Virat Kohli: ಕೆಕೆಆರ್ ವಿರುದ್ಧ ವಿರಾಟ್‌ ಕೊಹ್ಲಿ ಐತಿಹಾಸಿಕ ದಾಖಲೆ

Virat Kohli: ಐಪಿಎಲ್‌ 18ನೇ ಆವೃತ್ತಿಯ ಆರಂಭಿಕ ಪಂದ್ಯ ಮುಕ್ತಾಯವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಆರ್‌ಸಿಬಿ ಸಲಭವಾಗಿ ಮಣಿಸಿದೆ. ಇದೇ ವೇಳೆ ಆರ್ಸಿಬಿ ಪರ ಆಡಿದ ವಿರಾಟ್‌ ಕೊಹ್ಲಿ ಅವರು ಕೊಲ್ಕತ್ತಾ ವಿರುದ್ಧ ವಿಶೇಷ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕೋಲ್ಕತ್ತಾ ವಿರುದ್ಧ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತ್ತಾ ವಿರುದ್ಧ 1,000 ರನ್‌ಗಳನ್ನು ಪೂರ್ಣಗೊಳಿಸಿ ಹೊಸ ದಾಖಲೆಯೊಂದನ್ನು ಬರೆದಿದ್ಧಾರೆ. ವಿರಾಟ್ ಕೊಹ್ಲಿ ಈಗಾಗಲೇ ಐಪಿಎಲ್‌ನಲ್ಲಿ ಮೂರು ತಂಡಗಳ ವಿರುದ್ಧ 1,000 ರನ್ ಗಳಿಸಿದ್ದಾರೆ ಮತ್ತು ಕೆಕೆಆರ್ ಈಗ ನಾಲ್ಕನೇ ತಂಡವಾಗಿದೆ.

RCB Vs KKR Virat Kohli has created history against Kolkata In IPL 2025 Know details

ವಿರಾಟ್‌ ಕೊಹ್ಲಿ ಹೊಸ ದಾಖಲೆ: ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ನಂತರ 400 ಟಿ20 ಪಂದ್ಯಗಳನ್ನು ಆಡಿದ ಮೂರನೇ ಭಾರತೀಯ ವಿರಾಟ್ ಕೊಹ್ಲಿ ಆಗಿದ್ದಾರೆ. ಆದರೆ, ಐಪಿಎಲ್ 2025ರ ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಆರಂಭಿಕ ಪಂದ್ಯದಲ್ಲಿ ಕಿಂಗ್‌ ಕೊಹ್ಲಿ ಕೆಕೆಆರ್ ವಿರುದ್ಧ 59 ರನ್‌ಗಳನ್ನು ಬಾರಿಸುವ ಮೂಲಕ ಒಟ್ಟು 1,008 ರನ್‌ಗಳನ್ನು ಕಲೆಹಾಕಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಕೆಕೆಆರ್‌ ವಿರುದ್ಧ ದಾಖಲೆ ನಿರ್ಮಾಣ: ಪ್ರಸ್ತುತ ದಾಖಲೆಯ ಪ್ರಕಾರ, ಅವರು ಕೆಕೆಆರ್‌ ವಿರುದ್ದ 32 ಇನ್ನಿಂಗ್ಸ್‌ಗಳಲ್ಲಿ 38.48 ಸರಾಸರಿ ಮತ್ತು 134 ಸ್ಟ್ರೈಕ್ ರೇಟ್‌ನೊಂದಿಗೆ 1,008 ರನ್‌ಗಳನ್ನು ಗಳಿಸಿದ್ದಾರೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಒಂದು ಶತಕ ಮತ್ತು 6 ಅರ್ಧಶತಕಗಳನ್ನು ಗಳಿಸಿದ್ದಾರೆ ಮತ್ತು ಆ ಒಂದು ಅರ್ಧಶತಕ ಮತ್ತು ಒಂದು ಶತಕವನ್ನು ಈಡನ್ ಗಾರ್ಡನ್ಸ್‌ನಲ್ಲಿ ಬಾರಿಸಿದ್ದಾರೆ ಎಂಬುದೇ ವಿಶೇಷ.

ಅದರಲ್ಲೂ ಅವರು ಕೆಕೆಆರ್‌ ವಿರುದ್ಧ ಕೇವಲ ಒಂದು ಡಕ್ ಮತ್ತು 6 ಬಾಡಿ ನಾಟ್ ಔಟ್ ಆಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 1,000 ರನ್ ಗಳಿಸಿದ ನಾಲ್ಕನೇ ತಂಡವಾಗಿದೆ. ಐಪಿಎಲ್‌ನಲ್ಲಿ ಅವರ ಪ್ರದರ್ಶನದ ಬಗ್ಗೆ ಮತ್ತಷ್ಟು ವಿವರಿಸುವುದಾದರೆ, ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡಿದ 5 ಪಂದ್ಯಗಳಲ್ಲಿ 344 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧ ಶತಕಗಳು ಸೇರಿವೆ. ಹಾಗಾದ್ರೆ ಯಾವ್ಯಾವ ತಂಡಗಳ ಮೇಲೆ ಎಷ್ಟು ರನ್‌ಗಳನ್ನು ಚಚ್ಚಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ಯಾವ ತಂಡದ ವಿರುದ್ಧ ಎಷ್ಟು ರನ್‌?

* ಚೆನ್ನೈ ಸೂಪರ್ ಕಿಂಗ್ಸ್ - 1,053
* ದೆಹಲಿ ಕ್ಯಾಪಿಟಲ್ಸ್ - 1057
* ಗುಜರಾತ್ ಟೈಟಾನ್ಸ್ 344
* ಕೋಲ್ಕತ್ತಾ ನೈಟ್ ರೈಡರ್ಸ್ -1008*
* ಲಕ್ನೋ ಸೂಪರ್ ಜೈಂಟ್ಸ್ - 139
* ಮುಂಬೈ ಇಂಡಿಯನ್ಸ್ - 855
* ಪಂಜಾಬ್ ಕಿಂಗ್ಸ್ - 1,030
* ರಾಜಸ್ಥಾನ್ ರಾಯಲ್ಸ್ 764
* ಸನ್‌ರೈಸರ್ಸ್ ಹೈದರಾಬಾದ್ 762

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+