RCB WPL 2027: ಆರ್‌ಸಿಬಿ ಉಳಿಸಿಕೊಂಡ ಆಟಗಾರ್ತಿಯರು.. ಶ್ರೇಯಾಂಕಾ ಪಾಟೀಲ್, ಸ್ಮೃತಿ ಸೇರಿ ಯಾರೆಲ್ಲಾ ಇದ್ದಾರೆ?
RCB WPL 2027: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್ 2027) ಮುಂಬರುವ ಆವೃತ್ತಿಗಾಗಿ ಆರ್‌ಸಿಬಿ ತಂಡವನ್ನು ಬಲಿಷ್ಠಗೊಳಿಸುವತ್ತ ಚಿತ್ತ ನೆಟ್ಟಿದೆ. ಇದೀಗ ಮಿನಿ ಹರಾಜಿಗೂ ಮುನ್ನ ನಾಲ್ವರನ್ನು ಕೈಬಿಟ್ಟಿದ್ದು, 13 ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಫ್ರಾಂಚೈಸಿಯು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಹಾಗೂ ಮರುಸಂಘಟಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮುಂಬರುವ ಮಿನಿ ಹರಾಜಿಗೂ ಮುನ್ನ ರಿಟೇನ್ ಮಾಡಿಕೊಂಡಿರುವ ಹಾಗೂ ರಿಲೀಸ್ ಮಾಡಿದ ಆಟಗಾರ್ತಿಯರ ಅಧಿಕೃತ ಪಟ್ಟಿಯನ್ನು ಆರ್‌ಸಿಬಿ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ.

ಬಲಿಷ್ಠ ತಂಡ ಹೊಂದಿರುವ ಆರ್‌ಸಿಬಿ
ಕಳೆದ ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಅನುಭವಿ ಮತ್ತು ಯುವ ಆಟಗಾರ್ತಿಯರನ್ನೊಳಗೊಂಡ ಬಲಿಷ್ಠ ಪಡೆಯನ್ನೇ ಆರ್‌ಸಿಬಿ ತನ್ನಲ್ಲಿ ಉಳಿಸಿಕೊಂಡಿದೆ. ಕೆಲ ಅಗತ್ಯ ಬದಲಾವಣೆಗಳನ್ನು ತರಲು ಮತ್ತು ಹರಾಜಿನಲ್ಲಿ ಹೊಸ ತಂತ್ರಗಾರಿಕೆ ರೂಪಿಸಲು ನಾಲ್ವರು ಆಟಗಾರ್ತಿಯರನ್ನು ತಂಡದಿಂದ ಕೈಬಿಡಲಾಗಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಗೇಸ್ ಹ್ಯಾರಿಸ್ ಹಾಗೂ ಇಂಗ್ಲೆಂಡ್‌ನ ಲಿನ್ಸೆ ಸ್ಮಿತ್ ಅವರಂತಹ ಪ್ರಮುಖ ವಿದೇಶಿ ಆಟಗಾರ್ತಿಯರ ಜೊತೆಗೆ, ದೇಶೀಯ ಕ್ರಿಕೆಟ್‌ನ ಡಿ. ಹೇಮಲತಾ ಮತ್ತು ಗೌತಮಿ ನಾಯಕ್ ಅವರನ್ನು ಬಿಡುಗಡೆಗೊಳಿಸಲಾಗಿದೆ.
ತಂಡದಿಂದ ಯಾರನ್ನ ಕೈಬಿಡಲಾಗಿದೆ?
* ಗೇಸ್ ಹ್ಯಾರಿಸ್
* ಲಿನ್ಸೆ ಸ್ಮಿತ್
* ಡಿ. ಹೇಮಲತಾ
* ಗೌತಮಿ ನಾಯಕ್
ತಂಡದ ನಾಯಕಿ ಸ್ಮೃತಿ ಮಂಧನಾ ಅವರ ನಾಯಕತ್ವದ ಮೇಲೆ ಮತ್ತೊಮ್ಮೆ ಭರವಸೆ ಇಟ್ಟಿರುವ ಆರ್‌ಸಿಬಿ, ಜಾಗತಿಕ ಕ್ರಿಕೆಟ್‌ನ ದಿಗ್ಗಜ ಆಲ್‌ರೌಂಡರ್ ಎಲಿಸ್ ಪೆರ್ರಿ ಅವರನ್ನು ಉಳಿಸಿಕೊಂಡಿದೆ. ಅಷ್ಟೇ ಅಲ್ಲದೆ, ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬುವ ಹಲವು ಪ್ರಮುಖ ಆಟಗಾರ್ತಿಯರನ್ನು ನಿರಂತರವಾಗಿ ಬೆಂಬಲಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಆರ್‌ಸಿಬಿ ಉಳಿಸಿಕೊಂಡಿರುವ ಪ್ರಮುಖ ಆಟಗಾರ್ತಿಯರ ಪಟ್ಟಿ
* ಸ್ಮೃತಿ ಮಂಧನಾ (ನಾಯಕಿ ಹಾಗೂ ಆರಂಭಿಕ ಬ್ಯಾಟರ್)
* ಎಲಿಸ್ ಪೆರ್ರಿ (ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್)
* ರಿಚಾ ಘೋಷ್ (ವಿಕೆಟ್ ಕೀಪರ್, ಬ್ಯಾಟರ್)
* ಶ್ರೇಯಾಂಕಾ ಪಾಟೀಲ್
* ರಾಧಾ ಯಾದವ್
* ಪೂಜಾ ವಸ್ತ್ರಾಕರ್
* ಅರುಂಧತಿ ರೆಡ್ಡಿ
* ನಾಡಿನ್ ಡಿ ಕ್ಲರ್ಕ್ (ದಕ್ಷಿಣ ಆಫ್ರಿಕಾದ ಆಲ್‌ರೌಂಡರ್)
* ಲಾರೆನ್ ಬೆಲ್ (ಇಂಗ್ಲೆಂಡ್‌ನ ವೇಗಿ)
* ಜಾರ್ಜಿಯಾ ವೋಲ್ (ಆಸ್ಟ್ರೇಲಿಯಾದ ಯುವ ಬ್ಯಾಟರ್)
* ಪ್ರತ್ಯೂಷಾ ಕುಮಾರ್
* ಪ್ರೇಮಾ ರಾವತ್
* ಸಾಯಲಿ ಸತ್ಘರೆ
ಹರಾಜಿಗೆ ಲಭ್ಯವಿರುವ ಸ್ಲಾಟ್‌ಗಳು ಮತ್ತು ಉಳಿದಿರುವ ಮತ್ತು
ಹಾಲಿ ಆಟಗಾರ್ತಿಯರನ್ನು ಉಳಿಸಿಕೊಂಡ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮುಂಬರುವ ಹರಾಜಿಗಾಗಿ ಒಟ್ಟು 5 ಖಾಲಿ ಸ್ಲಾಟ್‌ಗಳು ಲಭ್ಯವಿವೆ. ಇವುಗಳಲ್ಲಿ 2 ವಿದೇಶಿ ಆಟಗಾರ್ತಿಯರನ್ನು ಖರೀದಿಸಲು ಆರ್‌ಸಿಬಿಗೆ ಅವಕಾಶವಿದೆ.
ಹೊಸ ಆಟಗಾರ್ತಿಯರನ್ನು ಸ್ವಾಗತಿಸಲು ಫ್ರಾಂಚೈಸಿಯ ಬಳಿ ಪ್ರಸ್ತುತ 1.15 ಕೋಟಿ ರೂಪಾಯಿ ಮೊತ್ತವಿದೆ. ಇದರಲ್ಲಿ ಆರ್‌ಸಿಬಿ ತನ್ನ ಬೌಲಿಂಗ್ ಹಾಗೂ ಆಲ್‌ರೌಂಡರ್ ವಿಭಾಗವನ್ನು ಇನ್ನಷ್ಟು ಬಲಪಡಿಸಲು ಮಿನಿ ಹರಾಜಿನಲ್ಲಿ ಚಾಣಾಕ್ಷ ತಂತ್ರ ಹೆಣೆಯುವ ನಿರೀಕ್ಷೆಯಿದೆ. ಕಳೆದ ಆವೃತ್ತಿಯ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು ಅಭಿಮಾನಿಗಳಿಗೆ ಮತ್ತೊಮ್ಮೆ ಟ್ರೋಫಿ ಗೆದ್ದು ಕೊಡುವ ಗುರಿಯೊಂದಿಗೆ ಮ್ಯಾನೇಜ್‌ಮೆಂಟ್ ಹರಾಜಿನಂಗಳಕ್ಕೆ ಧುಮುಕಲು ಸಂಪೂರ್ಣವಾಗಿ ಸಜ್ಜಾಗಿದೆ ಎನ್ನಲಾಗುತ್ತಿದೆ. ವಿಶೇಷವಾಗಿ ಈ ಬಾರಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರನ್ನು ಉಳಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಹೆಚ್ಚಾದಂತಾಗಿದೆ.


Click it and Unblock the Notifications
