RCB Vs SRH: ಲಕ್ನೋದಲ್ಲಿ ಆರ್‌ಸಿಬಿ ಅಭಿಮಾನಿಗಳ ಅಬ್ಬರ: ಎಲ್ಲೆಲ್ಲೂ ಟ್ರಾಫಿಕ್‌ ಜಾಮ್‌ ನೋಡಿ ಪೊಲೀಸರಿಗೆ ಶಾಕ್!

RCB Vs SRH: ಐಪಿಎಲ್‌ 2025ರ 65ನೇ ಹೈವೋಲ್ಟೇಜ್‌ ಪಂದ್ಯ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ ನಡುವೆ ಲಕ್ನೋದಲ್ಲಿ ನೆಡೆಯಲಿದೆ. ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭ ಆಗಲಿದ್ದು, ಇದಕ್ಕೂ ಮುಂಚೆಯೇ ಅಲ್ಲಿನ ಪೊಲೀಸರಿಗೆ ದೊಡ್ಡ ಜವಾಬ್ದಾರಿಯೊಂದು ಎದುರಾಗಿಬಿಟ್ಟಿದೆ. ಅದೇನು ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಇದುವರೆಗೂ ಆಡಿದ 17 ಆವೃತ್ತಿಗಳಲ್ಲಿ ಆರ್‌ಸಿಬಿ ತಂಡ ಒಂದೇ ಒಂದು ಬಾರಿಯೂ ಐಪಿಎಲ್‌ ಟ್ರೋಫಿ ಗೆದ್ದಿಲ್ಲ. ಆದರೂ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಎಷ್ಟು ಬಾರಿ ಸೋತ್ರೂ.. ನಮ್ಮ ತಂಡವನ್ನು ಬಿಟ್ಟುಕೊಡುವ ಮಾತೇ ಇಲ್ಲ ಎನ್ನುವ ಮಾತು ಅಭಿಮಾನಿಗಳದ್ದಾಗಿದೆ. ಈ ಬಾರಿ ಅಂದರೆ 18ನೇ ಆವೃತ್ತಿಯಲ್ಲಿ ಕಪ್‌ ಗೆಲ್ಲುವ ಭರವಸೆ ಮೂಡಿಸಿದೆ. ಅಷ್ಟರ ಮಟ್ಟಿಗೆ ಆರಂಭದಿಂದಲೂ ಇಲ್ಲಿಯವರೆಗೂ ಬ್ಯಾಟಿಂಗ್‌, ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್‌ ಕೂಡ ಪ್ರವೇಶಿಸಿದೆ.

RCB Vs SRH Lucknow Police Shocked by Crowd of RCB Fans

ಆರ್‌ಸಿಬಿ ಈಗಾಗಲೇ ಪ್ಲೇ ಆಫ್‌ ಪ್ರವೇಶ ಮಾಡಿದ್ದು, ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಳ್ಳಲು ಭರ್ಜರಿ ಸಿದ್ಧತೆ ಮಾಡಿಕೊಂದೆ. ಆದ್ದರಿಂದ ಇಂದು ನಡೆಯುವ ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯವನ್ನು ಗೆದ್ದೇ ಗೆಲ್ಲಬೇಕೆಂಬ ಪಣ ತೊಟ್ಟಿದೆ. ಇಂದಿನ ಪಂದ್ಯ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳನ್ನು ನಿಯಂತ್ರಿಸುವುದೇ ಲಕ್ನೋ ಪೊಲೀಸರಿಗೆ ಇದೀಗ ದೊಡ್ಡ ಸವಾಲಾಗಿಬಿಟ್ಟಿದೆ.

ಲಕ್ನೋದಲ್ಲಿ ಎಲ್ಲಿ ನೋಡಿದರೂ ಆರ್‌ಸಿಬಿ ಅಭಿಮಾನಿಗಳ ದಂಡೇ ಕಂಡುಬರುತ್ತಿದೆ. ಇಂದು ಮಧ್ಯಾಹ್ನದಿಂದಲೂ ವಾಹನಗಳಲ್ಲಿ ಕ್ರೀಡಾಂಗಣದತ್ತ ಪಂದ್ಯ ವೀಕ್ಷಣೆಗೆಂದು ಅಪಾಯ ಸಂಖ್ಯೆಯಲ್ಲಿ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ. ಪರಿಣಾಮ ಎಲ್ಲಾ ರಸ್ತೆಗಳಲ್ಲೂ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ಧಾರೆ. ಅಷ್ಟರ ಮಟ್ಟಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳು ಲಕ್ನೋದಲ್ಲಿದ್ದಾರೆ ಎಂದು ಇದರಿಂದಲೇ ಗೊತ್ತಾಗುತ್ತದೆ.

ಬರೀ ಕರ್ನಾಟಕದಲ್ಲಿ ಮಾತ್ರ ಆರ್‌ಸಿಬಿ ತಂಡಕ್ಕೆ ಅಭಿಮಾನಿಗಳು ಇಲ್ಲ. ಇಡೀ ದೇಶ, ಅಲ್ಲದೆ ವಿದೇಶಗಳಲ್ಲೂ ಇದ್ದಾರೆ. ಇನ್ನು ಇಂದು (ಮೇ 23) ಕೆಲವೇ ಕ್ಷಣಗಳಲ್ಲಿ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯಲಿದ್ದು, ಈ ಪಂದ್ಯ ವೀಕ್ಷಣೆಗೆ ರಾಯಲ್‌ ಅಭಿಮಾನಿಗಳ ದಂಡೇ ಸೇರಿದ್ದು, ಇದನ್ನು ಕಂಡ ಲಕ್ನೋ ಪೊಲೀಸರು ದಂಗಾದ ಘಟನೆ ನಡೆದಿದೆ.

ಕ್ವಾಲಿಫೈಯರ್ ಭವಿಷ್ಯ

* ಗುಜರಾತ್ ಟೈಟಾನ್ಸ್: ಗುಜರಾತ್ ಟೈಟಾನ್ಸ್ ತಂಡವು ಇದುವರೆಗೂ ಆಡಿದ 12 ಪಂದ್ಯಗಳಲ್ಲಿ 9ರಲ್ಲಿ ಗೆದ್ದು, 3 ಸೋಲು ಕಂಡಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ 18 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಅಲ್ಲದೆ, ಪ್ಲೇ ಆಫ್‌ ಕೂಡ ಪ್ರವೇಶ ಮಾಡಿದೆ. ಮತ್ತೊಂದೆಡೆ ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ 22 ಅಂಕಗಳನ್ನು ಪಡೆದು ಅಗ್ರಸ್ಥಾನದೊಂದಿದೆ ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಬಹುದಾಗಿದೆ.

* ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ 12 ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ 3 ಸೋಲು, 8 ಗೆಲುವು, ಒಂದು ರದ್ದಿನೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದೆ. ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ, 21 ಅಂಕಗಳೊಂದಿಗೆ ಮೊದಲ ಅಥವಾ ದ್ವಿತೀಯ ಸ್ಥಾನಕ್ಕೇರುವ ಅವಕಾಶ ಇದೆ. ಅಲ್ಲದೆ, ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಲಿದೆ.

* ಪಂಜಾಬ್ ಕಿಂಗ್ಸ್: ಪಂಜಾಬ್ ಕಿಂಗ್ಸ್ ತಂಡವು ಇದುವರೆಗೆ 12 ಪಂದ್ಯಗಳನ್ನಾಡಿದೆ. ಇವುಗಳಲ್ಲಿ 8 ಗೆಲುವು, ಮೂರು ಸೋಲು ಕಂಡಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಉಳಿದ 2 ಪಂದ್ಯಗಳಲ್ಲಿ ಗೆದ್ದರೆ, 21 ಅಂಕಗಳನ್ನು ಪಡೆಯಬಹುದು. ಅಲ್ಲದೆ. ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅವಕಾಶ ಇರಲಿದೆ.

* ಮುಂಬೈ ಇಂಡಿಯನ್ಸ್: ಮುಂಬೈ ಇಂಡಿಯನ್ಸ್ ಈವರೆಗೂ 13 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ 5ರಲ್ಲಿ ಸೋಲು, 8ರಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಉಳಿದ ಒಂದು ಪಂದ್ಯದಲ್ಲಿ ಗೆದ್ದರೆ, 18 ಅಂಕಗಳನ್ನು ಪಡೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಲು ಆರ್‌ಸಿಬಿ, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಸೋಲಿಗೆ ಕಾಯಬೇಕಿದೆ. ಇಲ್ಲದಿದ್ದರೆ, ಮೊದಲೆರಡು ಸ್ಥಾನ ಕಷ್ಟ ಎಂದೇ ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+