RCB Jitesh Sharma: ಆರ್‌ಸಿಬಿ ಸ್ಫೋಟಕ ಆಟಗಾರ ಜಿತೇಶ್ ಶರ್ಮಾ ಮುಂದಿನ ಆವೃತ್ತಿಯಲ್ಲಿ ಬೇರೆ ತಂಡದ ಪರ ಆಡುವುದು ಖಚಿತ

RCB Jitesh Sharma: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿ ಟ್ರೋಫಿಗೆ ಮುತ್ತಿಟ್ಟಿತು. ಈ ಬೆನ್ನಲ್ಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್‌ ಕೀಪರ್, ಸ್ಫೋಟಕ ಬ್ಯಾಟರ್ ಜಿತೇಶ್ ಶರ್ಮಾ ಅವರು ಮುಂದಿನ ಆವೃತ್ತಿಯಲ್ಲಿ ಬೇರೊಂದು ತಂಡದ ಪರ ಆಡಲಿದ್ದಾರೆ. ಹಾಗಾದ್ರೆ ಯಾವ ಟೀಂಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್‌ 18ನೇ ಆವೃತ್ತಿಯ ಫೈನಲ್‌ ಪಂದ್ಯ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದು, ಈ ವೇಳೆ ಆರ್‌ಸಿಬಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಈ ಗೆಲುವಿಗೆ ಜಿತೇಶ್‌ ಶರ್ಮಾ ಅವರ ಪಾತ್ರ ಪ್ರಮುಖವಾಗಿದೆ. ಅಷ್ಟರ ಮಟ್ಟಿಗೆ ಕೀಪಿಂಗ್, ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದೀಗ ಅವರು ಮುಂದಿನ ಆವೃತ್ತಿಯಲ್ಲಿ ಬೇರೆ ತಂಡಕ್ಕೆ ಆಡಲಿದ್ದಾರೆ.

RCB Wicketkeeper Jitesh Sharma Confirmed to Play for this Another Team Next Season

ಆರ್‌ಸಿಬಿ ಗೆಲುವಿಗೆ ಜಿತೇಶ್‌ ಶರ್ಮಾ ಅವರ ಪಾತ್ರ ಪ್ರಮುಖವಾಗಿದೆ. ಉತ್ತಮವಾಗಿ ಕೀಪಿಂಗ್‌, ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳ ಮನಸನ್ನು ಕದ್ದುಬಿಟ್ಟಿದ್ದಾರೆ. ಆದರೆ ಅವರು ಮುಂದಿನ ಆವೃತ್ತಿಯಲ್ಲಿ ಹೊಸ ತಂಡವೊಂದರ ಪರ ಕಣಕ್ಕಿಳಿಯಲಿದ್ದಾರೆ. ಅಷ್ಟಕ್ಕೂ ಅವರು ತನ್ನ ತಂಡವನ್ನು ಬದಲಿಸುತ್ತಿರುವುದು ಐಪಿಎಲ್​ನಲ್ಲಿ ಅಲ್ಲ. ಬದಲಿಗೆ ದೇಶಿ ಕ್ರಿಕೆಟ್‌ನಲ್ಲಿ ಜಿತೇಶ್ ವಿದರ್ಭ ತಂಡವನ್ನು ತೊರೆದು ಬರೋಡಾ ಪರ ಕಣಕ್ಕಿಳಿಯುವುದು ಖಚಿತ ಆಗಿದೆ.

ಕಳೆದ ಕೆಲವು ದಿನಗಳ ಹಿಂದೆ ಜಿತೇಶ್ ಶರ್ಮಾ ಮತ್ತು ಕನ್ನಡಿಗ ಕರುಣ್ ನಾಯರ್, ವಿದರ್ಭ ತಂಡದಿಂದ ಎನ್​ಒಸಿ ಪಡೆದಿದ್ದರು. ಅದರಂತೆಯೇ ಕನ್ನಡಿಗ ಕರುಣ್ ಮತ್ತೆ ತನ್ನ ತವರು ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಜಿತೇಶ್ ಶರ್ಮಾ ಬರೋಡಾ ಪರ ಬ್ಯಾಟ್ ಬೀಸುವುದು ಖಚಿತ ಆದಂತಾಗಿದೆ.

ಜಿತೇಶ್ ಶರ್ಮಾ 2025-26ರ ದೇಶೀಯ ಸೀಸನ್‌ನಲ್ಲಿ ಬರೋಡಾ ಪರ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ವಿದರ್ಭ ನಾಯಕರಾಗಿ ಜಿತೇಶ್ ಶರ್ಮಾ ಒಂದೇ ಒಂದು ಪಂದ್ಯವನ್ನ ಆಡಿರಲಿಲ್ಲ. ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಕ್ಷಯ್ ವಾಡ್ಕರ್ ಅವರಿಗೆ ಆದ್ಯತೆ ನೀಡಲಾಯಿತು. ಆದರೂ ಜಿತೇಶ್ ವಿದರ್ಭದ ವೈಟ್-ಬಾಲ್ ತಂಡದ ಭಾಗ ಆಗಿದ್ದಲ್ಲದೆ, ಕರುಣ್ ನಾಯರ್ ನಾಯಕತ್ವದಲ್ಲಿ ಆಟ ಆಡಿದ್ದರು. ಸದ್ಯ ಇದೀಗ ಬರೋಡಾ ಪರ ಆಡಲಿರುವ ಅವರ ವೃತ್ತಿಜೀವನಕ್ಕೆ, ವಿಶೇಷವಾಗಿ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಮಿಂಚಲು ತಯಾರಾಗಿದ್ದಾರೆ.

ಜಿತೇಶ್ ಶರ್ಮಾ ಅವರ ಪ್ರಥಮ ದರ್ಜೆ ವೃತ್ತಿಜೀವನವು 2015-16ರ ಸೀಸನ್​ನಿಂದ ಪ್ರಾರಂಭ ಆಯಿತು. ಆದರೆ, ಅವರು ಇಲ್ಲಿವರೆಗೆ ಕೇವಲ 10 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು 24.48ರ ಸರಾಸರಿಯಲ್ಲಿ 661 ರನ್‌ಗಳನ್ನು ಚಚ್ಚಿದ್ದಾರೆ. ಇದರಲ್ಲಿ 4 ಅರ್ಧಶತಕಗಳು ಸೇರಿವೆ. ಅದೇ ವೇಳೆ ಅವರು ಜನವರಿ 2024ರಲ್ಲಿ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯ ಆಡಿದ್ದರು. ಒಟ್ಟಿನಲ್ಲಿ ಹೇಳುವುದಾದ್ರೆ, ಜಿತೇಶ್‌ ಶರ್ಮಾ ಅವರು ಐಪಿಎಲ್‌ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಅಬ್ಬರಿಸಿ ಅಭಿಮಾನಿಗಳ ಮನಸನ್ನ ಕದ್ದಿದ್ದು, ಆರ್‌ಸಿಬಿಯಿಂದ ಅವರನ್ನು ಕೈಬಿಡುವ ಮಾತೇ ಇಲ್ಲ. ಅಷ್ಟರ ಮಟ್ಟಿಗೆ ಐಪಿಎಲ್‌ನಲ್ಲಿ ಬಲಿಷ್ಠ ತಂಡಗಳ ವಿರುದ್ಧ ಸ್ಫೋಟಕ ಪ್ರದರ್ಶನ ತೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+