಹೇಜಲ್‌ವುಡ್ ಭುಜದ ಗಾಯ ಹಿನ್ನೆಲೆ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆಡಲು ಸಾಧ್ಯ ಆಗಲಿಲ್ಲ. ಮುಂದಿನ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಅಲ್ಲದೆ, ಸಿಎಸ್‌ಕೆ ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸಿದ್ದ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಸಹ ವೆಸ್ಟ್‌ಇಂಡಿಸ್‌ ನಡುವಿನ ಪಂದ್ಯಕ್ಕಾಗಿ ಈ ಸೀಸನ್​ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಈ ನಾಲ್ವರು ಆಟಗಾರರು ಅಲಭ್ಯವಾದರೆ, ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಹೊಡೆಯ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ನೋಡೋದಾದ್ರೆ ಆರ್‌ಸಿಬಿಯಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಎರಡು ವಿಭಾಗದಲ್ಲೂ ಕೊರತೆ ನೀಗಿಸುವ ಆಟಗಾರರು ಇದ್ದಾರೆ. ಆದರೂ, ಒಟ್ಟಿನಲ್ಲಿ ತಂಡದಲ್ಲಿ ಅನುಭವಿ ಆಟಗಾರು ಇರಬೇಕೆನ್ನುವುದೇ ಅಭಿಮಾನಿಗಳ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+