ಹೆಣ್ಮಕ್ಳೇ ಸ್ಟ್ರಾಂಗು ಗುರು: ಅಪ್ಪು ಹುಟ್ಟುಹಬ್ಬದ ದಿನವೇ ಕಪ್ ಗೆದ್ದ ಆರ್‌ಸಿಬಿ
ಭಾನುವಾರ ಕನ್ನಡಿಗರಿಗೆ ಡಬಲ್ ಖುಷಿ ಒಂದು ಕಡೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಮತ್ತೊಂದು ಕಡೆ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದ ಆರ್ ಸಿಬಿ ಮಹಿಳಾ ತಂಡ ಮೊದಲ ಬಾರಿಗೆ ಕಪ್ ಗೆದ್ದಿದೆ.
ಮಹಿಳಾ ಪ್ರೀಮಿಯರ್ ಲೀಗ್ 2024ರ ಪಂದ್ಯಾವಳಿಯಲ್ಲಿ ಸ್ಮೃತಿ ಮಂಧಾನ ಪಡೆ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಕಪ್ ಗೆದ್ದು ಸಂಭ್ರಮಿಸಿದೆ. ಅಭಿಮಾನಿಗಳ 17 ವರ್ಷಗಳ ಪ್ರಶಸ್ತಿ ಕನಸು ಇಂದು ನನಸಾಗಿದೆ.

ಮಾರ್ಚ್ 17 ಅಪ್ಪು ಹುಟ್ಟುಹಬ್ಬ, ಅಭಿಮಾನಿಗಳು ಅವರ ನೆನಪಿನಲ್ಲಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಅವರ ಹುಟ್ಟುಹಬ್ಬದಂದೇ ಆರ್ ಸಿಬಿ ಕಪ್ ಗೆದ್ದಿದೆ. ಐಪಿಎಲ್ ಆರಂಭದ ದಿನಗಳಲ್ಲಿ ಪುನೀತ್ ರಾಜ್‌ಕುಮಾರ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಯಾವಾಗಲೂ ಆರ್ ಸಿಬಿ ತಂಡಕ್ಕೆ ಬೆಂಬಲ ಕೊಡುತ್ತಿದ್ದ ಅವರು, ತಂಡದ ಅಭಿಮಾನಿಯಾಗಿದ್ದರು. ಅವರ ಮಾತಿನಂತೇ ಕಪ್ ಗೆದ್ದಿರುವ ಆರ್ ಸಿಬಿ ಮಹಿಳಾ ಮಣಿಗಳು ಹೆಣ್ಮಕ್ಳೇ ಸ್ಟ್ರಾಂಗು ಗುರು ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಹೆಸರು ಬದಲಾವಣೆ
ಮಾರ್ಚ್ 19ರಂದು ಆರ್ ಸಿಬಿ ತಂಡದ ಹೆಸರು ಬದಲಾವಣೆಯಾಗಲಿದೆ. ಹೆಸರು ಬದಲಾವಣೆ ಮಾಡುವ ಬಗ್ಗೆ ಪುನೀತ್ ಅವರ ಪತ್ನಿ ಅಶ್ವಿನ್ ಪುನೀತ್ ಅವರು ಕೂಡ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದರು. ರಾಯಲ್ ಚಾಲೆಂಜರ್ಸ್ Bangalore ಇನ್ಮುಂದೆ Bengaluru ಎಂದು ಬದಲಾವಣೆಯಾಗಲಿದೆ.
ಅಂತೂ ಇಂತೂ ಈ ಸಲ ಕಪ್ ನಮ್ದೇ ಎಂದು ಹೇಳುತ್ತಿದ್ದ ಅಭಿಮಾನಿಗಳು ಇನ್ಮುಂದೆ ಈ ಸಲ ಕಪ್ ನಮ್ದು ಎಂದು ಹೇಳಿಕೊಳ್ಳಬಹುದು. ಅಪ್ಪು ಅವರು ಎಲ್ಲಿದ್ದರೂ ಈ ಗೆಲುವನ್ನು ನೋಡಿ ಖುಷಿ ಪಟ್ಟಿರುತ್ತಾರೆ.












Click it and Unblock the Notifications