RCB Lucky Man: ಇವರು ಬಂದ ಮೇಲೆ ಆರ್‌ಸಿಬಿ ತಂಡದ ಲಕ್‌ ಬದಲಾಯಿತು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿತ್ತು. ಗೆಲುವಿನ ಆಸೆ ಮರೀಚಿಕೆ ಆಗಿತ್ತು. ಆದರೆ ಮಾಡು ಇಲ್ಲವೇ ಮಡಿ ಪಂದ್ಯಗಳಲ್ಲಿ ಆರ್‌ಸಿಬಿ ಆಡುತ್ತಿರುವ ರೀತಿ ಅಭಿಮಾನಿಗಳಲ್ಲಿ ಹೊಸ ಜೋಶ್‌ ತುಂಬಿದೆ. ಅಲ್ಲದೆ ಪ್ರಸಕ್ತ ಟೂರ್ನಿಯ ಪ್ಲೇ ಆಫ್‌ ಪ್ರವೇಶಿಸುವ ಆಸೆಯನ್ನು ಹೆಚ್ಚಿಸಿದೆ.

ಆರ್‌ಸಿಬಿ ಐಪಿಎಲ್‌ನ ಆರಂಭಿಕ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ, ಇನ್ನೊಂದು ಗೆಲುವಿನ ನಗೆ ಬೀರಲು, ಸರಿಯಾ ಮುವತ್ತು ದಿನಗಳನ್ನು ತೆಗೆದುಕೊಂಡಿತು. ಈ ವೇಳೆ ತಂಡದಲ್ಲಿ ದೊಡ್ಡ ಬದಲಾವಣೆಗಳು ಏನು ಕಾಣಿಸಿಕೊಳ್ಳಲಿಲ್ಲ. ಆದರೆ 8 ಪಂದ್ಯಗಳ ಬಳಿಕ ಆರ್‌ಸಿಬಿ ಒಬ್ಬ ಸ್ಪಿನ್‌ ಬೌಲರ್‌ಗೆ ಅವಕಾಶ ನೀಡಿತು. ಇಲ್ಲಿಂದೆ ತಂಡದ ಲಕ್‌ ಬದಲಾಯಿತು ಎಂದರೆ ತಪ್ಪಾಗಲಾರದು.

RCB s Luck Changes with Arrival of Lucky Charm

ಆರ್‌ಸಿಬಿ ಲಕ್‌ ಬದಲಿಸಿದ ಆಟಗಾರ

ಆರಂಭಿಕ ಪಂದ್ಯಗಳಲ್ಲಿ ಆರ್‌ಸಿಬಿ ಸೋಲಿಗೂ ಈ ಒಂದು ಕಾರಣ ಪ್ರಧಾನವಾಗಿತ್ತು. ಅದುವೇ ಮಿಡ್ಲ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ಯಾರು ಎಂಬುದು. ಆರ್‌ಸಿಬಿ ತಂಡದಲ್ಲಿ ನುರಿತ ಸ್ಪಿನ್ ಬೌಲರ್‌ಗಳ ಕೊರತೆ ಎದ್ದು ಕಾಣುತ್ತಿತ್ತು. ಈ ಸ್ಥಾನದಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌ ಹಾಗೂ ಕರನ್‌ ಶರ್ಮಾ ಬೌಲ್‌ ಮಾಡಿದರು. ಆದರೆ ಲಕ್‌ ಬದಲಾಗಲಿಲ್ಲ. ಒಂಬತ್ತನೇ ಪಂದ್ಯದಲ್ಲಿ ಆರ್‌ಸಿಬಿ ದೇಶೀಯ ಸ್ಪಿನ್‌ ಬೌಲರ್‌ಗೆ ಅವಕಾಶ ನೀಡಿ ಯಶ ಕಂಡಿತು. ಇವರೇ ಉತ್ತರಾಖಂಡ ಮೂಲದ ಆಟಗಾರ ಸ್ವಪ್ನಿಲ್‌ ಸಿಂಗ್‌..

ಎಡಗೈ ಸ್ಪಿನ್ ಬೌಲರ್‌

ಸ್ವಪ್ನಿಲ್‌ ಸಿಂಗ್‌ ಅಪಾಯಕಾರಿ ಸ್ಪಿನ್ ಬೌಲರ್‌ ಏನು ಅಲ್ಲ. ಆದರೆ ಎದುರಾಳಿ ಬ್ಯಾಟರ್‌ಗಳನ್ನು ಕಾಡ ಬಲ್ಲ ಸ್ಪಿನ್‌ ಬೌಲರ್‌. ಇವರು ಪವರ್‌ ಪ್ಲೇ, ಮಿಡ್ಲ್‌ ಓವರ್‌ ಹಾಗೂ ಡೆತ್‌ ಓವರ್‌ಗಳಲ್ಲಿ ದಾಳಿ ಸಂಘಟಿಸಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಇವರು ಆರ್‌ಸಿಬಿ ಈ ಟೂರ್ನಿಯಲ್ಲಿ ಆಡಿದ 9ನೇ ಪಂದ್ಯದಲ್ಲಿ ತಂಡದಲ್ಲಿ ಆಡುವ ಅವಕಾಶವನ್ನು ಪಡೆದರು. ಅಲ್ಲಿಂದ ಇವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

RCB s Luck Changes with Arrival of Lucky Charm

ಐಪಿಎಲ್‌ 2024ರಲ್ಲಿ ಸ್ವಪ್ನಿಲ್ ಸಿಂಗ್‌ ಆರ್‌ಸಿಬಿ ಪರ ಆಡಿದ 4 ಪಂದ್ಯಗಳಲ್ಲಿ 5 ವಿಕೆಟ್‌ ಕಬಳಿಸಿದ್ದಾರೆ. ಈ ವೇಳೆ ಇವರ ಏಕಾನಮಿ 9.20 ಆಗಿದೆ. ಇವರು ತಮ್ಮ ಎಡಗೈ ಸ್ಪಿನ್ ಬೌಲಿಂಗ್‌ನಿಂದಲೇ ಎದುರಾಳಿಗಳಿಗೆ ಕಾಟ ನೀಡಿದ್ದಾರೆ.

ಐಪಿಎಲ್‌ ಅನುಭವ

ಸ್ವಪ್ನಿಲ್ ಸಿಂಗ್ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಜನಿಸಿ ಪ್ಲೇಯರ್‌.. ಸ್ವಪ್ನಿಲ್ 2016 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಕೇವಲ 8 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. 2016 ರಲ್ಲಿ, ಪಂಜಾಬ್ ಕಿಂಗ್ಸ್ ಅವರಿಗೆ ಕೇವಲ 2 ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿತ್ತು.

RCB s Luck Changes with Arrival of Lucky Charm

ಇವರು ಬೌಲ್‌ ನಿಂದ ತಂಡದಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇದರ ನಂತರ, ಅವರು 2023 ರ ಋತುವಿನಲ್ಲಿ ಲಕ್ನೋ ಸೂಪರ್ಜೈಂಟ್ಸ್‌ ಸೇರಿದರು ಆದರೆ ಇಲ್ಲಿಯೂ ಅವರು ತಮ್ಮ ಛಾಪು ಬಿಡಲು ಸಾಧ್ಯವಾಗಲಿಲ್ಲ.

ಸ್ವಪ್ನಿಲ್‌ ಕೇವಲ 15 ವರ್ಷದವರಾಗಿದ್ದಾಗ, ಬರೋಡಾ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು 2007 ರಲ್ಲಿ T20 ಮತ್ತು 2008 ರಲ್ಲಿ ಲಿಸ್ಟ್ A ಗೆ ಪದಾರ್ಪಣೆ ಮಾಡಿದರು. 2008 ರಲ್ಲಿ, ಅವರು 19 ವರ್ಷದೊಳಗಿನವರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಂಚಿತರಾದರು. ಪಿಎಲ್‌ನ ಮೊದಲ ಸೀಸನ್‌ನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು ಆದರೆ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.

ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಸ್ವಪ್ನಿಲ್‌ ಸಿಂಗ್‌ ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಈ ಪಂದ್ಯದಲ್ಲೂ ಸ್ವಪ್ನಿಲ್‌ ಮೊದಲ ಓವರ್‌ ಇವರೇ ಬೌಲ್‌ ಮಾಡಿದರು. ಈ ಓವರ್‌ನ ಎರಡನೇ ಎಸೆತದಲ್ಲೇ ಸಿಕ್ಸರ್‌ ನೀಡಿದರು. ಮೂರನೇ ಎಸೆತದಲ್ಲಿ ಒಂದು ರನ್‌ ನೀಡಿದರು. ನಾಲ್ಕನೇ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಭರವಸೆಯ ಆಟಗಾರ ಡೇವಿಡ್‌ ವಾರ್ನರ್‌ ಅವರಿಗೆ ಖೆಡ್ಡಾ ತೋಡಿದರು. ಔಟ್‌ ಸೈಡ್‌ ಆಫ್‌ ಸ್ಟಂಪ್‌ ಎಸೆತವನ್ನು ವಾರ್ನರ್‌ ಲಾಂಗ್‌ ಆನ್‌ ಮೇಲಿನಿಂದ ಸಿಕ್ಸರ್‌ ಬಾರಿಸಲು ಮುಂದಾಗಿ, ವಿಲ್‌ ಜಾಕ್ಸ್‌ಗೆ ಕ್ಯಾಚ್‌ ನೀಡಿದರು. ಮಾಡಿದ ಒಂದು ಓವರ್‌ನಲ್ಲಿ 9 ರನ್ ನೀಡಿ ಒಂದು ವಿಕೆಟ್‌ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+