Glenn Maxwell: ಎಸ್ಆರ್‌ಎಚ್ ವಿರುದ್ಧ ಗ್ಲೇನ್‌ ಮ್ಯಾಕ್ಸ್‌ವೆಲ್‌ ಆಡದಿರಲು ಕಾರಣವೇನು?

ಸೋಮವಾರ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವಿರುದ್ಧ ಸೋಲು ಕಂಡಿತು. ಈ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಏಕೆ ಆಡಲಿಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಎತ್ತಿದ್ದರು. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಆರ್‌ಸಿಬಿ ತಂಡದ ಸ್ಟಾರ್‌ ಆಲ್‌ರೌಂಡರ್ ಗ್ಲೇನ್‌ ಮ್ಯಾಕ್ಸ್‌ವೆಲ್‌ ಈ ಪಂದ್ಯದಿಂದ ಹೊರಗುಳಿಯುವ ನಿರ್ಧಾರವನ್ನು ಮಾಡಿದ್ದಾಗಿ ತಿಳಿದು ಬಂದಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ತನ್ನ ಜಾಗದಲ್ಲಿ ಬೇರೊಬ್ಬರನ್ನು ಆಯ್ಕೆ ಮಾಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮ್ಯಾನೇಜ್‌ಮೆಂಟ್‌ಗೆ ಮ್ಯಾಕ್ಸ್‌ವೆಲ್‌ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ರಿಫ್ರೆಶ್ ಮಾಡಲು ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಐಪಿಎಲ್ 2024ರಲ್ಲಿ ಮ್ಯಾಕ್ಸ್‌ವೆಲ್ ರನ್‌ಗಾಗಿ ಪರದಾಡುತ್ತಿದ್ದರು. ಹೆಬ್ಬೆರಳಿನ ಗಾಯದಿಂದಾಗಿ ಅವರು ಹೊರಗೆ ಕುಳಿತಿರಬಹುದು ಎಂಬ ಊಹಿಸಲಾಗಿತ್ತು. ಆದರೆ ಅದು ಹಾಗೆ ಆಗಿರಲಿಲ್ಲ.

RCB s Glenn Maxwell Takes a Pause from IPL 2024 Amidst Form Concerns

ಪಂದ್ಯದಿಂದ ಹಿಂದೆ ಸರಿಯಲು ಕಾರಣವೇನು

ಮಾನಸಿಕ ಮತ್ತು ದೈಹಿಕ ಆಯಾಸದಿಂದಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ವಿರಾಮ ತೆಗೆದುಕೊಂಡಿದ್ದಾರೆ. ಹೈದರಾಬಾದ್ ವಿರುದ್ಧ RCB ನ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಪ್ಲೇಯಿಂಗ್-11 ರ ಭಾಗವಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ, ಮ್ಯಾಕ್ಸ್‌ವೆಲ್ ಅವರು ಸ್ವತಃ ಹೊರಗೆ ಉಳಿಯಲು ಕೇಳಿಕೊಂಡಿದ್ದರು ಎಂದು ಹೇಳಿದರು. ಏಕೆಂದರೆ ಅವರು ತಂಡಕ್ಕೆ ಯಾವುದೇ ಕೊಡುಗೆ ನೀಡುತ್ತಿಲ್ಲ ಎಂದು ತಿಳಿಸಿ ಪ್ಲೇಯಿಂಗ್ ಇಲೆವೆನ್‌ ನಿಂದ ದೂರ ಸರಿದಿದ್ದರು.

'ಮೊದಲ ಕೆಲವು ಪಂದ್ಯಗಳು ವೈಯಕ್ತಿಕವಾಗಿ ನನಗೆ ನಿರಾಸೆ ತಂದಿದೆ. ಇದು ತುಂಬಾ ಸುಲಭವಾದ ನಿರ್ಧಾರವಾಗಿತ್ತು. ನಾನು ಕಳೆದ ಪಂದ್ಯದಲ್ಲಿ ನಾಯಕ ಫಾಫ್‌ ಮತ್ತು ತಂಡದ ತರಬೇತುದಾರರ ಬಳಿಗೆ ಹೋಗಿ ನನ್ನ ನಿರ್ಧಾರವನ್ನು ತಿಳಿಸಿದ್ದೆ. ಅಲ್ಲದೆ ಬೇರೆಯವರನ್ನು ಪ್ರಯತ್ನಿಸುವ ಸಮಯ ಬಂದಿದೆ ಎಂದು ಹೇಳಿದೆ. ಮಾನಸಿಕ ಮತ್ತು ದೈಹಿಕ ವಿಶ್ರಾಂತಿಯನ್ನು ನೀಡಲು ಇದೀಗ ಉತ್ತಮ ಸಮಯ ಎಂದು ಮ್ಯಾಕ್‌ವೆಲ್‌ ತಿಳಿಸಿದ್ದಾರೆ.

RCB s Glenn Maxwell Takes a Pause from IPL 2024 Amidst Form Concerns

ಐಪಿಎಲ್ 2024 ರಲ್ಲಿ ಇದುವರೆಗೆ ಆಡಿದ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಪ್ರದರ್ಶನ ಉತ್ತಮವಾಗಿರಲಿಲ್ಲ. ಅವರು ಈ ಋತುವಿನಲ್ಲಿ ಆಡಿದ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 32 ರನ್ ಗಳಿಸಿದರು, ಅದರಲ್ಲಿ ಅವರು ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಆದಾಗ್ಯೂ, ಅವರು ಐಪಿಎಲ್‌ಗೆ ಬರುವ ಮೊದಲು ಭರ್ಜರಿ ಫಾರ್ಮ್‌ನಲ್ಲಿದ್ದರು. ಕಳೆದ ವರ್ಷ ನವೆಂಬರ್‌ನಿಂದ ಐಪಿಎಲ್ ಆರಂಭದವರೆಗೆ ಆಡಿದ 17 ಟಿ20 ಪಂದ್ಯಗಳಲ್ಲಿ 42.46 ಸರಾಸರಿ ಮತ್ತು 185.85 ಸ್ಟ್ರೈಕ್ ರೇಟ್‌ನಲ್ಲಿ 552 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರು ಎರಡು ಶತಕಗಳನ್ನು ಸಹ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಹೀಗೆ ಆಡಬಹುದು ಎಂದು ಅಭಿಮಾನಿಗಳು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಆರಂಭದಲ್ಲಿ ಫ್ಯಾನ್ಸ್‌ ಆಸೆಗೆ ಪೆಟ್ಟು ಬಿದ್ದಿದ್ದಂತೂ ಸುಳ್ಳಲ್ಲ. ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡದೆ ತಂಡದ ಚಿಂತೆಯನ್ನು ಹೆಚ್ಚಿಸಿದ್ದಾರೆ. ಮುಂಬರುವ ಪಂದ್ಯಗಳಲ್ಲಾದ್ರೂ ಅಬ್ಬರದ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಶ್ರಮಿಸಲಿ ಎಂಬುದೇ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+