Will Jacks: 25 ಎಸೆತಗಳಲ್ಲೇ ಶತಕ! ಆರ್‌ಸಿಬಿ ಬ್ಯಾಟರ್ ವಿಲ್ ಜ್ಯಾಕ್ಸ್‌ ಎಂತಹ ಸ್ಫೋಟಕ ಬ್ಯಾಟರ್ ಗೊತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್ 2024ರ ಆವೃತ್ತಿಯವಲ್ಲಿ ಅಂದುಕೊಂಡ ಆರಂಭ ಸಿಕ್ಕಿಲ್ಲ. ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಸ್ಫೋಟಕ ಬ್ಯಾಟರ್ ಮುಂಬೈ ವಿರುದ್ಧ ಕಣಕ್ಕಿಳಿಯಬೇಕು ಎನ್ನುವ ಒತ್ತಾಯ ಅಭಿಮಾನಿಗಳು ಮಾತ್ರವಲ್ಲ, ಮಾಜಿ ಕ್ರಿಕೆಟಿಗರದ್ದೂ ಆಗಿದೆ.

ಆರ್‌ಸಿಬಿ ವಿಲ್ ಜ್ಯಾಕ್ಸ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಾಜಿ ಆಟಗಾರರು, ಕ್ರಿಕೆಟ್ ಪಂಡಿತರು ಕೂಡ ಒತ್ತಾಯಿಸಿದ್ದಾರೆ. ಅಭಿಮಾನಿಗಳಂತೂ ವಿಲ್ ಜ್ಯಾಕ್ಸ್ ಅಂತಹ ಆಟಗಾರನನ್ನು ಐದು ಪಂದ್ಯಗಳು ಕೂರಿಸಿರುವುದಕ್ಕೆ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿ ಕಾರುತ್ತಿದ್ದಾರೆ.

RCB Vs MI RCB Batter Will Jacks Must Play Against MI in IPL 2024 Match Here s Why

ವಿಲ್ ಜ್ಯಾಕ್ಸ್ ಆಡಲೇಬೇಕು ಎಂದು ಒತ್ತಾಯ ಮಾಡುತ್ತಿರುವುದರ ಹಿಂದೆ ಬಲವಾದ ಕಾರಣವಿದೆ. ವಿಲ್ ಜ್ಯಾಕ್ಸ್ ಎಂತಹ ಎದುರಾಳಿಗಳನ್ನು ಧ್ವಂಸ ಮಾಡಬಲ್ಲ ಸ್ಫೋಟಕ ಬ್ಯಾಟರ್, ಬೌಲಿಂಗ್‌ನಲ್ಲೂ ಮೋಡಿ ಮಾಡಬಲ್ಲ ಆಟಗಾರ. ಅವರ ದಾಖಲೆಗಳ ಪಟ್ಟಿ ನೊಡಿದ್ರೆ ಇಂತಹ ಆಟಗಾರನನ್ನ ಐದು ಪಂದ್ಯ ಯಾಕೆ ಆಡಿಸಿಲ್ಲ ಎನ್ನುವ ಪ್ರಶ್ನೆ ನಿಮಗೂ ಬರುತ್ತದೆ.

25 ಎಸೆತಗಳಲ್ಲಿ ಶತಕ, ಒಂದೇ ಓವರ್ ನಲ್ಲಿ ಆರು ಶತಕ

ವಿಲ್ ಜ್ಯಾಕ್ಸ್ 25 ಎಸೆತಗಳಲ್ಲಿ ಶತಕ ಸಿಡಿಸಿರುವ ಆಟಗಾರ, ಅದೇ ಇನ್ನಿಂಗ್ಸ್‌ನಲ್ಲಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿದ ಸ್ಫೋಟಕ ಬ್ಯಾಟರ್. 2019ರಲ್ಲಿ ಸರ್‍ರೇ ತಂಡಕ್ಕಾಗಿ ಆಡುವ ಅವರು, ದುಬೈನಲ್ಲಿ ನಡೆದ ಟಿ10 ಪಂದ್ಯದಲ್ಲಿ ಲ್ಯಾಂಕಾಶೈರ್ ವಿರುದ್ಧ ಈ ಸಾಧನೆ ಮಾಡಿದರು.

2024ರ ಎಸ್‌ಎ ಟಿ20 ಪಂದ್ಯಾವಳಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡುವ ವಿಲ್ ಜ್ಯಾಕ್ಸ್ 42 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್ ಸೇರಿದ್ದವು. ಎಸ್‌ಎ ಟಿ20 2024 ಪಂದ್ಯಾವಳಿಯಲ್ಲಿ ಜ್ಯಾಕ್ಸ್ 10 ಪಂದ್ಯಗಳಲ್ಲಿ 245 ರನ್ ಗಳಿಸಿದ್ದಾರೆ, ಅವರ ಸ್ಟ್ರೈಕ್‌ರೇಟ್ 180.15 ಆಗಿದೆ. 10 ಪಂದ್ಯಗಳಲ್ಲಿ ಅವರು 6 ವಿಕೆಟ್ ಕೂಡ ಪಡೆದಿದ್ದಾರೆ.

ಫೆಬ್ರವರಿಯಲ್ಲ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಕೂಡ ಆಡಿರುವ ವಿಲ್ ಜ್ಯಾಕ್ಸ್ 53 ಎಸೆತಗಳಲ್ಲಿ ಅಜೇಯ 108 ಬಾರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ, 10 ಭರ್ಜರಿ ಸಿಕ್ಸರ್ ಸೇರಿದ್ದವು.

ಒಟ್ಟಾರೆ 157 ಟಿ20 ಪಂದ್ಯಗಳನ್ನಾಡಿರುವ ವಿಲ್ ಜ್ಯಾಕ್ಸ್ 29.71 ಸರಾಸರಿಯಲ್ಲಿ 4130 ರನ್ ಕಲೆಹಾಕಿದ್ದಾರೆ. ಅವರ ಸ್ಟ್ರೈಕ್‌ರೇಟ್ 158.66 ಆಗಿದೆ. 66 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರುವ ಅವರು 49 ವಿಕೆಟ್ ಕೂಡ ಪಡೆದುಕೊಂಡಿದ್ದಾರೆ.

ಇಷ್ಟೆಲ್ಲಾ ಅನುಭವ ಇರುವ ವಿಲ್‌ಜ್ಯಾಕ್ಸ್ ಯಾವುದೇ ತಂಡಕ್ಕೆ ಉತ್ತಮ ಆಸ್ತಿ. ಅದರೆ ಅವರನ್ನು ಬಳಸಿಕೊಳ್ಳುವ ಕ್ಷಮತೆ ತಂಡಕ್ಕಿರಬೇಕು ಅಷ್ಟೇ. ಸರಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವಲ್ಲೇ ಎಡವಿರುವ ಆರ್ ಸಿಬಿ ತಕ್ಕ ಬೆಲೆ ತೆತ್ತಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಾದರೂ ತಪ್ಪು ತಿದ್ದಿಕೊಂಡರೆ ಜಯದ ಹಾದಿಗೆ ಮರಳುವುದು ಸುಲಭವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+