WPL 2024: ಡೆಲ್ಲಿ ವಿರುದ್ಧ ರೋಚಕ ಸೋಲು! ಆರ್‌ಸಿಬಿ ಫೈನಲ್‌ ಲೆಕ್ಕಾಚಾರ ಹೇಗಿದೆ?

ಮಹಿಳಾ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಆರಂಭ ಪಡೆದುಕೊಂಡಿದ್ದ ಆರ್ ಸಿಬಿ ನಂತರ ಎಡವಿತು, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಮಂಧಾನ ಪಡೆ, ಬಳಿಕ ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೋಲು ಕಂಡಿತ್ತು.

ದೆಹಲಿಗೆ ಮಹಿಳಾ ಪ್ರೀಮಿಯರ್ ಲೀಗ್ ಶಿಫ್ಟ್ ಆದ ಬಳಿಕ ಆರ್ ಸಿಬಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿದೆ. ಗುಜರಾತ್ ಜೈಂಟ್ಸ್ ವಿರುದ್ಧ ಸೋತ ಬಳಿಕ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಒಂದು ರನ್‌ಗಳ ರೋಚಕ ಸೋಲು ಕಂಡಿದೆ. ಡೆಲ್ಲಿ ವಿರುದ್ಧ ಆರ್ ಸಿಬಿ ಗೆದ್ದಿದ್ದರೆ ನೇರವಾಗಿ ಫೈನಲ್ ತಲುಪಲು ಒಂದು ಅವಕಾಶ ಇತ್ತು.

RCB s Chances of Qualifying for Eliminator After Narrow Defeat to Delhi Capitals in WPL 2024

ಮಹಿಳಾ ಪ್ರೀಮಿಯರ್ ಲೀಗ್‌ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಅದರಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಮೊದಲ ಎರಡು ಸ್ಥಾನಗಳನ್ನು ಖಚಿತಪಡಿಸಿಕೊಂಡಿವೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಎರಡೂ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಮೂರನೇ ಸ್ಥಾನಕ್ಕಾಗಿ ಈಗ ಆರ್ ಸಿಬಿ ಮತ್ತು ಯುಪಿ ವಾರಿಯರ್ಸ್ ನಡುವೆ ಪೈಪೋಟಿ ಶುರುವಾಗಿದೆ.

ಅಂಕಪಟ್ಟಿ ಹೇಗಿದೆ

ಡೆಲ್ಲಿ ಮತ್ತು ಮುಂಬೈ ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದ್ದು 10 ಅಂಕಗಳನ್ನು ಹೊಂದಿವೆ. ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ರನ್‌ ರೇಟ್ ಹೊಂದಿದ್ದು ಮೊದಲ ಸ್ಥಾನಲ್ಲಿದೆ. ಆರ್ ಸಿಬಿ ಮತ್ತು ಯುಪಿ ವಾರಿಯರ್ಸ್ 7 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿದ್ದು 6 ಅಂಕಗಳನ್ನು ಪಡೆದಿವೆ, ಆದರೆ ಆರ್ ಸಿಬಿ ಉತ್ತಮ ರನ್ ರೇಟ್ ಹೊಂದಿರುವ ಕಾರಣ ಸದ್ಯ ಮೂರನೇ ಸ್ಥಾನದಲ್ಲಿದೆ.

ಆರ್ ಸಿಬಿ ಫೈನಲ್ ಲೆಕ್ಕಾಚಾರ ಹೇಗಿದೆ

ಡೆಲ್ಲಿ ವಿರುದ್ಧ ಸೋತ ಬಳಿಕ ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಅಲ್ಲಿ ಉತ್ತಮ ರನ್‌ಗಳ ಅಂತರದಲ್ಲಿ ಗೆದ್ದರೆ ಮಂಧಾನ ಪಡೆಗೆ ಮುಂದಿನ ಹಂತ ಪ್ರವೇಶಿಸುವುದು ಸುಲಭವಾಗಲಿದೆ.

ಇಂದು (ಸೋಮವಾರ) ಯುಪಿ ವಾರಿಯರ್ಸ್ ಗುಜರಾತ್ ಜೈಂಟ್ಸ್ ವಿರುದ್ಧ ಸೆಣೆಸಲಿದೆ. ಇಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಸೋತರೆ ಆರ್ ಸಿಬಿ ಮುಂಬೈ ವಿರುದ್ಧ ಕಡಿಮೆ ರನ್ ಅಂತರದಲ್ಲಿ ಸೋತರೆ ರನ್‌ ರೇಟ್ ಲೆಕ್ಕಾಚಾರದಲ್ಲಿ ಮುಂದಿನ ಹಂತಕ್ಕೇರುವ ಅವಕಾಶ ಇದೆ.

ಗುಜರಾತ್ ಜೈಂಟ್ಸ್ ಇನ್ನೂ ಎರಡು ಪಂದ್ಯಗಳನ್ನು ಆಡಬೇಕಿದ್ದು ಎರಡೂ ಪಂದ್ಯಗಳಲ್ಲಿ ಭಾರಿ ಅಂತರದಲ್ಲಿ ಗೆದ್ದರೆ, ಎಲಿಮೇಟರ್ ಪಂದ್ಯ ಆಡಲು ಅವಕಾಶ ಪಡೆಯಲಿದೆ. ಆದರೆ ಆರ್ ಸಿಬಿ, ಯುಪಿ ವಾರಿಯರ್ಸ್ ಮುಂದಿನ ಪಂದ್ಯಗಳಲ್ಲಿ ಸೋತರೆ ಮಾತ್ರ ಅದಕ್ಕೆ ಅವಕಾಶ ಇರಲಿದೆ.

ಒಂದು ವೇಳೆ ಇಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಏನಾದರೂ ಗುಜರಾತ್ ವಿರುದ್ಧ ಗೆದ್ದರೆ, ಆರ್ ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+