RCB vs SRH: ಬೆಂಗಳೂರು ಬೌಲರ್‌ಗಳ ಮೇಲೆ ಸನ್‌ರೈಸರ್ಸ್ ಸವಾರಿ: ಐಪಿಎಲ್ ಗರಿಷ್ಠ ರನ್ ಕಲೆ ಹಾಕಿದ ಸನ್
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ಐಪಿಎಲ್ 2024ರ 30ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದೆ. ಬ್ಯಾಟಿಂಗ್ ಸ್ವರ್ಗ ಎಂದೇ ಕರಿಸಿಕೊಳ್ಳುವ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ಸನ್ ತಂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತನ್ನದೇ ಗರಿಷ್ಠ ರನ್ ಕಲೆ ಹಾಕಿರುವ ದಾಖಲೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 287 ರನ್ ಕಲೆ ಹಾಕಿತು. ಸನ್ ತಂಡದ ಪವರ್ ಹಿಟರ್ ಬ್ಯಾಟರ್‌ಗಳ ಅಸಾಧಾರಣ ಬ್ಯಾಟಿಂಗ್ ಕಟ್ಟಿಹಾಕಲು ಅರ್‌ಸಿಬಿ ಬೌಲರ್‌ಗಳು ಹೈರಾಣಾದರು.

ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ
ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ (34) ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಈ ಜೋಡಿ ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 108 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು.
ಹೆಡ್ ಶತಕ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ಪಂದ್ಯದಲ್ಲಿ ಆಡಿದ ಅನುಭವ ಹೊಂದಿರುವ ಟ್ರಾವಿಸ್ ಹೆಡ್ ಬೆಂಗಳೂರು ವಿರುದ್ಧ ಅಬ್ಬರಿಸಿದರು. ಈ ಪಂದ್ಯದಲ್ಲಿ ಟ್ರಾವಿಸ್ 41 ಎಸೆತಗಳಲ್ಲಿ 9 ಬೌಂಡರಿ, 8 ಸಿಕ್ಸರ್ ಬಾರಿಸಿ 102 ರನ್ ಬಾರಿಸಿ ಆರ್ಭಟಿಸಿದರು. ಇವರು ಲಾಕಿಗೆ ವಿಕೆಟ್ ಒಪ್ಪಿಸಿದರು.
ಭರವಸೆಯ ಬ್ಯಾಟರ್ ಹೆನ್ರಿಚ್ ಕ್ಲಾಸೇನ್ ತಮ್ಮ ನೈಜ ಆಟವನ್ನು ಆಡಿದರು. ಇವರು 31 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ ನೆರವಿನಿಂದ 67 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಮಧ್ಯಮ ಕ್ರಮಾಂಕದಲ್ಲಿ ಮಾಜಿ ನಾಯಕ ಏಡೇನ್ ಮಾರ್ಕ್ರಾಮ್ ಹಾಗೂ ಅಬ್ದುಲ್ ಸಮದ್ ಆರಂಭಿಕರು ಹಾಕಿಕೊಟ್ಟ ತಳಹದಿಯಲ್ಲೇ ರನ್ ಕಲೆ ಹಾಕುತ್ತಾ ಸಾಗಿದರು. ಈ ಜೋಡಿ ರನ್ ವೇಗದ ರನ್ ಕಲೆ ಹಾಕಲು ಒತ್ತು ನೀಡಿತು. ಅಬ್ದುಲ್ ಸಮದ್ 10 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿದರು. ಮಾರ್ಕ್ರಾಮ್ 188.23ರ ಸ್ಟ್ರೈಕ್ ರೇಟ್‌ನಲ್ಲಿ 32 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ರನ್ ನೀಡಿ ಕೈ ಸುಟ್ಟುಕೊಂಡ ಬೌಲರ್ಸ್
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಎಲ್ಲ ಬೌಲರ್‌ಗಳು ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ಲಾಕಿ ಫರ್ಗುಸನ್ ಅವರ ಈ ಋತುವಿನ ಮೊದಲ ಪಂದ್ಯದಲ್ಲಿ 2 ವಿಕೆಟ್‌ಗಳನ್ನು ಪಡೆದರು. ಆದರೆ 4 ಓವರ್‌ಗಳಲ್ಲಿ 52 ರನ್‌ಗಳನ್ನು ನೀಡಿದರು. ರೀಸ್ ಟೋಪ್ಲಿ ಕೂಡ ಒಂದು ವಿಕೆಟ್ ಪಡೆದರು, 68 ರನ್ ನೀಡಿದರು. ವಿಜಯ್ ಕುಮಾರ್ ವಿಶಾಕ್ ಮತ್ತು ಯಶ್ ದಯಾಲ್ ಕೂಡ 50 ಕ್ಕೂ ಹೆಚ್ಚು ರನ್ ನೀಡಿದರು.












Click it and Unblock the Notifications