RCB vs PBKS Final: ಆರ್‌ಸಿಬಿಗೆ ಲಾಭದಾಯಕವಾಗಲಿವೆ ಪಂಜಾಬ್ ಕಿಂಗ್ಸ್‌ನ ಈ 3 ವೀಕ್ನೆಸ್‌ಗಳು
IPL 2025 RCB vs PBKS Final: ಐಪಿಎಲ್ 2025 ಫೈನಲ್ ಪಂದ್ಯ ಇನ್ನೂ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಈ ಹೈ ವೋಲ್ಟೇಜ್ ಮ್ಯಾಚ್ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಪಂಜಾಬ್‌ನ ಈ ಮೂರು ವೀಕ್ನೆಸ್‌ಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರದಾನವಾಗುವ ಸಾಧ್ಯತೆ ಹೆಚ್ಚಿದೆ. ಹಾಗಾದ್ರೆ ಅವುಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯವು ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ಸಂಜೆ 7:30 ಆರಂಭವಾಗಲಿದೆ. ಇನ್ನು ಪಂಜಾಬ್ ಕಿಂಗ್ಸ್‌ನ ಮೂರು ವೀಕ್ನೆಸ್‌ಗಳನ್ನು ಸರಿಯಾಗಿ ಬಳಸಿಕೊಂಡ್ರೆ ಬೆಂಗಳೂರು ಸುಲಭವಾಗಿ ಗೆಲ್ಲಬಹುದಾಗಿದೆ.

ಐಪಿಎಲ್‌ನಲ್ಲಿ ಇದೀಗ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಇದುವರೆಗೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದ್ದರಿಂದ ಇಂದಿನ ಪಂದ್ಯದಲ್ಲಿ ಈ ಎರಡು ತಂಡಗಳಿಗೂ ಗೆಲ್ಲಲ್ಲೇಬೇಕೆಂಬುದೇ ಒಂದು ದೊಡ್ಡ ಸವಲಾಗಿದೆ. ಆದರೂ ಹೆಚ್ಚು ಗೆಲುವಿನ ಲಕ್ ಇರುವುದು ಬೆಂಗಳೂರು ತಂಡದ ಕಡೆಗೆ. ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.
ಮೊದಲ ಕ್ವಾಲಿಫೈರ್‌ನಲ್ಲಿ ಆರ್‌ಸಿಬಿ ವಿರುದ್ಧ ಸೋತ ಪಂಜಾಬ್ ಕಿಂಗ್ಸ್ ಕ್ವಾಲಿಫೈಯರ್-2ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿತು. ಈ ಮೂಲಕ ಇಂದು ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರ್‌ಸಿಬಿ ಜೊತೆ ಫೈನಲ್ ಆಡಲಿದೆ.
ಪಂಜಾಬ್ ಕಿಂಗ್ಸ್ ವೀಕ್ನೆಸ್ ಪಾಯಿಂಟ್ಸ್
* ಫಾರ್ಮ್‌ಗೆ ಮರಳದ ಅರ್ಷ್‌ದೀಪ್ ಸಿಂಗ್: ಕಳೆದ ಐದು ಪಂದ್ಯಗಳಲ್ಲಿ ಅವರು ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದು, ನಂತರ ಕಳಪೆ ಪ್ರದರ್ಶನ ತೋರಿದ್ದಾರೆ. ಕಳೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಅಹಮದಬಾದ್‌ನಲ್ಲೇ ಮುಂಬೈ ವಿರುದ್ಧವೂ ಅವರು ಯಾವುದೇ ವಿಕೆಟ್ ಪಡೆಯದೆ 44 ರನ್‌ಗಳನ್ನು ಕೊಡುಗೆಯಾಗಿ ಬಿಟ್ಟುಕೊಟ್ಟರು. ಇದು ಸಹ ಇದು ಮುಂದುವರೆಯುವ ಸಾಧ್ಯತೆಯಿದೆ.
ಫೈನಲ್ ಪಂದ್ಯ ಸಹ ಅಹಮದಬಾದ್‌ನಲ್ಲಿ ನಡೆಯಲಿದೆ. ಈ ಕ್ರೀಡಾಂಗಣದಲ್ಲಿ ಇಂದು ಕೂಡ ಅರ್ಷ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಇಂದು ಸಹ ಉತ್ತಮ ರನ್‌ಗಳು ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ, ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಾಯಾಂಕ್ ಅಗರ್ವಾಲ್ ಮತ್ತು ಜಿತೇಶ್ ಶರ್ಮಾ ಅವರೇ ಇದರ ಲಾಭವನ್ನು ಪಡೆಯಬಹದು. ಈ ಮೂಲಕ ಪಂಜಾಬ್‌ನ ಪ್ರಮುಖ ಬೌಲರ್ ಅನ್ನು ಒತ್ತಡಕ್ಕೆ ಸಿಲುಕಿಸಲು ಆರ್‌ಸಿಬಿಗೆ ಇದೊಂದು ದೊಡ್ಡ ಅವಕಾಶವಾಗಿದೆ.
* ಯುಜ್ವೇಂದ್ರ ಚಾಹಲ್: ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮುಂಬೈ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ 3 ಓವರ್‌ಗೆ ಒಂದು ವಿಕೆಟ್ ಪಡೆದು, 39 ರನ್‌ಗಳನ್ನು ಬಿಟ್ಟುಕೊಟ್ರು. ಅಲ್ಲದೆ, ಅವರು ಸಂಪೂರ್ಣವಾಗಿ ಇನ್ನೂ ಫಿಟ್ ಆಗಿಲ್ಲದಿರುವುದು ಆರ್‌ಸಿಬಿ ತಂಡಕ್ಕೆ ಅನುಕೂಲವಾಗುವ ಸಾಧ್ಯತೆ ಹೆಚ್ಚಿದೆ. ಯಾಕಂದ್ರೆ ಈ ಹಿಂದಿನ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ಸಹ ಹೇಳಿಕೊಳ್ಳುವಷ್ಟು ಪ್ರದರ್ಶನ ತೋರಿಲ್ಲ.
* ಶ್ರೇಯಸ್ ಅಯ್ಯರ್ vs ಜೋಶ್ ಹ್ಯಾಜಲ್‌ವುಡ್: ಕ್ವಾಲಿಫೈಯರ್-2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಶ್ರೇಯಸ್ ಅಯ್ಯರ್‌ಗೆ ಖೆಡ್ಡಾ ತೋಡುವ ಸಾಧ್ಯತೆಯಿದೆ. ಇದರಿಂದ ಆರ್‌ಸಿಬಿಗೆ ಅನುಕೂಲ ಆಗಲಿದೆ.
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್, ಸುಯೇಶ್ ಶರ್ಮಾ, ಟಿಮ್ ಡೇವಿಡ್, ನುವಾನ್ ತುಷಾರ, ಮೋಹಿತ್ ರಥಿ, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್
* ಪಂಜಾಬ್ ಕಿಂಗ್ಸ್ ತಂಡ: ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್, ನೆಹಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಅಜ್ಮತುಲ್ಲಾ ಒಮರ್ಜಾಯ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಭಾಹಲ್, ಸುರಪ್ರೇತ್ ಭಾಹಲ್ ದುಬೆ, ಕ್ಸೇವಿಯರ್ ಬಾರ್ಟ್ಲೆಟ್, ವಿಷ್ಣು ವಿನೋದ್, ಯಶ್ ಠಾಕೂರ್, ಆರನ್ ಹಾರ್ಡಿ, ಕುಲದೀಪ್ ಸೇನ್, ಮಿಚೆಲ್ ಓವನ್, ಹರ್ನೂರ್ ಸಿಂಗ್, ಮುಶೀರ್ ಖಾನ್, ಪೈಲಾ ಅವಿನಾಶ್











Click it and Unblock the Notifications